Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ತಮಿಳು ನಾಡಿನಲ್ಲಿ ರಸ್ತೆ ಅಪಘಾತ: 9 ಮಹಿಳೆಯರು ಸೇರಿ 11 ಮಂದಿ ಸಾವು

van-accident

(ಸಾಂದರ್ಭಿಕ ಚಿತ್ರ)

ತಿರುಚಿ: ಭಾರೀ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನೊಂದು ಇನ್ನೊಂದು ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ 9 ಮಂದಿ ಮಹಿಳೆಯರು ಸೇರಿ 11 ಜನ ಮೃತಪಟ್ಟಿರುವ ಘಟನೆ ತಮಿಳು ನಾಡಿನ ಅರಿಯಲೂರು ಜಿಲ್ಲೆಯ ಜಯಂಕೊಂಡಮ್ ನಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ.

ಗಾಯಗೊಂಡ ಇತರ 9 ಮಂದಿ ಗ್ರಾಮಸ್ಥರನ್ನು ಜಯಂಕೊಂಡಮ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.

ಅಪಘಾತವನ್ನು ಹತ್ತಿರದಿಂದ ನೋಡಿದ ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಿತಿಗಿಂತ ಜಾಸ್ತಿ 21 ಜನರನ್ನು ಹೊತ್ತು ವ್ಯಾನೊಂದು ಜಯಂಕೊಂಡಮ್ ಹತ್ತಿರ ಪುದುಕುಡಿಯಿಂದ ಹಿಂತಿರುಗುತ್ತಿತ್ತು. ಗೋಡೆ ಕುಸಿತದಲ್ಲಿ ಇತ್ತೀಚೆಗೆ ಮೃತಪಟ್ಟ ವ್ಯಕ್ತಿಯ ಅಂತಿಮ ವಿಧಿ ವಿಧಾನಗಳನ್ನು ಮುಗಿಸಿಕೊಂಡು ತಮ್ಮ ಗ್ರಾಮಕ್ಕೆ ವಾಪಾಸಾಗುತ್ತಿದ್ದರು. ಆಗ ಕಾಚಿಪೆರುಮಾಳ್ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಸಿಮೆಂಟ್ ತುಂಬಿದ ಲಾರಿಗೆ ಢಿಕ್ಕಿ ಹೊಡೆಯಿತು. ಹಠಾತ್ ಸಂಭವಿಸಿದ ಅಪಘಾತದಲ್ಲಿ ವ್ಯಾನ್ ನಲ್ಲಿದ್ದ ಗ್ರಾಮಸ್ಥರೆಲ್ಲಾ ಕೆಳಗೆ ಬಿದ್ದರು. ಅವರಲ್ಲಿ ಐವರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಅಪಘಾತದ ಸುದ್ದಿ ಕೇಳಿದ ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಸಾಧ್ಯವಾದಷ್ಟು ಜನರ ಪ್ರಾಣ ಕಾಪಾಡಲು ಪ್ರಯತ್ನಿಸಿದರು. ಸ್ಥಳೀಯ ಆಸ್ಪತ್ರೆಗೆ ಸೇರಿಸಲು ನೆರವಾದರು.

ಜಯಂಕೊಂಡಮ್ ನಂತಹ ಗ್ರಾಮೀಣ ಪ್ರದೇಶದಲ್ಲಿ ಮಿತಿಗಿಂತ ಜಾಸ್ತಿ ಜನರನ್ನು ಹೊತ್ತೊಯ್ದು ಅಪಘಾತ ಸಂಭವಿಸುವುದು ಆಗಾಗ ನಡೆಯುತ್ತಿದೆ. ಇಂತಹದೇ ಘಟನೆಯಲ್ಲಿ ಕಳೆದ ವರ್ಷ ಇಲ್ಲಿ ಜನರನ್ನು ತುಂಬಿ ಸಾಗುತ್ತಿದ್ದ ವ್ಯಾನು ಮತ್ತು ಲಾರಿ ಢಿಕ್ಕಿ ಹೊಡೆದು 10 ಮಂದಿ ಮೃತಪಟ್ಟಿದ್ದರು. ಸಿಮೆಂಟ್ ತುಂಬಿದ ಲಾರಿ ಚಾಲಕರ ಅಜಾಗರೂಕತೆ ಚಾಲನೆ ಮತ್ತು ಮಿತಿಗಿಂತ ಹೆಚ್ಚು ಜನರನ್ನು ಹೊತ್ತೊಯ್ಯುವ ವ್ಯಾನ್ ಮಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.

No Comments

Leave A Comment