Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

500ನೇ ಟೆಸ್ಟ್‌ ಟೀಂ ಇಂಡಿಯಾಗೆ ಐತಿಹಾಸಿಕ ಜಯ

indiaಕಾನ್ಪುರ: ಟೀಂ ಇಂಡಿಯಾ ತನ್ನ ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಗ್ರೀನ್ ಪಾರ್ಕ್ ಟ್ರ್ಯಾಕ್ ನಲ್ಲಿ ಗೆಲುವಿಗಾಗಿ 434 ರನ್ ಗಳ ಕಠಿಣ ಗುರಿ ಪಡೆದಿದ್ದ ನ್ಯೂಜಿಲೆಂಡ್ 236 ರನ್ ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಟೀಂ ಇಂಡಿಯಾ 197 ರನ್ ಗಳಿಂದ ಗೆಲುವು ಸಾಧಿಸಿದೆ.

4 ವಿಕೆಟ್ ಪತನದೊಂದಿಗೆ ಐದನೇ ದಿನದಾಟ ಪ್ರಾರಂಭಿಸಿದ ನ್ಯೂಜಿಲೆಂಡ್ ಬ್ಯಾಟ್ ಮನ್ ಗಳು ಟೀಂ ಇಂಡಿಯಾ ಸ್ಪಿನ್ ದಾಳಿಗೆ ತತ್ತರಿಸಿದರು. ಐದನೇ ದಿನದಾಟದಲ್ಲಿ ನ್ಯೂಜಿಲೆಂಡ್ 143 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದೆ. ಆರ್ ಅಶ್ವಿನ್ ಮಾರಕದಾಳಿಗೆ ನ್ಯೂಜಿಲೆಂಡ್ ಬ್ಯಾಟ್ ಮನ್ ಗಳು ಪೆಲಿವಿಯನ್ಸ್ ಪರೇಡ್ ನಡೆಸಿದರು.

159 ರನ್ ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ 5 ವಿಕೆಟಿಗೆ 377 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.ಇದರಿಂದ ನ್ಯೂಜಿಲೆಂಡ್ ಗೆಲುವಿಗೆ 434 ರನ್ ಗಳ ಸವಾಲೊಡ್ಡಿತು. ಅಂತಿಮ ಅವಧಿಯ 37 ಓವರ್ ಗಳ ಬ್ಯಾಟಿಂಗ್ ಮಾಡಿದ ಕಿವೀಸ್ 4 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿತ್ತು.

No Comments

Leave A Comment