Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬುರ್ದ್ವಾನ್ ಸ್ಫೋಟ: 6 ಉಗ್ರರನ್ನು ಬಂಧಿಸಿದ ಕೋಲ್ಕತಾ ಪೊಲೀಸರು

burdwan-blastಕೋಲ್ಕತಾ: ಬುರ್ದ್ವಾನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮತ್-ಉಲ್-ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ 6 ಉಗ್ರರನ್ನು ಕೋಲ್ಕತಾದ ವಿಶೇಷ ಕಾರ್ಯಪಡೆ(ಎಸ್ ಟಿಎಫ್) ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.

ಅಧಿಕಾರಿಗಳು ಬಂಧಿಸಿರುವ ಐವರು ಉಗ್ರರಲ್ಲಿ ಮೂವರು ಭಾರತೀಯರಾಗಿದ್ದು, ಇನ್ನು ಮೂವರು ಬಾಂಗ್ಲಾದೇಶದ ಮೂಲದವರಾಗಿದ್ದಾರೆಂದು ತಿಳಿದುಬಂದಿದೆ.ಬುರ್ದ್ವಾನ್ ನಲ್ಲಿ ಸ್ಫೋಟ ಸಂಭವಿಸಿದ ಬಳಿಕ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯು ಚಾರ್ಜ್ ಶೀಟ್ ನಲ್ಲಿ ಕೆಲ ಉಗ್ರರ ಹೆಸರನ್ನು ನಮೂದಿಸಿತ್ತು. ಇದೀಗ ಬಂಧನಕ್ಕೊಳಗಾಗಿರುವ ಐವರ ಉಗ್ರರ ಹೆಸರೂ ಕೂಡ ಚಾರ್ಜ್ ಶೀಟ್ ನಲ್ಲಿತ್ತು.

ಬಂಧಿತ ಉಗ್ರರಿಂದ ಕೆಲ ಸ್ಫೋಟಕ ವಸ್ತುಗಳು, ಮೊಬೈಲ್ ಫೋನುಗಳು ಹಾಗೂ ಲ್ಯಾಪ್ ಟಾಪ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.

ಬಂಧಿತ ಉಗ್ರರನ್ನು ಬಾಂಗ್ಲಾ ಮೂಲದ ಅನ್ವಾನ್ ಹುಸೇನೆ, ಮೌಲಾನಾ ಯೂಸಫ್, ಶಾಹುದುಲ್ ಇಸ್ಲಾಂ, ಮೊಹಮ್ಮದ್ ರುಬೆಲ್, ಅಬುಲ್ ಕಲಾಂ, ಜಬಿರುಲ್ ಇಸ್ಲಾಂ ಎಂದು ಗುರ್ತಿಸಲಾಗಿದೆ.

No Comments

Leave A Comment