Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಡಿವೈಎಸ್‌ಪಿ ಆಗಿದ್ದ ಅನುಪಮಾ ಶೆಣೈ ಮರು ನೇಮಕ?

d-4aಬೆಂಗಳೂರು: ಪೊಲೀಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಅವರನ್ನು ಮರು ನೇಮಕ ಮಾಡಲು ಅವಕಾಶ ಇದೆಯೇ ಎಂಬ ಬಗ್ಗೆ ಗೃಹ ಇಲಾಖೆ ಪರಿಶೀಲಿಸುತ್ತಿದೆ.

ಕೂಡ್ಲಿಗಿ ಡಿವೈಎಸ್‌ಪಿ ಆಗಿದ್ದ ಅನುಪಮಾ ನೀಡಿರುವ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲು ಕರ್ನಾಟಕ ನಾಗರಿಕ ಸೇವಾ ನಿಯಮದಲ್ಲಿ (ಕೆಸಿಎಸ್‌ಆರ್‌) ಅವಕಾಶಗಳಿವೆಯೇ ಎಂಬ ಬಗ್ಗೆ ತಿಳಿಸುವಂತೆ ಸಿಬ್ಬಂದಿ ಮತ್ತು  ಆಡಳಿತ ಸುಧಾರಣಾ ಇಲಾಖೆಗೆ ಗೃಹ ಇಲಾಖೆ ಪತ್ರ ಬರೆದಿದೆ.

ಡಿಪಿಎಆರ್‌ ಮುಂದಿನ ವಾರ ತನ್ನ ಅಭಿಪ್ರಾಯ ತಿಳಿಸಲಿದೆ. ಅನುಪಮಾ ಜೂ. 4ರಂದು ರಾಜೀನಾಮೆ ನೀಡಿದ್ದರು. ಅದನ್ನು ಅದೇ ತಿಂಗಳ 10ರಂದು ಸರ್ಕಾರ ಅಂಗೀಕರಿಸಿದೆ. ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆಯಲು ಅವಕಾಶ ನೀಡುವಂತೆ ಶೆಣೈ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದಾರೆ.

‘ರಾಜೀನಾಮೆ ಪತ್ರದಲ್ಲಿ ಹಾಗೂ ಸರ್ಕಾರದ ಅಂಗೀಕಾರ ಪತ್ರದಲ್ಲಿ ತಾಂತ್ರಿಕ ದೋಷಗಳಿರುವುದರಿಂದ ಸ್ವೀಕಾರಕ್ಕೆ ಅರ್ಹವಾಗಿಲ್ಲ. ಮುಖ್ಯಮಂತ್ರಿ ಮಧ್ಯ ಪ್ರವೇಶಿಸಿ ತಮ್ಮ ಮರು ನೇಮಕಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

‘ಕುಟುಂಬದ ಸದಸ್ಯರು, ಸ್ನೇಹಿತರು, ಹಿತೈಷಿಗಳ ಒತ್ತಾಯಕ್ಕೆ ಕಟ್ಟು ಬಿದ್ದು ರಾಜೀನಾಮೆ ಹಿಂದಕ್ಕೆ ಪಡೆಯಲು ಬಯಸಿದ್ದೇನೆ’ ಎಂದು ಅನುಪಮಾ ಶೆಣೈ ತಿಳಿಸಿದ್ದಾರೆ.

No Comments

Leave A Comment