Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಕೊಲ್ಲಾಸುರನ ಕೊಂದ ಊರು-ಕೊಲ್ಲೂರು : ಮೂಕಾಂಬಿಕೆಯ ತವರು

8ಉಡುಪಿ ಜಿಲ್ಲೆಯ  ಕುಂದಾಪುರ ತಾಲೂಕಿನಲ್ಲಿರುವ  ಒಂದು ಚಿಕ್ಕ ಪಟ್ಟಣವೇ ಶ್ರೀ ಕ್ಷೇತ್ರ  ಕೊಲ್ಲೂರು.  ಇಲ್ಲಿ  ಪಾರ್ವತಿಯ  ಅವತಾರವಾದ  ಶಕ್ತಿ, ದುರ್ಗೆ, ಕಾಳಿ, ಅಂಬಿಕೆ  ಎಂತೆಲ್ಲಾ ಕರೆಯಲ್ಪಡುವ ದೇವಿ ನೆಲೆಸಿದ್ದಾಳೆ. ಅವಳೇ ಶ್ರೀ  ಕೊಲ್ಲೂರು  ಮೂಕಾಂಬಿಕಾದೇವಿ.  ಒಂದು ದಂತೆ ಕಥೆಯ ಪ್ರಕಾರ  ಈ ದೇವಿಯು  ಬೆಳಗ್ಗಿನ  ಸಮಯದಲ್ಲಿ   ಕೇರಳದ   ಒಂದು  ಪ್ರಸಿದ್ಧ  ದೇವಾಲಯದಲ್ಲಿ ಭಕ್ತರನ್ನು ಹರಸಿ  ನಂತರದ  ಸಮಯದಲ್ಲಿ  ಕರ್ನಾಟಕದಲ್ಲಿರುವ  ತ‌ನ್ನ  ತವರು  ನೆಲೆಗೆ ಬಂದು ಸೇರುತ್ತಾಳೆ  ಎನ್ನಲಾಗುತ್ತಿದೆ. ಆ  ಕಾರಣದಿಂದ  ಬರೀ   ಕರ್ನಾಟಕ ಮಾತ್ರವಲ್ಲ   ಕೇರಳದಿಂದಲೂ  ಸಹಸ್ರಾರು ಭಕ್ತರು ಈಕೆಯ ದರ್ಶನ ಭಾಗ್ಯ  ಕೋರಿ   ಈ ದೇವಾಲಯಕ್ಕೆ   ಭೇಟಿ ನೀಡುತ್ತಾರೆ.

ಕೊಡಚಾದ್ರಿ ಶಿಖರದ ತ‌ಪ್ಪಲು ಪ್ರದೇಶದಲ್ಲಿ ಈ  ಮೂಕಾಂಬಿಕಾ ದೇವಿಯ ದೇವಸ್ಥಾನವು ನೆಲೆಗೊಂಡಿದೆ.   ಶಿವ ಮತ್ತು ಶಕ್ತಿ   ಈ ಇಬ್ಬರನ್ನೂ ಸಂಯೋಜಿಸಿರುವ  ಜ್ಯೋತಿರ್ಲಿಂಗದ  ಸ್ವರೂಪದಲ್ಲಿ  ಈ ದೇವತೆಯು   ಕಂಡುಬರುತ್ತಾಳೆ. ಶ್ರೀಚಕ್ರದ  ಮೇಲೆ  ಸ್ಥಾಪಿಸಲಾಗಿರುವ  ದೇವತೆಯ  ಪಂಚಲೋಹದ ವಿಗ್ರಹವನ್ನು ಆದಿ ಶಂಕರಾಚಾರ್ಯರು  ಈ ಸ್ಥಳಕ್ಕೆ  ತಾವು  ಭೇಟಿ ನೀಡಿದ  ಸಂದರ್ಭದಲ್ಲಿ  ಪ್ರತಿಷ್ಠಾಪಿಸಿದರು  ಎನ್ನಲಾಗುತ್ತಿದೆ.   ಸೌಪರ್ಣಿಕಾ ನದಿಯ ತ‌ಟದಲ್ಲಿ  ಸೋಂಪಾಗಿ   ಬೆಳೆದ ಹಸಿರು ಹುಲ್ಲಿನಿಂದಾವೃತ್ತವಾದ ಬೆಟ್ಟದ ತಪ್ಪಲಿನಲ್ಲಿ   ನೆಲೆನಿಂತಿರುವ   ಈ ದೇವಸ್ಥಾನಕ್ಕೆ  ವರ್ಷಪೂರ್ತಿ  ಲಕ್ಷಗಟ್ಟಲೇ  ಯಾತ್ರಾರ್ಥಿಗಳು   ಭೇಟಿ ನೀಡಿ ತಮ್ಮ ಇಷ್ಟಾರ್ಥ  ಕೋರಿ ದೇವಿಯಲ್ಲಿ   ಬೇಡಿಕೊಳ್ಳುತ್ತಾರೆ.  ಈ  ಮೂಕಾಬಿಂಕಾ ದೇವಿಯು   ಶಕ್ತಿ,  ಸರಸ್ವತಿ ಮತ್ತು ಮಹಾಲಕ್ಷಿ$¾ಯ ಒಂದು  ಅವತಾರ   ಎಂಬುದಾಗಿ  ಭಕ್ತಾದಿಗಳ  ನಂಬಿಕೆ. ಈ  ತಾಯಿ ಮೂಕಾಂಬಿಕೆ  ಈ  ಸ್ಥಳದಲ್ಲಿ ಬಂದು  ನೆಲೆಸಲು ಒಂದು ಐತಿಹ್ಯವೇ ಇದೆ.

ಸ್ಥಳ ಪುರಾಣದಂತೆ ಹಿಂದೆ  ಈ  ಸ್ಥಳದಲ್ಲಿ  ಕೌಮಾಸುರನೆಂಬ  ರಾಕ್ಷಸ  ವಾಸಿಸುತ್ತಿದ್ದನು.   ಆತ  ತನ್ನ  ಮಾಯಾ ಶಕ್ತಿಯಿಂದ   ಎಲ್ಲರಿಗೂ ಹಿಂಸಿಸುತ್ತಿದ್ದ.   ದೇವತೆಗಳನ್ನೂ ಸಹ  ಬಿಟ್ಟಿರಲಿಲ್ಲ. ಹೀಗಿರುವಾಗ   ಒಮ್ಮೆ   ಈ  ರಾಕ್ಷಸನಿಗೆ ತನ್ನ  ಅಂತ್ಯ  ಸನ್ನಿತ‌ವಾಗಿದೆ  ಎಂದು ಭಾಸವಾಯಿತು.  ಆಗ ಅವನು  ಅಮರತ್ವವನ್ನು   ಪಡೆಯಲು   ಶಿವನನ್ನು  ಕುರಿತು   ಅತ್ಯಂತ  ಘೋರ ತಪಸ್ಸನ್ನಾಚರಿಸಲು ಪ್ರಾರಂಭಿಸಿದನು.   ಆಗ   ದೇವತೆಗಳೆಲ್ಲಾ  ಸರಸ್ವತಿ ದೇವಿಗೆ ಮೋರೆ ಹೋಗಿ  ಹೇಗಾದರೂ ಮಾಡಿ ಈ  ರಾಕ್ಷಸನಿಂದ ತಮ್ಮನ್ನು   ರಕ್ಷಿಸುವಂತೆ  ಕೇಳಿಕೊಂಡರು.   ಆಗ   ಸರಸ್ವತಿ ಎಲ್ಲರಿಗೂ ಅಭಯ ಹಸ್ತ ನೀಡಿದಳು.   ಹೀಗಿರುವಾಗ   ಈ ರಾಕ್ಷಸನ   ತಪ್ಪಸ್ಸಿಗೆ  ಮೆಚ್ಚಿ  ಶಿವನು  ಪ್ರತ್ಯಕ್ಷನಾಗಿ  ವರ  ಬೇಡಿಕೋ ಎಂದು ಹೇಳಿದಾಗ   ಸರಸ್ವತಿ ಈ  ರಾಕ್ಷಸನಿಗೆ ಮಾತು ಬರದಂತೆ  ಮೂಕನನ್ನಾಗಿಸಿದಳು.  ಹಾಗಾಗಿ   ಶಿವನಿಂದ  ಯಾವ  ವರವನ್ನೂ  ಪಡೆಯದೇ  ದೈತ್ಯ   ಫ‌ಲನಾಗಿ  ಮೂಕಾಸುರನಾದ.   ಇದರಿಂದ  ಕುಪಿತನಾದ  ಆ ರಾಕ್ಷಸ   ಎಲ್ಲರಿಗೂ  ಇನ್ನಷ್ಟು  ಉಪಟಳ ನೀಡಲು ಪ್ರಾರಂಭಿಸಿದಾಗ  ಎಲ್ಲ  ದೇವತೆಯರೂ ಸೇರಿ ಇನ್ನೊಬ್ಬ  ದೇಯನ್ನು   ಸೃಷ್ಟಿಸಿ  ಅವಳಿಗೆ  ತಮ್ಮೆಲ್ಲಾ   ಶಕ್ತಿಯನ್ನು   ಧಾರೆಯೆರೆದು    ಮೂಕಾಸುರನೊಂದಿಗೆ ಯುದ್ಧಕ್ಕೆ  ಕಳುಹಿಸಿದರು.   ಆಗ  ಆ ದೇವತೆ  ಮೂಕಾಸುರನನ್ನು  ಸಂಹರಿಸಿ  ಮೂಕಾಂಬಿಕೆಯಾಗಿ   ಈ ಕ್ಷೇತ್ರದಲ್ಲಿ  ನೆಲೆಸಿದಳು   ಎಂಬ ಐತಿಹ್ಯವಿದೆ.      ದೇವಿಯು  ಮೂಕಾಸುರನನ್ನು   ಸಂಹರಿಸಿದ  ಸ್ಥಳವು   ಇಂದಿಗೂ    ಇಲ್ಲಿದ್ದು   ಅದನ್ನು   ಮರಣಕಟ್ಟೆ  ಎಂದೇ ಕರೆಯಲಾಗುತ್ತದೆ.

ಇನ್ನು  ಮೂಕಾಂಬಿಕೆ ದೇವಿಯ ಸನ್ನಿಧಾನದಲ್ಲಿರುವ   ಇನ್ನೊಂದು   ದೇವಾಲಯ ವೆಂದರೆ  ಚಂದ್ರಮೌಳೀಶ್ವರ ದೇವಾಲಯ. ಇಲ್ಲಿ   ಶಿವನು ಚಂದ್ರಮೌಳೀಶ್ವರನಾಗಿ ನೆಲೆಸಿರುವ ಸನ್ನಿಧಾನವು  ಸಾಕಷ್ಟು  ಪ್ರಾಮುಖ್ಯತೆಗಳಿಸಿದೆ.   ಕಾರಣ  ಚಂದ್ರಮೌಳೀಶ್ವರನ   ಗ್ರಹವನ್ನು   ಸ್ವತಃ   ಶ್ರೀಶಂಕರರೇ ಖುದ್ದಾಗಿ   ಪ್ರತಿಷ್ಠಾಪಿಸಿದ್ದಾರೆನ್ನಲಾಗುತ್ತಿದೆ.   ಇದರ ಜೊತೆಗೆ ಶ್ರೀಸುಬ್ರಹ್ಮಣ್ಯ,  ಪಂಚಮುಖ  ಗಣಪತಿ, ಶ್ರೀಪ್ರಾಣಲಿಂಗೇಶ್ವರ, ಶ್ರೀನಂಜುಂಡೇಶ್ವರ, ಆಂಜನೇಯ, ಶ್ರೀ ವೆಂಕಟರಮಣ ಮುಂತಾದ ದೇವಾಲಯಗಳಿವೆ.

ಈ  ಮೂಕಾಂಬಿಕೆ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ ನವರಾತ್ರಿ ಉತ್ಸವ.   9 ದಿನಗಳ ಕಾಲ  ಇಲ್ಲಿ   ಸಾಕಷ್ಟು  ಶೇಷ  ಪೂಜೆಗಳು ನಡೆಯುತ್ತವೆ.   ಅಲ್ಲದೇ  ನವರಾತ್ರಿಯ ಕೊನೆಯ ದಿನ ಇಲ್ಲಿನ  ಸರಸ್ವತಿ ಮಂಟಪದಲ್ಲಿ  ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸದ ದೀಕ್ಷೆಯನ್ನು  ನೀಡಲಾಗುತ್ತದೆ.

 ತಲುಪುವ  ಮಾರ್ಗ 

ಕುಂದಾಪುರ ತಾಲೂಕಿನಿಂದ 38 ಕ್ರಿ.ಮೀ.  ಉಡುಪಿಯಿಂದ  75 ಕಿ.ಮೀ. ಹಾಗೂ ಬೆಂಗಳೂರಿನಿಂದ 458 ಕಿ.ಮೀ  ದೂರದಲ್ಲಿರುವ ಶ್ರೀಕ್ಷೇತ್ರ  ಕೊಲ್ಲೂರಿಗೆ  ಮೂಕಾಂಬಿಕಾ ರಸ್ತೆಯವರೆಗೆ  ರೈಲು ಲಭ್ಯವಿದ್ದು ,  ಬೆಂಗಳೂರು,   ಉಡುಪಿ ಹಾಗೂ ಕುಂದಾಪುರಗಳಿಂದ  ಬಸ್ಸುಗಳು  ಸಹ ದೊರೆಯುತ್ತವೆ.

No Comments

Leave A Comment