Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಮತ್ತೊಂದು ಸಾಧನೆಗೈದ ಇಸ್ರೋ: ಏಕಕಾಲಕ್ಕೆ 2 ಕಕ್ಷೆಗೆ 8 ಉಪಗ್ರಹಗಳ ಯಶಸ್ವಿ ಉಡಾವಣೆ

pslv-lead1ಶ್ರೀಹರಿಕೋಟಾ: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿ ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಕಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಸಾಧನೈಗೆದಿದೆ.

ಇಂದು ಬೆಳಗ್ಗೆ ಸುಮಾರು 9.12ಕ್ಕೆ ಸರಿಯಾಗಿ 3 ಸ್ವದೇಶಿ ಹಾಗೂ 5 ವಿದೇಶಿ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಈ ಉಡಾವಣೆಯು ಇಸ್ರೋದ ಸುದೀರ್ಘಾವಧಿಯ ಕಾರ್ಯವಾಗಿದ್ದು, ಸುಮಾರು 2 ಗಂಟೆ, 15 ನಿಮಿಷಗಳ ಕಾಲ ಪ್ರಕ್ರಿಯೆ ನಡೆಯಲಿದೆ ಎಂದು ಇಸ್ರೋ ಹೇಳಿದೆ. ಉಡಾವಣೆಯಾದ ಸುಮಾರು 17 ನಿಮಿಷಗಳ ಅವಧಿಯಲ್ಲಿ ಭಾರತದ ಬಹು ಉದ್ದೇಶಿತ ಪ್ರಮುಖ ಹವಾಮಾನ ಉಪಗ್ರಹ ಸ್ಕಾಟ್ಸ್ಯಾಟ್-1 ಅನ್ನು ಪಿಎಸ್ ಎಲ್ ವಿ ಕಕ್ಷೆಗೆ ಸೇರಿಸಿದ್ದು, ಈ ಉಪಗ್ರಹ ಸುಮಾರು 371 ಕೆಜಿ. ತೂಕ ಹೊಂದಿದೆ.

ಈ ಸ್ಕಾಟ್ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗಲಿದೆ.ಸ್ಕಾಟ್ಸ್ಯಾಟ್-1 ಉಪಗ್ರಹವು ಓಶಿಯನ್ ಸ್ಯಾಟ್-2 ಯೋಜನೆಯ ಮುಂದುವರಿದ ಭಾಗವಾಗಿದ್ದು, ಹವಾಮಾನ ವರದಿ ಮತ್ತು ಮುನ್ಸೂಚನೆ, ಗಾಳಿಯ ದಿಕ್ಕು ಮತ್ತು ಚಲನೆ ಸೇರಿ ಹಲವು ಪ್ರಮುಖ ದತ್ತಾಂಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ.ಇದಲ್ಲದೇ ಬೆಂಗಳೂರಿನ ಪಿಇಎಸ್ ಯೂನಿವರ್ಸಿಟಿ ಸಹಭಾಗಿತ್ವದಲ್ಲಿ ನಿರ್ವಿುಸಿದ ಪಿಸ್ಯಾಟ್ ಉಪಗ್ರಹ ಕೂಡಾ ಕಕ್ಷೆಗೆ ಸೇರಲಿದೆ. ಉಳಿದ 7 ಉಪಗ್ರಹಗಳನ್ನು 689 ಕಿಮೀ. ಧ್ರುವ  ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ.

ಸ್ಕಾಟ್ಸ್ಯಾಟ್-1ನ್ನು 730 ಕಿಮೀ. ಸೂರ್ಯ ಸಮಕಾಲಿಕ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ. ಬೆಳಗ್ಗೆ 11.25ರಿಂದ 11.28ರೊಳಗಿನ ಅವಧಿಯಲ್ಲಿ ಪಿಎಸ್ ಎಲ್ ವಿಯ ಎಂಜಿನ್ ಕೆಲ ಕ್ಷಣಗಳ ಕಾಲ ಸ್ಥಗಿತಗೊಂಡು ಮತ್ತೆ ಚಾಲನೆ ಪಡೆಯಲಿದೆ. ಇದು ತುಂಬಾ ಕ್ಲಿಷ್ಟಕರ ಕಾರ್ಯವಾಗಿದ್ದು, ಒಂದು ಕಕ್ಷೆಗೆ ಉಪಗ್ರಹವನ್ನು ಸೇರಿಸಿದ ಬಳಿಕ ಪಿಎಸ್‌ಎಲ್‌ವಿ ರಾಕೆಟ್‌ನ 4ನೇ ಸ್ಟೇಜ್‌ ಅಂದರೆ ಎಂಜಿನ್‌ ಅನ್ನು ಆಫ್ ಮಾಡಲಾಗುತ್ತದೆ.

ಬಳಿಕ ಮತ್ತೆ ಎಂಜಿನ್‌ ಸ್ಟಾರ್ಟ್‌ ಮಾಡಿ ಮತ್ತೊಂದು ಕಕ್ಷೆಗೆ 7 ಉಪಗ್ರಹಗಳನ್ನು ಸೇರಿಸಲಾಗುತ್ತದೆ. ಹೀಗೆ ಭಾರೀ ಉಷ್ಣತೆ ಹೊಂದಿರುವ ರಾಕೆಟ್‌ ಅನ್ನು ಆಫ್ ಮಾಡಿ ಪುನಃ ಚಾಲೂ ಮಾಡುವುದು ಅತ್ಯಂತ ಕ್ಲಿಷ್ಟಕರ ಪ್ರಕ್ರಿಯೆ. ಹೀಗಾಗಿ ಇಸ್ರೋ ಮುಂದೆ ಬಹುದೊಡ್ಡ ಸವಾಲಾಗಿದೆ.

No Comments

Leave A Comment