Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ 72ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ದಾದಾಗಿರಿ ರಾಜಕೀಯಗಳಿಗಿಲ್ಲಿ ಜಾಗವಿಲ್ಲ: ಎಂಎನ್ಎಸ್’ಗೆ ಬಿಜೆಪಿ

shaina-ncಮುಂಬೈ: ಇಡೀ ಭಾರತ ದೇಶ ಭಯೋತ್ಪಾದನೆ ವಿರುದ್ಧ ಹೋರಾಡಲು ಒಗ್ಗೂಡಿದ್ದು, ರಾಜಕೀಯ ದಾದಾಗಿರಿಗಿಲ್ಲ ಜಾಗವಿಲ್ಲ ಎಂದು ಬಿಜೆಪಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್)ಗೆ ಬಿಜೆಪಿ ತಿಳಿಸಿದೆ.

ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕಿ ಶೈನಾ ಎನ್.ಸಿ ಅವರು, ಇಡೀ ದೇಶದ ಜನತೆ ಭಯೋತ್ಪಾದನೆ ವಿರುದ್ಧ ಹೋರಾಡಲು ಒಗ್ಗೂಡಿದ್ದು, ರಾಜಕೀಯ ದಾದಾಗಿರಿಗೆ ಇಲ್ಲಿ ಅವಕಾಶವಿಲ್ಲ.

ಸಂವೇದನೆಶೀಲತೆಯಿಂದ ಹೇಳಿಕೆಗಳನ್ನು ನೀಡಿ ರಾಜಕೀಯ ಲಾಭ ಪಡೆಯಲು ಯತ್ನ ನಡೆಸುತ್ತಿದ್ದರೆ ಅದು ಸಹಾಯವಾಗುವುದಿಲ್ಲ ಎಂದು ಹೇಳಿದ್ದಾರೆ.ನಮ್ಮ ಆದ್ಯತೆಯಿರುವುದಾದರೂ ಯಾವುದಕ್ಕೆ? ವಿಶ್ವದಲ್ಲಿ ಭಯೋತ್ಪಾದನೆ ಎಂಬ ಪಿಡುಗನ್ನು ಹೋಗಲಾಡಿಸುವುದು. ನಾವು ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತಿದ್ದು, ದೇಶದಲ್ಲಿರುವ ಪ್ರತೀ ರಾಜಕೀಯ ಪಕ್ಷಗಳು ನಮ್ಮೊಂದಿಗೆ ಕೈಜೋಡಿಸಬೇಕಿದೆ.

ಕೆಲವರು ಸಂವೇದನಾಶೀಲತೆಯಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದಯವಿಟ್ಟು ನಿಮ್ಮ ಸಿದ್ಧಾಂತಗಳನ್ನು ಬೇರೆಯವರ ಮೇಲೆ ಹೇರುವ ಮೂಲಕ ನೀವು ತಪ್ಪು ದಾರಿಗಿಳಿಯಬೇಡಿ.ಇದು ಭಾವುಕತೆಯ ಸಮಯವಾಗಿದ್ದು, ಪಾಕಿಸ್ತಾನ ಕಲಾವಿದರನ್ನು ದೇಶದಿಂದ ಹೊರಹಾಕುವಂತೆ ಮಾಡುವುದಕ್ಕಿಂತಲೂ ಭಯೋತ್ಪಾದನೆ ವಿರುದ್ಧ ಹೋರಾಡುವುದಕ್ಕೆ ನಾವು ಮೊದಲ ಆದ್ಯತೆಯನ್ನು ನೀಡಬೇಕಿದೆ.

ತಪ್ಪಿಸಿಕೊಳ್ಳುವ ಸಮಯ ಇದಲ್ಲ. ಪಾಕ್ ವಿರುದ್ಧ ಸಿಡಿದೇಳಬೇಕಾದರೆ, ಭಯೋತ್ಪಾದನೆ ವಿರುದ್ಧ ನಮ್ಮ ಹೋರಾಟದೊಂದಿಗೆ ಕೈಜೊಡಿಸಿ ಎಂದು ಶೈನಾ ಹೇಳಿದ್ದಾರೆ.

ಕಾಶ್ಮೀರದ ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ನಡೆದ ಉಗ್ರರ ದಾಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯು, ಭಾರತದಲ್ಲಿರುವ ಪಾಕಿಸ್ತಾನ ಕಲಾವಿದರು ಕೂಡಲೇ ದೇಶವನ್ನು ಬಿಟ್ಟು ಹೋಗುವಂತೆ ಕರೆ ನೀಡಿತ್ತು. ಅಲ್ಲದೆ, 48 ಗಂಟೆಗಳ ಗಡುವನ್ನೂ ನೀಡಿತ್ತು.

No Comments

Leave A Comment