Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಉಗ್ರರ ವಿರುದ್ಧ ಪಾಕ್‌ ಕಠಿನ ಕ್ರಮ: ಭಾರತಕ್ಕೆ ಅಮೆರಿಕದ ಭರವಸೆ

doval-riceವಾಷಿಂಗ್ಟನ್‌ : ಪಾಕಿಸ್ಥಾನವು ತನ್ನಲ್ಲಿನ ಭಯೋತ್ಪಾದಕ ಸಮೂಹಗಳ ವಿರುದ್ಧ ಕಠಿನ ಕ್ರಮತೆಗೆದುಕೊಳ್ಳುವುದೆಂಬ ವಿಶ್ವಾಸ ತನಗಿದೆ ಎಂದು ಅಮೆರಿಕ ಭಾರತಕ್ಕೆ ತಿಳಿಸಿದೆ.

ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿಯಾಗಿರುವ ಸುಸಾನ್‌ ರೈಸ್‌ ಅವರು ಭಾರತದ ಭದ್ರತಾ ಸಲಹೆಗಾರ ಅಜಿತ್‌ ದೋವಾಲ್‌ ಅವರನ್ನು ಭೇಟಿಯಾಗಿ ಪಾಕ್‌ ಉಗ್ರರು ಸೆಪ್ಟಂಬರ್‌ 18ರಂದು ನಡೆಸಿದ್ದ ಉರಿ ಸೇನಾ ಶಿಬಿರದ ಮೇಲಿನ ದಾಳಿಯನ್ನು ಬಲವಾಗಿ ಖಂಡಿಸಿದರು.

ಅಮೆರಿಕವು ಗುರುತಿಸಿರುವ ಪಾಕ್‌ ಉಗ್ರರು ಹಾಗೂ ಉಗ್ರ ಸಮೂಹದ ವಿರುದ್ಧ ಪರಿಣಾಮಕಾರಿ ಕ್ರಮತೆಗೆದುಕೊಳ್ಳುವುದೆಂಬ ವಿಶ್ವಾಸ ಶ್ವೇತಭವನಕ್ಕಿದೆ ಎಂದು ರೈಸ್‌ ಅವರು ದೋವಾಲ್‌ಗೆ ತಿಳಿಸಿದರು.

ವಿಶ್ವಾದ್ಯಂತ ಭಯೋತ್ಪಾದನೆ ಕೃತ್ಯ ಎಸಗಿರುವ ಉಗ್ರರನ್ನು ಕಾನೂನಿನಡಿ ಶಿಕ್ಷಿಸುವ ತನ್ನ ಬದ್ಧತೆಯನ್ನು ಮತ್ತು ಆ ನಿಟ್ಟಿನಲ್ಲಿನ ತನ್ನ ಯತ್ನಗಳನ್ನು ಅಮೆರಿಕವು ದುಪ್ಪಟ್ಟುಗೊಳಿಸಿದೆ ಎಂದು ರೈಸ್‌ ಅವರು ದೋವಾಲ್‌ಗೆ ಮನವರಿಕೆ ಮಾಡಿದರು.

No Comments

Leave A Comment