Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ:ಜಿಲ್ಲಾ ಪ್ರಶಸ್ತಿ, ವಿಜೇತೆಗೆ ಸನ್ಮಾನ

ceracare_ಉಡುಪಿ: 2015-16ನೇ ಸಾಲಿನ ಜಿಲ್ಲಾ ಪ್ರಶಸ್ತಿ ವಿಜೇತೆ ವಿದ್ಯಾ‌ಇಲಾಖೆಯ‌ಉಡುಪಿ ತಾಲೂಕು ಸರಳಬೆಟ್ಟು ಶಾಲೆಯ ಮುಖ್ಯೋಪಾಧ್ಯಾಯಿನಿ ಬೇಬಿಯವರ ಸನ್ಮಾನ ಸಮಾರಂಭ ಸೆರಾಕೇರ್‌ಉಡುಪಿ ಕೇಂದ್ರದಲ್ಲಿಜರಗಿತು.

ಸೆ. 24ರಂದುಜರಗಿದ ಸಭೆಯಲ್ಲಿಕೇಂದ್ರದ ಮುಖ್ಯಸ್ಥ ಪ್ರದೀಪ್‌ಕುಮಾರ್ ಬೈಲಕೆರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ‌ಅಧಿಕಾರಿ ಶ್ರೀನಿವಾಸ ಶೆಟ್ಟಿತೋನ್ಸೆ ಜಂಟಿಯಾಗಿ ಸನ್ಮಾನಿಸಿ ಸೇರಾಕೇರ್‌ನ ಪಾರಿತೋಷಕವನ್ನಿತ್ತು ಗೌರವಿಸಿದರು.

ಕೇಂದ್ರಕ್ಕೆ ಪ್ರತಿದಿನ ಬರುವ‌ಆರು ನೂರಕ್ಕಿಂತಲೂ ಹೆಚ್ಚು ಸಾಧಕರಲ್ಲಿತಾನೂ ಒಬ್ಬಳು.ಆದರೂ‌ಇಲಾಖೆಯ ಪ್ರಶಸ್ತಿಯನ್ನು ಪಡೆದ ನನ್ನನ್ನು ಗೌರವಿಸಿದ್ದು ಸಂತೋಷ. ಪ್ರಶಸ್ತಿಗಾಗಿ ಅರ್ಜಿ ಹಾಕಿ ಕೇಳಿಕೆ ಸಲ್ಲಿಸಿಲ್ಲ. ನನ್ನೊಂದಿಗೆಕಾರ್ಯನಿರ್ವಹಿಸಿದ ಶಿಕ್ಷಕರ, ಶಾಲಾಭಿವೃದ್ಧಿ ಸಮಿತಿಯವರ ಸಹಕಾರದ ಫಲವಾಗಿ ಪ್ರಶಸ್ತಿ ಲಭಿಸುವಂತಾಯಿತೆಂದು ಸನ್ಮಾನಕ್ಕೆ‌ಉತ್ತರವಾಗಿ ಬೇಬಿ ಹೇಳಿದರು.

ಕೇಂದ್ರದ ಸಾಧಕರಾದ ನಿವೃತ್ತ ಶಿಕ್ಷಕಿ ಲಿಲ್ಲಿ ಡಿ’ಸೋಜಾ ಬಾರಕೂರು, ಸುಮಿತ್ರಾ ನಾಯಕ್ ಪರ್ಕಳ, ಸುಲೋಚನ ಲಕ್ಷ್ಮೀನಗರ ಸೆರಾಕೇರ್‌ಉಪಚಾರದಿಂದ (ಟ್ರೀಟ್ ಮೆಂಟ್) ಆರೋಗ್ಯದಲ್ಲಾದ ಹೆಚ್ಚಿನ ಸುಧಾರಣೆಯನ್ನು ಪ್ರಸ್ತಾಪಿಸಿ ಮಾತಾಡಿದರು.ಕೇಂದ್ರದಕಾರ್ಯನಿರ್ವಾಹಕಿ ಶೋಭಾ ಶ್ರೀಕಾಂತ್ ಕನ್ನರ್ಪಾಡಿ ಸನ್ಮಾನಿತರ ಸಂಕ್ಷಿಪ್ತ ಪರಿಚಯ ಮಾಡಿದರು. ಹೊಸದಾಗಿ ಸಂಶೋಧಿಸಿದ ಜೇಡೆಕಲ್ಲಿನ ಹರಳು ಅಳವಡಿಸಿರುವ ಸಾಧನ ಶಿಶು ಹಾಸು (ಬೇಬಿ ಮ್ಯಾಟ್) ಬಿಡುಗಡೆ ಮಾಡಲಾಯಿತು.

ಬೆಂಗಳೂರಿನ ಶಾಸಕರ ಭವನದ‌ಆರೋಗ್ಯಕೂಟ (ಹೆಲ್ತ್‌ಕ್ಲಬ್)ದಲ್ಲಿ ಸೆರಾಕೇರ್ ಸಾಧಗಳ ಉಪಯೋಗ ಮಾಡಿಕೊಳ್ಳುವ ನಿರ್ಧಾರ ಮಾಡಿಕರ್ನಾಟಕ ಸರಕಾರದ ವಿಧಾನಸಭೆ ಸಚಿವಾಲಯದ ಶಾಸಕರ ಭವನದಕ್ಷೇತ್ರಾಧಿಕಾರಿಯವರು ಬರೆದ ಪತ್ರದ ಪ್ರಸ್ತಾಪ ಸಭೆಯಲ್ಲಿ ಮಾಡಲಾಯಿತು.

ಪ್ರಾರಂಭದಲ್ಲಿ ಜಮ್ಮೂ-ಕಾಶ್ಮೀರದ ಉರಿ ವಿಭಾಗದಲ್ಲಿ ಭಾರತದ ಸೇನಾ ಪಡೆಯ ಮೇಲೆ ನಡೆದ‌ಉಗ್ರರ ದಾಳಿಯನ್ನು ಖಂಡಿಸಿ ಹತರಾದ ಹದಿನೆಂಟು ವೀರಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪ್ರದೀಪ್ ಸ್ವಾಗತಿಸಿದರು, ಪೂರ್ಣಿಮಾ ಲಕ್ಷ್ಮೀನಗರ ವಂದಿಸಿದರು.

No Comments

Leave A Comment