Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ರಾಜ್ಯ ಗುಡ್ಡಗಾಡು ಓಟ: ಕೀರ್ತಿರಾಜ್‌, ವಂದನಾಗೆ ಪ್ರಶಸ್ತಿ ಗರಿ

25ckm1ಚಿಕ್ಕಮಗಳೂರು:  ಜಿಲ್ಲೆಯ ಯುವ ಪ್ರತಿಭೆಗಳಾದ ಕೀರ್ತಿರಾಜ್‌ ಮತ್ತು ವಂದನಾ ಚಿಕ್ಕಮಗಳೂರು ಗಾಲ್ಫ್‌ ಕ್ಲಬ್‌ ಮತ್ತು ಬೆಂಗಳೂರಿನ ಲೆಗಸಿ ಅಪ್ರಿಶಿಯೇಟ್ ಲೈಫ್ ಸಂಸ್ಥೆ ಆಶ್ರಯದಲ್ಲಿ ಪಶ್ಚಿಮಘಟ್ಟ ಪರಿಸರದ ಸಂರಕ್ಷಣೆ ಅರಿವು ಮೂಡಿಸುವ ಹೆಗ್ಗುರಿಯೊಂದಿಗೆ ಭಾನುವಾರ ಇಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ 10 ಕಿಲೋ ಮೀಟರ್‌ ದೂರದ ಗುಡ್ಡಗಾಡು ಓಟ ಸ್ಫರ್ಧೆಯಲ್ಲಿ ವೇಗದ ಓಟಗಾರರಾಗಿ ಹೊರಹೊಮ್ಮಿದರು.

ವೃತ್ತಿಯಲ್ಲಿ ಪೇಂಟರ್‌ ಆಗಿರುವ 19ರ ಹರೆಯದ, ತಾಲ್ಲೂಕಿನ ಕಲ್ಲತ್ತಿಪುರದ ಕೀರ್ತಿರಾಜ್‌, ಪುರುಷರ ವಿಭಾಗದಲ್ಲಿ ವೃತ್ತಿಪರ ಸ್ಪರ್ಧಿಗಳನ್ನು ಹಿಂದಿಕ್ಕಿದರು. 41 ನಿಮಿಷ, 54 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಮಹಿಳೆಯರ ವಿಭಾಗದಲ್ಲಿ ನಗರದ ರಾಮನಹಳ್ಳಿಯ ವಂದನಾ ಪುರುಷರಿಗೆ ಸರಿಸಮಾನಗಿ ಓಡಿ, 59 ನಿಮಿಷ 41 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಸಂಪಾದಿಸಿದರು.

ವಂದನಾ ಅಖಿಲ ಭಾರತಮಟ್ಟದ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್‌ ಕೂಟ ಮತ್ತು ರಾಷ್ಟ್ರಮಟ್ಟದ ಗುಡ್ಡಗಾಡು ಸ್ಪರ್ಧೆಯಲ್ಲಿ ರಾಜ್ಯ ಪ್ರತಿನಿಧಿಸಿದ್ದಾರೆ. ಹುಟ್ಟೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇವರು ಶಿವಮೊಗ್ಗ ವಿವಿಯ ಶಂಕರಘಟ್ಟದಲ್ಲಿ ಈಗ ಬಿಪಿ.ಇಡಿ ವಿದ್ಯಾರ್ಥಿನಿ.

ಬೆಂಗಳೂರಿನ ಪ್ರಿಯಾಂಕ ಮಲ್ಲೇಶ್‌ ಮತ್ತು ಎಚ್‌.ಜೆ.ಗಾನವಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಮಹಿಳೆಯರ 5 ಕಿ.ಮೀ ವಿಭಾಗದಲ್ಲಿ ಚಿಕ್ಕಮಗಳೂರಿನ ಶಿಶಿರಗೌಡ 31 ನಿಮಿಷ, 40 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರೆ, ಬೆಂಗಳೂರಿನ ಸುಧಾ ಭಟ್‌ ಮತ್ತು ಶಾನ್ಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಸಂಪಾದಿಸಿದರು.

No Comments

Leave A Comment