Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಬೀದಿ ನಾಯಿ ಕೊಂದು ಕೋಲಿಗೆ ಕಟ್ಟಿ ಕೇರಳ ಕಾರ್ಯಕರ್ತರ ಪ್ರತಿಭಟನೆ

dog-pಕೋಟ್ಟಯಂ : ಕೇರಳದಲ್ಲಿ ಬೀದಿ ನಾಯಿಗಳ ಉಪಟಳ ತೀವ್ರವಾಗಿ ಹೆಚ್ಚುತ್ತಿದೆ. ನಾಯಿ ಕಡಿತದ ಪ್ರಕರಣಗಳು ವಿಪರೀತವಾಗಿ ಹೆಚ್ಚುತ್ತಿವೆ. ಹಾಗೆಂದು ಬೀದಿ ನಾಯಿಗಳ ಸಂಹಾರಕ್ಕೆ ಪ್ರಾಣಿ ದಯಾ ಸಂಘಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಹೀಗಿರುವಾಗ ಬೀದಿ ನಾಯಿಗಳ ಉಪಟಳವನ್ನು ಪ್ರತಿಭಟಿಸಲು ಕೇರಳದ ಕೋಟ್ಟಯಂ ಜಿಲ್ಲೆಯಲ್ಲಿ ಕೇರಳ ಕಾಂಗ್ರೆಸ್‌ ಎಂ ನ ಯುವದಳದ ಸದಸ್ಯರು ಐದು ಸತ್ತ ನಾಯಿಗಳ ಕಾಲುಗಳನ್ನು ಬಿದಿರಿನ ಕೋಲಿಗೆ ಬಿಗಿದು ನೇತಾಡಿಸಲಾದ ಸ್ಥಿತಿಯಲ್ಲಿ ಕೋಟ್ಟಯಂನ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಬೀದಿ ನಾಯಿಗಳಿಂದ ಕೇರಳದ ಆದ್ಯಂತ ಹೆಚ್ಚುತ್ತಿರುವ ಕಡಿತದ ಪ್ರಕರಣಗಳ ಬಗ್ಗೆ ಜನಜಾಗೃತಿ ಉಂಟು ಮಾಡಿ ಆಡಳಿತೆಯ ಕಣ್ತೆರೆಸಲು  ತಾವು ಈ ರೀತಿಯ ಪ್ರತಿಭಟನಾ ಪ್ರದರ್ಶನ ಕೈಗೊಂಡಿರುವುದಾಗಿ ಕೇರಳ ಕಾಂಗ್ರೆಸ್‌ ಎಂ ಯುವದಳದ ಸದಸ್ಯರು ಹೇಳಿದ್ದಾರೆ.

ಈ ಪ್ರತಿಭಟನಾ ಪ್ರದರ್ಶನದ ಬಳಿಕ ಕಾರ್ಯಕರ್ತರು ಸತ್ತ ನಾಯಿಗಳನ್ನು ಮುನಿಸಿಪಲ್‌ ಕಚೇರಿಯ ಮುಂಭಾಗದಲ್ಲಿ ರಾಶಿ ಹಾಕಿ ಜನರ ಗಮನವನ್ನು ಸೆಳೆದರು.

“ಜನರಿಗೆ ಬೆದರಿಕೆಯಾಗಿ ಪರಿಣಮಿಸಿರುವ ಈ ಬೀದಿ ನಾಯಿಗಳನ್ನು ನಾವೇ ಖುದ್ದು ಕೊಂದಿದ್ದೇವೆ. ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಸೂಕ್ತ ಹಾಗೂ ತ್ವರಿತ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಈ ರೀತಿಯ ಶ್ವಾನ ಸಂಹಾರ ಅಭಿಯಾನವನ್ನು ತೀವ್ರಗೊಳಿಸುತ್ತೇವೆ ಎಂಬ ಎಚ್ಚರಿಕೆಯನ್ನು ಈ ಪ್ರತಿಭಟನೆಯ ಮೂಲಕ ನೀಡುತ್ತಿದ್ದೇವೆ’ ಎಂದು ಕಾರ್ಯಕರ್ತರು ಸುದ್ದಿಗಾರರಿಗೆ ಹೇಳಿದ್ದಾರೆ.

No Comments

Leave A Comment