Log In
BREAKING NEWS >
ಸೆ.23ರ೦ದು ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶದಲ್ಲಿ ಶ್ರೀಅನ೦ತಚತುರ್ದಶಿ (ನೋಪಿ)ಮಹೋತ್ಸವವು ಜರಗಲಿದೆ....ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ

dasara

ಮೈಸೂರು: ಮೈಸೂರಿನಲ್ಲಿ ದಸರಾ ಮಹೋತ್ಸವಕ್ಕೆ ಕವಿ ಚನ್ನವೀರ ಕಣವಿ ಚಾಲನೆ ನೀಡಿದ್ದಾರೆ. ಶನಿವಾರ ಬೆಳಗ್ಗೆ  ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ನಡೆದ ನಂತರ ನಾಡಹಬ್ಬಕ್ಕೆ ಚಾಲನೆ ನೀಡಲಾಯಿತು.chamu
ಈ ಸಂದರ್ಭದಲ್ಲಿ ಕಣವಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿದ್ದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಅಶ್ವಿನಿ ಪೊನ್ನಪ್ಪ, ಅಂತಾರಾಷ್ಟ್ರೀಯ ಪ್ಯಾರಾ ಅಥ್ಲಿಟ್ ದೀಪಾ ಮಲ್ಲಿಕ್ ಅವರನ್ನು ಸಿಎಂ ಸನ್ಮಾನಿಸಿದರು.

ಪ್ರಸ್ತುತ ಕಾರ್ಯಕ್ರಮದಲ್ಲಿ ಮಾತನಾಡಿದ  ಸಿಎಂ,  ರಾಜ್ಯದಲ್ಲೀಗ ಬಿಕ್ಕಟ್ಟು ಪರಿಸ್ಥಿತಿ ಎದುರಾಗಿದೆ. ಹೀಗಾಗಿ ದಸರಾ ಆಚರಣೆ ಸರಳವಾಗಿದೆ. ಬರಗಾಲದ ಕಾರಣ ಕಳೆದ ಬಾರಿಯೂ ದಸರಾ ಸರಳವಾಗಿತ್ತು. ಬರಗಾಲದ ಜೊತೆಗೆ ಈ ವರ್ಷ ಕಾವೇರಿ ಬಿಕ್ಕಟ್ಟು ಎದುರಾಗಿದೆ.

ಚನ್ನವೀರ ಕಣವಿ ಅವರು ಸಜ್ಜನ ಕವಿ. ದಸರಾ ಉದ್ಘಾಟನೆಗೆ ಅವರು ಬಂದಿರುವುದು ಸಂತಸ ತಂದಿದೆ. ಸರ್ಕಾರ ಮತ್ತು ನಾಡಿನ ಜನರ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.

ಕನ್ನಡ ಭಾಷೆ, ನೆಲ, ಜಲದ ರಕ್ಷಣೆ ಆಗಬೇಕು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕಾಣಬೇಕು. ರಾಜ್ಯದ ಜನತೆ ಸಹೋದರ ಭಾವನೆಯಿಂದ ಜೀವನ ಸಾಗಿಸಬೇಕು. ನಾಡು ಸಮೃದ್ಧವಾಗಿರಬೇಕು ಎಂದು ಚಾಮುಂಡೇಶ್ವರಿ ಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಕಾವೇರಿ ವಿವಾದ ಬಗೆಹರಿಯಲಿ. ರಾಜ್ಯಕ್ಕೆ ನ್ಯಾಯ ಸಿಗಲಿ ಎಂದೂ ಪ್ರಾರ್ಥಿಸಿದ್ದೇನೆ.

ಕಾವೇರಿ ಕಣಿವೆ ಪ್ರದೇಶದಲ್ಲಿ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. 257 ಟಿಎಂಸಿ ನೀರು ಬರಬೇಕಿತ್ತು. ಬಂದಿದ್ದು 129 ಟಿಎಂಸಿ ಮಾತ್ರ. ಶೇ. 47ರಷ್ಟು ಕೊರತೆ ಉಂಟಾಗಿದೆ. ಹೀಗಾಗಿ ಬೆಳೆಗಳನ್ನು ಹಾಕದಂತೆ ರೈತರಿಗೂ ಮನವಿ ಮಾಡಬೇಕಾಯಿತು. ಈಗ‌ ಸಂಗ್ರಹವಾಗಿರುವ ನೀರು ಕುಡಿಯುವ ಉದ್ದೇಶಕ್ಕೆ ಬೇಕು. ಆದ್ದರಿಂದ ತಮಿಳುನಾಡಿಗೆ ನೀರು ಬಿಡುವುದಿಲ್ಲ ರಾಜ್ಯ ಸರ್ಕಾರ ಹೇಳಿರುವುದಾಗಿ ಸಿಎಂ ತಿಳಿಸಿದ್ದಾರೆ.

palace-1

mad_7406
No Comments

Leave A Comment