Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರವೆಸಗಿದ 53ರ ಕಾಮುಕ ಅರೆಸ್ಟ್

child-rapeಅಹ್ಮದ್‌ನಗರ: 15 ರ ಹರೆಯದ ಬುದ್ಧಿಮಾಂದ್ಯ ಅಪ್ರಾಪ್ತ ಬಾಲಕಿಯ ಮೇಲೆ ನೆರೆ ಮನೆಯ 53 ವಯಸ್ಸಿನ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಘಟನೆ ಜಿಲ್ಲೆಯ ಪಾಥರ್ಡಿ ತಾಲೂಕಿನ ಮೋಹರಿ ಗ್ರಾಮದಲ್ಲಿ ರವಿವಾರ ಮಧ್ಯಾಹ್ನ ನಡೆದಿದ್ದು, ಆರೋಪಿ ಅಶೋಕ್‌ ಸದಾಶಿವ್‌ ವಾಲೇಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ಬಾಲಕಿಯ ತಾಯಿ ಚಿಕಿತ್ಸೆಗಾಗಿ ಅಹ್ಮದ್‌ನಗರದಲ್ಲಿರುವ ಆಸ್ಪತ್ರೆಗೆ ಮತ್ತು ಆಕೆಯ ತಂದೆ ಹೊಲಕ್ಕೆ ಹೋಗಿದ್ದರು. ಹಾಗಾಗಿ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯವನ್ನು ಸಾಧಿಸಿದ ಆರೋಪಿ ಅಶೋಕ್‌, ಬಾಲಕಿಯ ಮನೆಯೊಳಗೆ ನುಗ್ಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆಯನ್ನು ವೀಕ್ಷಿಸಿದ ಬಾಲಕಿಯ ಕಿರಿಯ ಸಹೋದರ ಬೊಬ್ಬೆ ಹೊಡೆದು, ಕಿರುಚಿದನು. ಬಳಿಕ ನೆರೆಹೊರೆಯ ಜನರು ಘಟನಾ ಸ್ಥಳಕ್ಕೆ ಆಗಮಿಸಿ ಮನೆಯ ಬಾಗಿಲನ್ನು ಮುರಿದು ಆರೋಪಿ ಅಶೋಕನನ್ನು ರೇಡ್‌ಹ್ಯಾಂಡಾಗಿ ಹಿಡಿದರು. ಬಳಿಕ ಗ್ರಾಮಸ್ಥರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂತ್ರಸ್ತೆ ಬಾಲಕಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಅಹ್ಮದನಗರಕ್ಕೆ ಕರೆದ್ಯೊಯಲಾಗಿದೆ ಎಂದು ಹೇಳಲಾಗಿದೆ.

No Comments

Leave A Comment