Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಪೋಷಕ ನಟ ಇಲ್ಲಿ ಗ್ರಂಥ ಪೋಷಕ: ಶಿವರಾಮಣ್ಣನ ಲೈಬ್ರೆರಿ

556ಬೆಂಗಳೂರಿನಲ್ಲಿ ಯಾವುದೇ ಪುಸ್ತಕ ಮೇಳಗಳು ಆದರೂ ಶಿವರಾಮಣ್ಣ ಹಾಜರು. ನಿಮಗೆ ಗೊತ್ತಿಲ್ಲ, ಅವರ ಹುಟ್ಟಿದ ಹಬ್ಬವನ್ನು ಜ್ಞಾಪಿಸುವುದು ಪುಸ್ತಕಗಳಂತೆ. ಪ್ರತಿ ಹುಟ್ಟಿದ ಹಬ್ಬಕ್ಕೂ ಒಂದೊಂದು ಪುಸ್ತಕಕೂಳ್ಳುವುದು ರೂಢಿ. ಇವರು ಬರೀ ಮಾತನಾಡಲ್ಲ. ಅದಕ್ಕೆ ಸಾಕ್ಷಿನೂ ಇಟ್ಟು ಕೊಂಡಿದ್ದಾರೆ ಅನ್ನೋದಕ್ಕೆ ಸಂಗ್ರಹಾಲಯ ನೋಡಬೇಕು. ಮೊನ್ನೆಯಷ್ಟೇ ಲೋಕಾರ್ಪಣೆ ಗೊಂಡಿದೆ.

  ಶಿವರಾಮ್‌ ಎಂದರೆ ನಟ, ನಿರ್ದೇಶಕರಷ್ಟೇ ಅಲ್ಲ. ಇವರೊಲ್ಲೊಬ್ಬ ಸಂಗ್ರ ಹಕಾರ, ಫೋಟೋಗ್ರಾಫ‌ರ್‌ ಇದ್ದಾನೆ. ಈತನಿಗೂ ನಟನಷ್ಟೇ ವಯಸ್ಸು. ಸುಮಾರು 10 ಸಾವಿರ ಪುಸ್ತಕಗಳು, ನೂರಾರು ಅಮೂಲ್ಯ ಸಿಡಿಗಳು ಜೋಳಿಗೆಯಲ್ಲಿವೆ. ಗಾಂಧೀಜಿಯ ವಾಯ್ಸ, ಎಂ.ಎಸ್‌. ಸುಬ್ಬಲಕ್ಷ್ಮೀ  ಮೊದಲ ವಿದೇಶಿ ಕಛೇರಿ, ಮೊಹ್ಮದ್‌ ರಫಿ ಗುನುಗನ್ನು ಹೀಗೆ ಶಿವರಾಮಣ್ಣನೇ ಒಂದು ಲೈಬ್ರರಿ.

ತಮ್ಮ ಪುಸ್ತಕ ಪ್ರೇಮವನ್ನು ಇತರರಿಗೂ ಹಂಚುವುದಕ್ಕೆ ಸಿದ್ಧರಾಗಿರುವ ಶಿವರಾಮಣ್ಣ, ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಹೊಸ ಗ್ರಂಥಾಲಯವನ್ನು ಪ್ರಾರಂಭಿಸಿದ್ದಾರೆ. ಜ್ಞಾನ ವಿಕಾಸ ಕೇಂದ್ರ ಎಂಬ ಹೆಸರಿನ ಈ ಗ್ರಂಥಾಲಯವನ್ನು ಇತ್ತೀಚೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.

ಈ ಗ್ರಂಥಾಲಯದಲ್ಲಿ ಯಾವುದೇ ಮೆಂಬರ್‌ಶಿಪ್‌ ಇಲ್ಲ. ಹಾಗೆಯೇ ಇಲ್ಲಿಂದ ಪುಸ್ತಕಗಳನ್ನು ಕೊಂಡು ಹೋಗುವ ಹಾಗೂ ಇಲ್ಲ. ಆಸಕ್ತರು ಬೆಳಗ್ಗಿನಿಂದ ಸಂಜೆಯವರೆಗೂ ಅಲ್ಲೇ ಕುಳಿತು, ತಮಗಿಷ್ಟವಾದ ಸಾಹಿತ್ಯವನ್ನು ಓದಬಹುದಾಗಿದೆ. ಕೆಲವು ಅಪರೂಪದ ಪುಸ್ತಕಗಳು ಬೇಕೆಂದರೆ, ಅವರಿಗೆ ಜೆರಾಕ್ಸ್‌ ಮಾಡಿಸಿಕೊಳ್ಳುವುದಕ್ಕೆ ಅನುವು ಮಾಡಿಕೊಡಲಾಗುತ್ತದಂತೆ. ಇನ್ನು ಈ ಗ್ರಂಥಾಲಯಕ್ಕೆ ಯಾರು ಬೇಕಾದರೂ ಧನಸಹಾಯ ಮಾಡಬಹುದಾಗಿದೆ. ಇಷ್ಟು, ಅಷ್ಟು ಎಂಬ ನಿಬಂಧನೆಗಳೇನೂ ಇಲ್ಲ. ಆಸಕ್ತರು ಗ್ರಂಥಾಲಯದಲ್ಲಿಟ್ಟಿರುವ ಹುಂಡಿಗೆ ತಮಗಿಷ್ಟ ಬಂದ ಹಣವನ್ನು ಹಾಕಬಹುದಾಗಿದೆ. ಆ ಹಣವನ್ನು ಗ್ರಂಥಾಲಯದ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆಯಂತೆ.

“ಇಲ್ನೋಡಿ.. ಎಲ್‌ಪಿ ಹೇಗಿದೆ ಇಂಥದ್ದು ಎಲ್ಲಿ ಸಿಗುತ್ತೆ ಹೇಳಿ ಈ ಕಾಲದಲ್ಲಿ… ಈ ಕಡೆ ಬನ್ನಿ. ಪುಸ್ತಕ ನೋಡಿ… ದೇವಾನಂದ್‌, ದಿಲೀಪ್‌ಕುಮಾರ್‌, ರಾಜ್‌ಕಪೂರ್‌ ಎಲ್ಲರೂ ನೆಹರು ಜೊತೆ ನಿಂತು ಫೋಸು ಕೊಟ್ಟಿದ್ದಾರೆ’ ಎಂದು ನೆನಪುಗಳನ್ನು ಕೆದರಿ, ಕೆದರಿ ಹೇಳುತ್ತಿದ್ದರು. ಉತ್ಸಾಹಿ ತರುಣನಂತೆ ಇಡೀ ದೊಡ್ಡ ರೂಮ್‌ ಅನ್ನು ಹಿಡಿ, ಹಿಡಿಯಾಗಿ ತೋರಿಸುತ್ತಾ ಹೋದರು ಶಿವರಾಮಣ್ಣ. ಅದರಲ್ಲಿ ಹಳೇ ಸಂಗೀತ, ಸಿನಿಮಾ, ಫೋಟೋಗ್ರಫಿ ಕ್ರೀಡೆ, ಆಧ್ಯಾತ್ಮಿಕ ಹೀಗೆ ಸುಮಾರು 28 ವಿಷಯಗಳ 10ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ.

ಇವೆಲ್ಲ ಒಂದೇ ಬೀಸಿಗೆ ದಕ್ಕಿಸಿಕೊಂಡದ್ದಲ್ಲ. ದುಡಿಮೆಯಲ್ಲಿ ಗಳಿಸಿಟ್ಟ, ಕೂಡಿಟ್ಟ ಹಣದಲ್ಲಿ ಆಸ್ತೆಯಿಂದ ಸಂಗ್ರಹಿಸಿದವು. ಬಾಲ್ಯದ ಜೊತೆಗೇ ಸಂಗ್ರಹವನ್ನು ಕಟ್ಟಿಕೊಂಡು ಬೆಳೆದವರು ಶಿವರಾಮಣ್ಣ. 8ನೇ ತರಗತಿಯಲ್ಲಿದ್ದಾಗಲೇ ಅಂಚೆ ಚೀಟಿ ಸಂಗ್ರಹಕ್ಕೆ ಇಳಿದರು. ಇದಕ್ಕೂ ಮೊದಲು ಮ್ಯಾಚ್‌ಬಾಕ್ಸ್‌ಗಳನ್ನು ಕೂಡಿಡುತ್ತಿದ್ದರು. ಆಮೇಲೆ ಹಳೇ ನಾಣ್ಯಗಳ ಸಂಗ್ರಹ. ಹಾಗೇ ಪುಸ್ತಕ. ಓದುವ ಗೀಳಿಗೆ ಬಿದ್ದಾಗ ಮನೆಯೇ ಅಕ್ಷರ ಸಾಗರವಾಯಿತು.

ಪುಸ್ತಕಗಳು ಎಂದರೆ ಹಿರಿಯ ಮನಸ್ಸು ಈಗಲೂ ಜಗ್ಗುತ್ತದೆ. ಇವರು ಒಂದೊಂದು ಕಡೆ ಅಲ್ಲ ಪುಸ್ತಕ ತಂದಿರುವುದು. ಅವಿನ್ಯೂ ರಸ್ತೆಗಳ ಫ‌ುಟ್‌ಪಾತ್‌ನಲ್ಲಿ ಸೋಮೆನಿಸಿನಿಮಾ ದಂಥ, ಮದರಾಸಿನ ಮೋರ್‌ ಮಾರುಕಟ್ಟೆಯಲ್ಲಿ ದಿಫಾಕ್ಸ್‌ ಗರ್ಲ್ಸ್ನಂಥ ಅಪರೂಪ ಪುಸ್ತಕಗಳನ್ನು ಹೆಕ್ಕಿದ್ದಾರೆ. ಯುನೈಟೆಡ್‌ ಸ್ಟೇಟ್‌ ಇನಫ‌ರ್ಮೇಷನ್‌ ಸೆಂಟರ್‌- (ಈಗಿನ ಬಾದಾಮಿ ಹೌಸ್‌) ನ್ಯಾಷನಲ್‌ ಮಾರ್ಕೆಟ್‌, ಗಾಂಧೀಬಜಾರ್‌ ಫ‌ುಟ್‌ಪಾತ್‌ಗಳಲ್ಲಿ ಮಾರುತ್ತಿದ್ದ ಹಳೇ ಪುಸ್ತಕಗಳು ಇವರ ಸಂಗ್ರಹದ ಸದಸ್ಯರಾಗಿವೆ. ಸೀತಾ ಗ್ರಾಮಾಫೋನ್‌ ಅಂಗಡಿಯಿಂದ ಅಮೂಲ್ಯವಾದ ಸಂಗೀತ ತಟ್ಟೆಗಳನ್ನು ಖರೀದಿಸಿದ್ದಾರೆ. ಹಾಗೇ ಕಳೆದು ಹೋದಾಗ ಪರಿತಪಿಸಿದ್ದಿದೆ. ಒಂದು ಸಾರಿ ಸಂಗ್ರಹ ನೋಡಲು ಬಂದವರು ಪಿಟೀಲು ಚೌಡಯ್ಯನವರ ಲೈವ್‌ ಕಾರ್ಯಕ್ರಮದ 78ಎಲ್‌ಪಿಯ ಹಾಡಿನ ಪ್ಲೇಟು ಮುರಿದು ಹಾಕಿದಾಗ ಶಿವರಾಮಣ್ಣನಿಗೆ ಇಡೀ ರಾತ್ರಿ ನಿದ್ದೆಯೇ ಬರಲಿಲ್ಲವಂತೆ. ಹೀಗೆ ಪುಸ್ತಕ, ಸಂಗೀತ ಎಂದರೆ ಶಿವರಾಮಣ್ಣನಿಗೆ ಮಕ್ಕಳಿಗಿಂತ ಒಂದು ಹಿಡಿ ಹೆಚ್ಚು ಪ್ರೀತಿ; ಕಕ್ಕುಲತೆ.

ಚಲನಚಿತ್ರಕ್ಕೆ ಸಂಬಂಧಿಸಿದ ದಿ ಮೂವಿ ಅಂಡ್‌ ಮೇಕರ್ಸ್‌, ದಿ ಫಾಕ್ಸ್‌ ಗರ್ಲ್, ರಷ್ಯಾ ಲೇಖಕ ಐನ್‌ಸ್ಟಿàನ್‌ ನಿರ್ದೇಶನದ ಬಗ್ಗೆ ಬರೆದ ಅಮೂಲ್ಯ ಪುಸ್ತಕ ತಿರುವುತ್ತಿದ್ದರೆ ಮನಸು ಗಾಂಧಿಬಜಾರಾಗುತ್ತದೆ. ಆ್ಯಕ್ಟರ್‌ ಪ್ರಿಪೇರ್ಸ್‌, ಬಿಲ್ಡಿಂಗ್‌ ಅಪ್‌ ಎ ಕ್ಯಾರಕ್ಟರ್‌ ಎನ್ನುವ ಪುಸ್ತಕಗಳು ಚಲನಚಿತ್ರ ಎನ್ನುವ ಮಾಯಾಲೋಕದ ಒಳಸುಳಿಗಳ ಬಗ್ಗೆ ಹೇಳುತ್ತವೆ.

ಇವಿಷ್ಟೇ ಅಲ್ಲ ವಾಸ್ತು, ನ್ಯೂಮಾರಾಲಜಿ, ಆಧ್ಯಾತ್ಮಿಕ ಪ್ರೀತಿ ಅಪ್ಪನ ಬಳುವಳಿ. ವಿಗಡ ವಿಕ್ರಮರಾಯರ ಬರಹಗಳು, ಶಂಕರಾಚಾರ್ಯರು, ರಾಮಕೃಷ್ಣ ಪರಮಹಂಸರು ಎಲ್ಲರೂ ಬಾಕ್ಸುಗಳಲ್ಲಿದ್ದಾರೆ. ಈವತ್ತಿಗೂ ಪುಸ್ತಕ ಕಂಡರೆ ಮನಸ್ಸು ಜಾರಿ ಬೀಳುತ್ತೆ. ಆದರೆ ಇಡಲು ಜಾಗವಿಲ್ಲ ಅಂಥ ಆಸೆ ಹಿಡಿದಿಟ್ಟುಕೊಂಡಿದ್ದಾರೆ. ಪುಸ್ತಕ ಪ್ರೀತಿಯಿಂದಲೇ ಸುಮಾರು 20ಕ್ಕೂ ಹೆಚ್ಚು ಸಂಸ್ಥೆಗಳಿಗೆ ಲೈಫ್ ಮೆಂಬರ್‌. ಕಷ್ಟಕಾಲದಲ್ಲೂ ಇವರು ಪುಸ್ತಕ ಕೊಳ್ಳುವ ಹವ್ಯಾಸ ಬಿಡಲಿಲ್ಲ.

 ಕ್ಯಾಮರ ನಂಟು
ಹಳೇ ಕಾಲದ ಹಾಡುಗಳು 45 ಎಲ್‌ಪಿ, 78 ಎಲ್‌ಪಿಗಳಲ್ಲಿ ಬೆಚ್ಚಗಿವೆ. ದಿಬೆಸ್ಟ್‌ ಆಫ್ ಮುಖೇಶ್‌, ನೂರ್‌ ಜಹಾನ್‌, ಸಿಎಚ್‌ ಆತ್ಮ, ಕೆಸಿಡೇ, ಸೈಗಾಲ್‌, ಸೂರಯ್ಯ ಇವರ ನಿಲಯದ ಕಲಾವಿದರು. ಗಾಂಧೀಜಿಯೇ ಮಾತನಾಡಿದ ಧ್ವನಿ ನೀವು ಕೇಳಬೇಕು. ಎಂ.ಎಸ್‌ ಸುಬ್ಬಲಕ್ಷ್ಮೀ ಲಂಡನ್‌ನಲ್ಲಿ ಕೊಟ್ಟ ಮೊದಲು ವಿದೇಶಿ ಕಾರ್ಯಕ್ರಮದ 4-5 ಹಾಡುಗಳ ಗುತ್ಛ ಕಿವಿಗೆ ಬಿದ್ದಾಗ ಮನಸ್ಸು ಎದ್ದು ಕೂತು ಬಿಡುತ್ತದೆ. ಮೊಹಮ್ಮದ್‌ಪೀರ್‌ ಬುದಟಛಿನ ಕುರಿತು ಸುಮಧುರ ಹಾಡುಗಳನ್ನು ಕಾಪಿಟ್ಟಿದ್ದಾರೆ. ಶಂಕರ್‌ನಾಗ್‌ ಸುಚಿತ್ರ ಪಕ್ಕದಲ್ಲಿರುವ ಪೀರ್‌ ಬಯಲು ರಂಗ ಮಂದಿರ ಉದ್ಘಾಟನೆಯಲ್ಲಿ ಅವರೇ ಹಾಡಿದ್ದ ಹಾಡನ್ನು ಹಾಕಿಸಿ ಖುಷಿ ಪಟ್ಟಿದ್ದರಂತೆ. ಗುಬ್ಬಿಕಂಪನಿಯಲ್ಲಿ ನಾಟಕ ಬರೆಯುತ್ತಿದ್ದ ಬಿ. ಪುಟ್ಟಸ್ವಾಮಯ್ಯನವರ ನಾಟಕಗಳು, ಮೊದಲ ಕನ್ನಡ ಸಿನಿಮಾ ಸಾಹಿತಿ ಬೆಳ್ಳಾವೆ ನರಹರಿ ಶಾಸಿOಉಗಳ ನಾಟಕಗಳು, ಗ್ರೀಕ್‌ ನಾಟಕಗಳನ್ನು ಕನ್ನಡಕ್ಕೆ ತಂದ ಎಸ್‌.ಜಿ. ಶಾಸಿOಉà ಅವರ ನಾಟಕಗಳು, ಕೈಲಾಸಂ ಬರಹಗಳ ಗಂಟು ಬಿಚ್ಚಿದರೆ ಮನಸು ಅರಳುತ್ತದೆ.

ಇವಿಷ್ಟೇಕ್ಕೆ ಶಿವರಾಮಣ್ಣ ಬಿಡಲಿಲ್ಲ. ಫೋಟೋಗ್ರಫಿ  ಹುಚ್ಚನ್ನು ಬಿಚ್ಚಿಟ್ಟರು.  ಫೋಟೊಗ್ರಫಿ ನಂಟು ಅಂಟಿ ಕೊಂಡದ್ದು ಅಣ್ಣನಿಂದ. ಅವರು ಬೆಡ್‌ಷೀಟ್‌ ಹಾಕಿಕೊಂಡು ತೆಗೆಯುವ ಕ್ಯಾಮೆರ ಇಟ್ಟು ಕೊಂಡಿದ್ದರು. ಅವನಿಗೆ ನಾನು ಸಹಾಯ ಮಾಡುತ್ತಿದ್ದೆ. ಹಾಗೇ, ನೋಡಿ, ನೋಡಿ ನನಗೂ ಫೋಟೋಗ್ರಫಿ ನೆತ್ತಿಗೇರಿ ಕೊಡಾಕ್‌ ಬೇಬಿ ಬ್ರೌನಿಯನ್ನು ಕೊಂಡು ಕೊಂಡೆ ಅಂಥ ತಮ್ಮಲ್ಲಿದ್ದ ಹಳೆಯ ಕೊಡಾಕ್‌ ಕ್ಯಾಮರಗಳನ್ನು ತೋರಿಸಿದರು. ನಂತರ ಕೊಡಾಕ್‌ ಬಾಕ್ಸ್‌ಗೆ ಮುಂದುವರಿಯಿತು. ಇವರು ತೆಗೆದ ವಿಶ್ವೇಶ್ವರಯ್ಯನವರ 100ನೇ ಸಮಾರಂಭದ ಛಾಯಾಚಿತ್ರವಿದೆ. ಕ್ವೀನ್‌ ಎಲಿಜಿಬಿತ್‌ ಬೆಂಗಳೂರಿಗೆ ಬಂದುದಕ್ಕೆ ಸಾಕ್ಷಿ ಇದೆ. ನೆಹರೂ ಇಂದಿರಾಗಾಂಧಿ ಓಪನ್‌ ಕಾರಲ್ಲಿ ಕುಳಿತಿರುವ ಫೋಟೊ ಸಂಗ್ರಹದ ಮೇರು ಕುತೂಹಲ.

ಬೆಂಗಳೂರಿನಲ್ಲಿ ಯಾವುದೇ ಪುಸ್ತಕ ಮೇಳಗಳು ಆದರೂ ಶಿವರಾಮಣ್ಣ ಹಾಜರು. ನಿಮಗೆ ಗೊತ್ತಿಲ್ಲ, ಅವರ ಹುಟ್ಟಿದ ಹಬ್ಬವನ್ನು ಜ್ಞಾಪಿಸುವುದು ಪುಸ್ತಕಗಳಂತೆ. ಪ್ರತಿ ಹುಟ್ಟಿದ ಹಬ್ಬಕ್ಕೂ ಒಂದೊಂದು ಪುಸ್ತಕಕೂಳ್ಳುವುದು ರೂಢಿ. ಇವರು ಬರೀ ಮಾತನಾಡಲ್ಲ. ಅದಕ್ಕೆ ಸಾಕ್ಷಿನೂ ಇಟ್ಟು ಕೊಂಡಿದ್ದಾರೆ ಅನ್ನೋದಕ್ಕೆ ಸಂಗ್ರಹಾಲಯ ನೋಡಬೇಕು.

ಎಲ್ಲಿ- 2615, ಶ್ರೀ ಪದ್ಮಾಲಯ, 8ನೇ ಎ ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಬನಶಂಕರಿ ಎರಡನೇ ಹಂತ(ಬನಶಂಕರಿ ಅಂಚೆ ಕಛೇರಿ ಬಳಿ)
Read more at http://www.udayavani.com/kannada/news/multifaceted/171821/supporting-actor-in-a-supporting-book-here-sivaramannana-library#DTjHBmEfqLDLsPVu.99

No Comments

Leave A Comment