Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭ... ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಕಾಶ್ಮೀರ ನಮ್ಮದು,ಯಾರೂ ಅದನ್ನು ಪಡೆಯುವ ಕನಸು ಕಾಣಬೇಡಿ-ಅಮಿತ್‌ ಶಾ

45ಕೋಝಿಕ್ಕೋಡ್(ಕೇರಳ): ‘ಕಾಶ್ಮೀರ ನಮ್ಮದು,ಯಾರೂ ಅದನ್ನು ಪಡೆಯುತ್ತೇವೆ ಎನ್ನುವ ಕನಸು ಕಾಣಬೇಡಿ.ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಪಾಕಿಸ್ಥಾನದ ವಿರುದ್ಧ ಗುಡುಗಿದ್ದಾರೆ.

ಭಾನುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅಮಿತ್‌ ಶಾ ‘ಉಗ್ರವಾದದ ವಿರುದ್ಧ ಎಲ್ಲಾ ಪಕ್ಷಗಳು ಒಂದಾಗಿ ಹೋರಾಟ ಮಾಡುವ ಮೂಲಕ ನಮ್ಮ ಸೇನೆಗೆ ,ಸರಕಾರಕ್ಕೆ ನೆರವಾಗಬೇಕು’ ಎಂದರು.

ಉರಿ ದಾಳಿ ಗೆ ತೀವ್ರ ಖಂಡನೆ ವ್ಯಕ್ತ ಪಡಿಸಿದ ಶಾ ‘ನವಾಜ್‌ ಶರೀಫ್ ವಿಶ್ವಸಂಸ್ಥೆಯಲ್ಲಿ ಉಗ್ರ ಬಹ್ರಾನ್‌ ವಾನಿ ಪರವಾಗಿ ಮಾತನಾಡಿದ್ದಾರೆ. ಇದು ಅವರು ಉಗ್ರವಾದವನ್ನು ಬೆಂಬಲಿಸುವುದಕ್ಕೆ ಸಾಕ್ಷಿಯಾಗಿದೆ’ ಎಂದರು.

No Comments

Leave A Comment