Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಐಟಿ ದಾಳಿ: ಬೆಂಗಳೂರಿನಲ್ಲಿ ದಾಖಲೆಯ 50 ಕೋಟಿ ರು.ಕಪ್ಪು ಹಣ ಜಪ್ತಿ

cash-28ಬೆಂಗಳೂರು: ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಆದಿಕೇಶವಲು ಗ್ರೂಪ್ ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಯ ವೇಳೆ ದಾಖಲೆಯ 50 ಕೋಟಿ ರುಪಾಯಿ ಕಪ್ಪು ಹಣ ಜಪ್ತಿ ಮಾಡಿದೆ.
ನಿನ್ನೆ ನಡೆದಿದ್ದ ದಾಳಿಯ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಟಿ ಇಲಾಖೆ ಪ್ರಧಾನ ಆಯುಕ್ತೆ ನೂತನ ಒಡೆಯರ್  ಅವರು, ಆದಿಕೇಶವಲು ಗ್ರೂಪ್ ಆಫ್ ಕಂಪನೀಸ್ ಮೇಲೆ ದಾಳಿ ನಡೆಸಿದ ವೇಳೆ ದಾಖಲೆಗಳೇ ಇಲ್ಲದ 50 ಕೋಟಿ ರುಪಾಯಿ ಹಣ ಪತ್ತೆಯಾಗಿದೆ. ಡೊನೇಷನ್ ರೂಪದಲ್ಲಿ ಹಣ ಬಂದಿರುವುದು ತಿಳಿದು ಬಂದಿದೆ. ಹಾಗಾಗಿ ಡೊನೇಷನ್ ನೀಡಿದವರ ಆಸ್ತಿ, ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ ಆದಿಕೇಶವಲು ಕಂಪನೀಸ್ ಸುಮಾರು 265 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿರುವ ಬಗ್ಗೆಯೂ ಮಾಹಿತಿ ಇದೆ. ಒಂದು ವೇಳೆ ಅಕ್ರಮ ಸಾಬೀತಾದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಒಡೆಯರ್ ಹೇಳಿದ್ದಾರೆ.
ಐಟಿ ಅಧಿಕಾರಿಗಳು ರಾಜ್ಯದಲ್ಲಿ ವಶಕ್ಕೆ ಪಡೆದ ಅತಿ ದೊಡ್ಡ ಪ್ರಮಾಣದ ನಗದು ಇದಾಗಿದ್ದು, ದೇಶದಲ್ಲಿಯೇ ಎರಡನೇ ಅತಿ ದೊಡ್ಡ ದಾಳಿಯಾಗಿದೆ. ಈ ಹಿಂದೆ ಪುದುಚೇರಿಯ ಖಾಸಗಿ ವೈದ್ಯಕೀಯ ಕಾಲೇಜ್ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಸುಮಾರು 82 ಕೋಟಿ ರುಪಾಯಿ ನಗದು ವಶಕ್ಕೆ ಪಡೆದಿದ್ದರು.
ಕಳೆದ ಬಾರಿ ಡಿಸೆಂಬರ್ 2015ರಲ್ಲಿ ರಾಯಚೂರಿನ ನವೋದಯ ಶಿಕ್ಷಣ ಸಂಸ್ಥೆಯ ವೈದ್ಯಕೀಯ ಕಾಲೇಜ್ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, 19.5 ಕೋಟಿ ರುಪಾಯಿ ವಶಪಡಿಸಿಕೊಂಡಿದ್ದರು.
No Comments

Leave A Comment