Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪಾಕ್‌ಗೆ ನುಗ್ಗಿ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದ ಭಾರತದ ಸೇನೆ-7ಉಗ್ರರ ಅಡಗುತಾಣಗಳ ಮೇಲೆ ದಾಳಿ/7 terror launch pads taken out, strikes three km across LoC: Army

bsf1ಹೊಸದಿಲ್ಲಿ : ಉರಿ ಸೇನಾ ನೆಲೆಯ ಮೇಲೆ ಉಗ್ರ ದಾಳಿಯ ಬಳಿಕ ಪಾಕಿಸ್ಥಾನದೊಂದಿಗೆ ಯುದ್ಧ  ಸನ್ನದ್ಧ ಸ್ಥಿತಿ  ನಿರ್ಮಾಣವಾಗಿರುವ ವೇಳೆಯಲ್ಲೇ ಭಾರತದ ಸೈನಿಕರು ದಿಟ್ಟ ಹೆಜ್ಜೆ ಎನ್ನುವಂತೆ ಪಾಕ್‌ ಗಡಿಯೊಳಗೆ ಪ್ರವೇಶಿಸಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿ ದ್ದಾರೆ.

ದೆಹಲಿಯಲ್ಲಿ  ಗುರುವಾರ ಉರಿ ದಾಳಿಯ ಕುರಿತು ಸಂಪುಟದ ರಕ್ಷಣೆಯ ಸಮಿತಿಯ ಉನ್ನತ ಮಟ್ಟದ ಸಭೆ ನಡೆದ ಬಳಿಕ ಲೆಪ್ಟಿನೆಂಟ್‌ ಜನರಲ್‌ ರಣಬೀರ್‌ ಸಿಂಗ್‌ ಅವರು ಸುದ್ದಿಗೋಷ್ಠಿ ನಡೆಸಿ ಕಳೆದ ರಾತ್ರಿ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ನಮ್ಮ ಸೈನಿಕರು ತೆರಳಿ ಉಗ್ರರ ವಿರುದ್ಧ ಸರ್ಜಿಕಲ್‌ ಸ್ಟ್ರೈಕ್ ಕಾರ್ಯಾಚರಣೆ ನಡೆಸಿರುವ ಮಾಹಿತಿ ನೀಡಿದ್ದಾರೆ.
pl

ಪಿಓಕೆಯಲ್ಲಿ ನಾವು ಕಾರ್ಯಾಚರಣೆ ನಡೆಸಿರುವ ಕುರಿತು ಪಾಕ್‌ನ ಡಿಜಿಎಂಒ ಅವರಿಗೂ ಮಾಹಿತಿ ನೀಡಿದ್ದು, ಉಗ್ರ ರ ವಿರುದ್ಧ ಕಾರ್ಯಾಚರಣೆಗೆ ಅವರ ನೆರವೂ ಸಿಗುವ ಭರವಸೆ ಇದೆ ಎಂದರು.  ಇಂತಹ ದಾಳಿಯನ್ನು ಮುಂದಿನ ದಿನಗಳಲ್ಲಿ ಮತ್ತೆ ಕೈಗೊಳುವ ಇರಾದೆ ನಮ್ಮ ಮುಂದಿಲ್ಲ .ಆದರೆ  ಪಾಕ್‌ನ ಉಗ್ರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಸೀಮಿತ ಕಾರ್ಯಚರಣೆ ನಡೆಸಲು ನಾವು ಸಿದ್ಧವಾಗಿದ್ದೇವೆ ಎನ್ನುವ ಎಚ್ಚರಿಕೆ ನೀಡಿದ್ದೇವೆ. ನಾವು ನಡೆಸಿದ ದಾಳಿಯಲ್ಲಿ ಉಗ್ರರು ,ಉಗ್ರರ ಬೆಂಬಲಿಗರ ಪ್ರಾಣ ಹಾನಿಯಾಗಿದ್ದು,ವ್ಯಾಪಕ ಹಾನಿ ಸಂಭವಿಸಿದೆ ಎಂದು ತಿಳಿಸಿದರು.

ಉರಿ ದಾಳಿಯ ಬಳಿಕ ಪಾಕ್‌ನಿಂದ 20ಕ್ಕೂ ಹೆಚ್ಚು ಬಾರಿ ಉಗ್ರರು ಗಡಿ ನುಸುಳಲು ಯತ್ನಿಸಿದ್ದು ನಮ್ಮ ಸೇನೆ ಅದನ್ನು ವಿಫ‌ಲಗೊಳಿಸಿದೆ. ಗಡಿಯಲ್ಲಿ ಸೈನಿಕರು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ ಎಂದು ರಣ್‌ಬೀರ್‌ ತಿಳಿಸಿದರು.

ದಿಟ್ಟ ಪ್ರತ್ಯುತ್ತರ

ಗೊಡ್ಡು ಬೆದರಿಕೆ ಗಳನ್ನು ಒಡ್ಡಿ ಬೆದರಿಸುತ್ತಿದ್ದ ಪಾಕ್‌ಗೆ ದಿಟ್ಟ ಪ್ರತ್ಯುತ್ತರವಾಗಿ ನಡೆಸಿರುವ ಈ ಕಾರ್ಯಾಚರಣೆ ಭಾರತ ನೀಡಿರುವ ದೊಡ್ಡ ಶಾಕ್‌ ಆಗಿದ್ದು, ಕಾರ್ಯಾಚರಣೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದೆ.

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ  ಗಡಿ ನುಸಳಲು ಸಿದ್ಧವಾಗುತ್ತಿದ್ದ ಉಗ್ರರ ಶಿಬಿರಗಳನ್ನು ಗುರಿಯಾಗಿರಿಸಿಕೊಂಡು 6 ಕಡೆ ಭಾರತೀಯ ಸೈನಿಕರು ಸೀಮಿತ ದಾಳಿ ನಡೆಸಿದ್ದು ದಾಳಿಯಲ್ಲಿ ಹಲವು ಉಗ್ರರು ಶಿಬಿರಗಳು ನಾಶವಾಗಿರುವ ಬಗ್ಗೆ ವರದಿಯಾಗಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಏನಿದು ಸರ್ಜಿಕಲ್‌ ಸ್ಟ್ರೈಕ್ ?

ಸೇನಾ ಪಡೆಗಳು ನಿರ್ದಿಷ್ಟ ಪ್ರದೇಶವನ್ನು ಗುರಿಯಾಗಿರಿಸಿಕೊಂಡು ನಡೆಸುವ ಭಾರಿ ದಾಳಿ ಸರ್ಜಿಕಲ್‌ ಸ್ಟ್ರೈಕ್‌.ದಾಳಿಯಲ್ಲಿ ಗುರಿಯಾಗಿರಿಸಿಕೊಂಡಿರುವ ಪ್ರದೇಶಗಳು ಮಾತ್ರ ಹಾನಿಯಾಗುತ್ತದೆಯಲ್ಲದೆ ಅಮಾಯಕರ ಪ್ರಾಣ ಹಾನಿ ಯಾಗುವ ಸಾಧ್ಯತೆಗಳಿರುವುದಿಲ್ಲ.

ಸಂಜೆ ಸರ್ವಪಕ್ಷ ಸಭೆ 

ಪಾಕ್‌ಗೆ ದಿಟ್ಟ ಉತ್ತರ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ಸರ್ವ ಪಕ್ಷ ಸಭೆಯನ್ನು ಕರೆದಿದ್ದಾರೆ.

ಸೇನಾ ಕಾರ್ಯಾಚರಣೆಗೆ ಕಾಂಗ್ರೆಸ್‌ ಸ್ವಾಗತ 

ನಮ್ಮ ಸೈನಿಕರು ನಡೆಸಿರುವ ಕಾರ್ಯಾಚರಣೆಯನ್ನು ಕಾಂಗ್ರೆಸ್‌ ಪಕ್ಷ ಸ್ವಾಗತಿಸಿದೆ.

New Delhi, Sep 29 (PTI): India conducted surgical strikes on terror launch pads last night across the Line of Control (LoC) and inflicted significant casualties and heavy damages.

The announcement of the sudden action by the army to target terrorists was made by the DGMO Lt Gen Ranveer Singh at a hurriedly called news conference during which External affairs ministry spokesman Vikas Swarup was also present.

Gen Singh said India shared with Pak army details of the surgical strikes which followed “very specific information” that terrorists were positioning themselves in the launch pads along the LoC.

Details of duration of the surgical strikes or when it was conducted or the place was not immediately given.

“Indian Army conducted surgical strikes last night on terror launch pads across the Line of Control(LoC),” Singh said, adding India was ready for any kind of contingency.

Gen Singh said heavy damages were caused to the terror camps and there were significant casualties, adding that as of now there was no plan for further operation.

Sources said that at least two terror camps were struck during the surgical strikes.
“We can’t allow terrorists to operate across the LoC. There has been a surge in infiltration,” Gen Singh said.

Gen Singh said the operation to neutralise terrorists has since ceased and “we don’t have any plans for any further operation as of now” but added the armed forces will not allow terrorists to carry out any attacks in J and K or any major Indian cities.

He said the strikes were launched after getting “very specific and credible” intelligence input that the infiltrators were being pushed to carry out attacks in Jammu and Kashmir and in some major Indian cities.

No Comments

Leave A Comment