Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಸುನಂದಾ ಪ್ರಕರಣ; ಅಳಿಸಿ ಹೋಗಿದ್ದ ಮೊಬೈಲ್ ಚಾಟ್ ವಿವರ ಕೇಳಿದ ಪೊಲೀಸರು

shashiನವದೆಹಲಿ: ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಕೆನಡಾದ ನ್ಯಾಯಾಂಗ ಇಲಾಖೆಗೆ ದೆಹಲಿ ಪೊಲೀಸರು ಪತ್ರ ಬರೆದಿದ್ದು, ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ ನಡುವೆ ನಡೆದಿದ್ದ, ಅಳಿಸಿ ಹೋಗಿರುವ ಮೊಬೈಲ್ ಚಾಟ್ ವಿವರಗಳಿಗಾಗಿ ಕೇಳಿ ಮನವಿ ಮಾಡಿದ್ದಾರೆ.
ಜನವರಿ 17 2014 ರಲ್ಲಿ 51 ವರ್ಷದ ಸುನಂದಾ ದಕ್ಷಿಣ ದೆಹಲಿಯ ಫೈವ್ ಸ್ಟಾರ್ ಹೋಟೆಲ್ ಒಂದರ ಕೊಠಡಿಯಲ್ಲಿ ಅನುಮಾಸ್ಪದವಾಗಿ ಮೃತಪಟ್ಟಿದ್ದರು. ಅವರು ಮೃತಪಡುವುದಕ್ಕೆ ಒಂದು ದಿನದ ಹಿಂದೆಯಷ್ಟೇ ಪಾಕಿಸ್ತಾನಿ ಪತ್ರಕರ್ತೆ ಮೆಹೆರ್ ತರಾರ್ ಅವರೊಂದಿಗೆ ಟ್ವಿಟ್ಟರ್ ನಲ್ಲಿ ಕಾದಾಡಿದ್ದರು. ಈ ಸಾವಿಗೆ ಸಂಬಂಧಿಸಿದಂತೆ ತರೂರ್ ಅವರನ್ನು ಒಳಗೊಂಡಂತೆ ಹಲವರನ್ನು ಪೊಲೀಸರು ಪ್ರಶ್ನಿಸಿದ್ದಾರೆ.
ಈ ಪ್ರಕರಣದ ಪ್ರಮುಖ ಆರು ಪ್ರತ್ಯಕ್ಷದರ್ಶಿಗಳ ಮೇಲೆ ಪೊಲೀಸರು ಸುಳ್ಳುಪತ್ತೆ ಪರೀಕ್ಷೆಯನ್ನು ಕೂಡ ನಡೆಸಿದ್ದಾರೆ. ಇದರಲ್ಲಿ ತರೂರ್ ಅವರ ಸಿಬ್ಬಂದಿ ನಾರಾಯಣ್ ಸಿಂಗ್, ಚಾಲಕ ಭಜರಂಗಿ ಮತ್ತು ಈ ಜೋಡಿಯ ಹತ್ತಿರದ ಗೆಳೆಯ ಸಂಜಯ್ ದೇವನ್ ಕೂಡ ಸೇರಿದ್ದಾರೆ.
ಫೆಬ್ರವರಿಯಲ್ಲಿ ಕಾಂಗ್ರೆಸ್ ಮುಖಂಡನ ಜೊತೆಗಿನ ಸಂಬಂಧದ ಬಗ್ಗೆ ಪಾಕಿಸ್ತಾನಿ ಪತ್ರಕರ್ತೆ ತರಾರ್ ಅವರನ್ನು ಕೂಡ ಪ್ರಶ್ನಿಸಲಾಗಿತ್ತು. ಜನವರಿ 2015 ರಲ್ಲಿ ದೆಹಲಿ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದರು. 2015 ರಲ್ಲಿ ಎಫ್ ಬಿ ಐ ಪೊಲೀಸರು ದೆಹಲಿ ಪೊಲೀಸರಿಗೆ ಕಳಿಸಿದ್ದ ವರದಿಯಲ್ಲಿ ಈ ಸಾವು ‘ಪೊಲೋನಿಯಮ್ ವಿಷದಿಂದ’ ಸಂಭವಿಸಿದೆ ಎಂಬುದನ್ನು ತಳ್ಳಿಹಾಕಿದ್ದರು.
ಆ ವರದಿಯಿಂದ ಯಾವುದೇ ತೀರ್ಮಾನಕ್ಕೆ ಬರಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲವಾದ್ದರಿಂದ ಈ ವರದಿಯನ್ನು ಹೆಚ್ಚಿನ ಪರೀಕ್ಷೆಗಾಗಿ ವೈದಕೀಯ ಪೀಠಕ್ಕೆ ಸಲ್ಲಿಸಲಾಗಿತ್ತು. ಈ ವೈದ್ಯಕೀಯ ಪೀಠ ಸುನಂದಾ ಅವರ ಸಾವಿನ ಬಗ್ಗೆ ಇನ್ನು ತನ್ನ ಅಭಿಪ್ರಾಯ ಮಂಡಿಸಿಲ್ಲ.
No Comments

Leave A Comment