Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ರಾಷ್ಟ್ರೀಯ ಸೇವಾ ಯೋಜನೆ- ಸ್ವಯಂ ಸೇವಕರೊಂದಿಗೆ ಸಂವಾದ

dsc_2919ಉಡುಪಿ : ಯಾವುದೇ ಫಲಾಪೇಕ್ಷೆಗಳನ್ನು ಅಪೇಕ್ಷಿಸದೆ ಸೇವೆ ನೀಡುವುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ. ಈ ನಿಟ್ಟಿನಲ್ಲಿ ಇನ್ನಷ್ಟು ರಚನಾತ್ಮಕವಾಗಿ ಎನ್ ಎಸ್ ಎಸ್ ನ್ನು ರೂಪಿಸಬೇಕು ಎಂದು ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅಭಿಪ್ರಾಯ ಪಟ್ಟರು.

ಅವರಿಂದು ನಗರದ ಪುರಭವನದ ಬಳಿಯ ಸಭಾಂಗಣದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆಯಡಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನಾ ಸ್ವಯಂ ಸೇವಕರೊಂದಿಗೆ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪ್ರಸಕ್ತ ೩,೫೦,೦೦೦ ವಿರುವ ಎನ್.ಎಸ್.ಎಸ್ ವಿದ್ಯಾರ್ಥಿಗಳ ಸಂಖ್ಯೆಯನ್ನು ೧೦ ಲಕ್ಷಕ್ಕೆ ಏರಿಸುವುದು; ಹೊಸ ಸಿದ್ಧ ನೀತಿಯೊಂದಿಗೆ ಎನ್ ಎಸ್ ಎಸ್ ಗೊಂದು ಚೈತನ್ಯ ನೀಡುವುದು ಇದರ ಉದ್ದೇಶ ಎಂದ ಸಚಿವರು, ಈಗಾಗಲೇ ಬೆಳಗಾವಿ, ಗುಲ್ಬರ್ಗಾದಲ್ಲಿ ಈ ಸಂಬಂಧ ಸಭೆ ನಡೆಸಲಾಗಿದ್ದು, ಇಂದು ಮೈಸೂರು , ಬೆಂಗಳೂರು ವಿಭಾಗದ ಸಭೆಗಳೂ ಇಲ್ಲಿ ನಡೆದಿದ್ದು ಈ ಹೊಸ ಕಾರ್ಯಕ್ರಮ ನೂತನ ಶಕೆಗೆ ನಾಂದಿ ಬರೆಯಲಿದೆ ಎಂದರು.

ಎನ್ ಎಸ್ ಎಸ್ ನ ಸಲಹಾ ಉಪಸಮಿತಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ತಾಂತ್ರಿಕ ಯುಗದಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿರುವ ವಿದ್ಯಾರ್ಥಿಗಳ ಸ್ಪೀಡ್‌ಗೆ ಅನುಗುಣವಾಗಿ ಎನ್ ಎಸ್ ಎಸ್ ನ್ನು ರೂಪಿಸುವ ಸದುದ್ದೇಶ ತಮ್ಮದೆಂದರು.

ರಾಜ್ಯದ ಬೆಂಗಳೂರು, ಮೈಸೂರು, ಕುವೆಂಪು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಮಂಡಿಸಿ, ಎನ್ ಎಸ್ ಎಸ್ ಗೆ ಎನ್ ಸಿ ಸಿ ಗೆ ದೊರೆಯುವ ಸ್ಥಾನಮಾನಗಳು ಲಭ್ಯವಾಗಬೇಕು. ಶ್ರಮದಾನ, ವ್ಯಕ್ತಿತ್ವ ವಿಕಸನಕ್ಕೆ ಹೊಸ ವ್ಯಾಖ್ಯ ಬರೆಯುವ ಅಗತ್ಯವಿದೆ ಎಂದರು. ಪ್ರವಾಸೋದ್ಯಮ ಬೆಳವಣಿಗೆಗೂ ಎನ್ ಎಸ್ ಎಸ್ ವಿದ್ಯಾರ್ಥಿಗಳ ಸದ್ಬಳಕೆಯಾಗಬೇಕು. ಅಣಕು ಸಂಸತ್ತುಗಳು ನಡೆಯಬೇಕು. ಎಲ್ಲ ಕಾಲೇಜುಗಳಲ್ಲು ಎನ್ ಎಸ್ ಎಸ್ ಯುನಿಟ್ ಕಡ್ಡಾಯವಾಗಬೇಕೆಂದರು.

ಯುವ ಸಬಲೀಕರಣ ಮತ್ತುಕ್ರೀಡಾ ಸಚಿವರ ಆಪ್ತ ಕಾರ್ಯದರ್ಶಿ ಡಾ ಕೆ ಎನ್ ವಿಜಯಪ್ರಕಾಶ್, ಎನ್ ಎಸ್ ಎಸ್ ನ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಎ ಎನ್ ಪೂಜಾರ್, ರಾಜ್ಯ ಘಟಕದ ಅಧ್ಯಕ್ಷರಾದ ಗಣನಾಥ ಎಕ್ಕಾರ್, ಮಂಗಳೂರು ವಿಶ್ವವಿದ್ಯಾನಿಲಯದ ಯೋಜನಾಧಿಕಾರಿ ಡಾ ವಿನಿತಾ ರೈ , ಡಾ ಜಿ ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಎನ್ ಎಸ್ ಎಸ್ ಘಟಕದ ಮುಖ್ಯಸ್ಥರಾದ ಪ್ರಕಾಶ್ ವೇದಿಕೆಯಲ್ಲಿದ್ದರು.

No Comments

Leave A Comment