Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಗಡಿಯಲ್ಲಿ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ!

uri-ptiಶ್ರೀನಗರ: ಅಪ್ರಚೋದಿತ ದಾಳಿಗಳಾದರೆ ಅದಕ್ಕೆ ಸಂಪೂರ್ಣ ಬಲದೊಂದಿಗೆ ಉತ್ತರ ನೀಡಿ ಎಂಬ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನಿ  ಸೈನಿಕರು ಉದ್ಧಟತನ ಪ್ರದರ್ಶನ ಮಾಡಿದ್ದು, ಭಾರತೀಯ ಪೋಸ್ಟ್ ಗಳತ್ತ ಗುಂಡಿನ ದಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಪಡೆಗಳು ಕಳೆದ ರಾತ್ರಿ ಭಾರತೀಯ ಯೋಧರತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಸುಮಾರು ಅರ್ಧ ಗಂಟೆಗೂ ಅಧಿಕ  ಕಾಲ ಗುಂಡಿನ ಚಕಮಕಿ ನಡೆಸಿದ್ದಾರೆ.

ಪಾಕಿಸ್ತಾನಿ ಪಡೆಗಳ ದಾಳಿಗೆ ಭಾರತೀಯ ಯೋಧರೂ ಕೂಡ ಸಮರ್ಥ ಪ್ರತಿದಾಳಿ ನಡೆಸಿದ್ದು, ದಾಳಿಯಲ್ಲಿ ಯಾವುದೇ ಸಾವು-ನೋವಿನ ಕುರಿತು  ವರದಿಯಾಗಿಲ್ಲ.

ಪೂಂಚ್ ಸೆಕ್ಟರ್ ನ ಸಬ್ಜಿಯಾನ್ ಪ್ರದೇಶದಲ್ಲಿ ಈ ಅಪ್ರಚೋದಿತ ದಾಳಿ ನಡೆದಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಸಬ್ಜಿಯಾನ್ ಪ್ರದೇಶದಲ್ಲಿ ಭಾರತೀಯ ಯೋದರು ಪಹರೆ  ನಡೆಸುತ್ತಿದ್ದಾಗ ಗುಂಡಿನ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಯಾವೊಬ್ಬ ಯೋಧರೂ ಗಾಯಗೊಂಡಿಲ್ಲ ಎಂದು ಸೇನಾಮೂಲಗಳು ತಿಳಿಸಿವೆ.ಕಳೆದ ಸೆಪ್ಟೆಂಬರ್ 20ರಂದು ಉರಿಯಲ್ಲಿ ನಡೆದ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನಿ ಪಡೆಗಳು ಪದೇ ಪದೇ ಭಾರತೀಯ ಯೋಧರತ್ತ ದಾಳಿ ನಡೆಸುತ್ತಿವೆ.

No Comments

Leave A Comment