Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಫ್ರಾನ್ಸ್ ನಲ್ಲಿ ಹಾರಾಡಿತು ಮಂಗಳೂರಿನ ಗಾಳಿಪಟ

09ಮಂಗಳೂರು: ಫ್ರಾನ್ಸ್‌ನ ಡೀಪಿ ನಗರದಲ್ಲಿ ಆಯೋಜನೆಗೊಂಡ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಟೀಂ ಮಂಗಳೂರು ತಂಡ ಭಾಗವಹಿಸಿ, ಮೆಚ್ಚುಗೆಗೆ ಪಾತ್ರವಾಗಿದೆ. ದಂಪತಿ ಮತ್ತು ಆದಿವಾಸಿ ಗಾಳಿಪಟದೊಂದಿಗೆ ಭಾರತೀಯ ಸಂಸ್ಕೃತಿಯನ್ನು ಡೀಪಿ ಉತ್ಸವದಲ್ಲಿ ಪ್ರತಿನಿಧಿಸಿತ್ತು. ಆ ಮೂಲಕ ಈ ಬಾರಿ ಭಾರತೀಯ ಬುಡಕಟ್ಟು ಜನಾಂಗದ ಬದುಕನ್ನು ಚಿತ್ರ ಕಲೆಯ ಮೂಲಕ ಪ್ರತಿಬಿಂಬಿಸಿದೆ.

ಭಾರತೀಯ ಬುಡಕಟ್ಟು ಜನಾಂಗದ ಕಲೆಯ ಬಗ್ಗೆ 36 ಅಡಿ ಉದ್ದದ ಕಲಾಕೃತಿಯನ್ನು ದಿನೇಶ್ ಹೊಳ್ಳ ಸ್ಥಳದಲ್ಲಿಯೇ ರಚಿಸಿದ್ದಾರೆ. ಅಲ್ಲದೆ ‘ರಾಗ ರೇಖಾ’ ಎಂಬ ಕಲಾಪ್ರದರ್ಶನದಲ್ಲಿ 36 ಕೃತಿಗಳನ್ನು ಪ್ರದರ್ಶಿಸಲಾಗಿದೆ. ಪಶ್ಚಿಮ ಘಟ್ಟ ಸಂರಕ್ಷಣೆಯ ಬಗ್ಗೆ ಸಹಿ ಅಭಿಯಾನ ಮಾಡಿ, 28 ರಾಷ್ಟ್ರಗಳ ಸಹಿ ಸಂಗ್ರಹಿಸಿ ಡೀಪಿ ಪಟ್ಟಣದ ಮೇಯರ್ ಸೆಬಾಸ್ಟಿಯನ್ ಜುಮೆಲ್ ಮೂಲಕ ಯುನೆಸ್ಕೋಗೆ ಕಳುಹಿಸಲಾಗಿದೆ.kooo

ಉತ್ಸವದ ಪೋಸ್ಟರ್ ಅನ್ನು ಕಲಾವಿದ ದಿನೇಶ್ ಹೊಳ್ಳ ರಚಿಸಿದ್ದು, ಪ್ರೇಕ್ಷಕರು ಹೊಳ್ಳರ ಸಹಿ ಹಾಕಿದ ಪೋಸ್ಟರನ್ನೂ ಪಡೆದು ಸಂಭ್ರಮಿಸಿದರು. ಪೋಸ್ಟರ್ ರಚನೆ ಮತ್ತು 36 ಅಡಿ ಉದ್ದದ ಕಲಾಕೃತಿ ರಚನೆಗೆ ಮೆಚ್ಚುಗೆ ವ್ಯಕ್ತಪಡಿಸಿ , ‘ಡೀಪಿ ಕ್ಯಾಪಿಟಲ್ ಆಫ್ ಕೈಟ್ಸ್’ ಸಂಘಟಕ ಸ್ಯಾಂಡ್ರಿನ್ ಸಫರ್ಗ್ ಅವರು ದಿನೇಶ್ ಹೊಳ್ಳ ಅವರನ್ನು ವಿಶೇಷವಾಗಿ ಅಭಿನಂದಿಸಿ ‘ಕಲಾ ಮಾನ್ಯತಾ’ ಪ್ರಶಸ್ತಿ ನೀಡಿದ್ದಾರೆ ಎಂದು ಟೀಂ ಮಂಗಳೂರು ಪ್ರಕಟಣೆ ತಿಳಿಸಿದೆ

 

No Comments

Leave A Comment