Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬೆಂಗಳೂರು: ಮನೆಗೆ ನುಗ್ಗಿ ಹಾಡುಹಗಲೆ ಮಾರಕಾಸ್ತ್ರದಿಂದ ಅತ್ತೆ-ಸೊಸೆ ಕತ್ತು ಸೀಳಿ ಬರ್ಬರ ಹತ್ಯೆ

crimeಬೆಂಗಳೂರು: ಹಾಡುಹಗಲೇ ಮನೆಯೊಂದಕ್ಕೆ ನುಗ್ಗಿದ ಹಂತಕರು ಅತ್ತೆ-ಸೊಸೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಬೆಂಗಳೂರಿನ ವಸಂತನಗರ ಬಳಿಯ ಕಂಟೋನ್‌ಮೆಂಟ್ ಪ್ರದೇಶದಲ್ಲಿ ವಾಸವಾಗಿರುವ 50 ವರ್ಷದ ಸಂತೋಷಿಬಾಯಿ ಹಾಗೂ 30 ವರ್ಷದ ಲತಾ ಎಂಬುವರ ಮನೆಗೆ ಬೆಳಗ್ಗೆ 8 ಗಂಟೆ ಸುಮಾರಿಗೆ ನುಗ್ಗಿದ ಹಂತಕರು ಅತ್ತೆ-ಸೊಸೆಯನ್ನು ಹತ್ಯೆಗೈದು ಪರಾರಿಯಾಗಿದ್ದಾರೆ.

ಹತ್ಯೆ ನಡೆದ ಮನೆಗೆ ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಭೇಟಿ ನೀಡಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

No Comments

Leave A Comment