Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ 72ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಇಶ್ರತ್ ಜಹಾನ್ ಪ್ರಕರಣದ ಕಡತ ನಾಪತ್ತೆ: ಗೃಹ ಇಲಾಖೆಯಿಂದ ಎಫ್ ಐಆರ್ ದಾಖಲು

ishraನವದೆಹಲಿ: ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣದ ಕಡತ ನಾಪತ್ತೆ ಪ್ರಕರಣ ಸಂಬಂಧ ಕೇಂದ್ರ ಗೃಹ ಇಲಾಖೆ ಭಾನುವಾರ ಎಫ್ ಐಆರ್ ದಾಖಲು ಮಾಡಿದೆ.

ಪ್ರಕರಣ ಸಂಬಂಧ ಇಂದು ದೆಹಲಿ ಪೊಲೀಸರ ಮುಖಾಂತರ ಕೇಂದ್ರ ಗೃಹ ಇಲಾಖೆ ಎಫ್ ಐಆರ್ ದಾಖಲಿಸಿದ್ದು, ಕಡತ ನಾಪತ್ತೆ ಹಿಂದಿನ ಕಾಣದ ಕೈಗಳ ಕುರಿತು ತನಿಖೆ ನಡೆಸುವಂತೆ  ಅಧಿಕೃತವಾಗಿ ಪ್ರಕರಣ ದಾಖಲಿಸಿದೆ.

ಈ ಹಿಂದೆ ಇದೇ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಬಿ.ಕೆ.ಪ್ರಸಾದ್ ಅವರ ನೇತೃತ್ವದಲ್ಲಿ ಏಕ ವ್ಯಕ್ತಿ  ತನಿಖಾ ಸಮಿತಿಯನ್ನು ರಚನೆ ಮಾಡಿತ್ತು.ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದ ಈ ಹೈ ಪ್ರೊಫೈಲ್ ಕೇಸ್ ನ ಪ್ರಮುಖ ಕಡತಗಳು ಯುಪಿಎ-2 ಆಡಳಿತಾವಧಿಯಲ್ಲಿ ನಾಪತ್ತೆಯಾಗಿದ್ದವು.

ಇದೀಗ ಈ  ಸಂಬಂಧ ಕೇಂದ್ರ ಗೃಹ ಇಲಾಖೆ ಎಫ್ ಐಆರ್ ದಾಖಲಿಸಿದೆ. ಈ ಸಂಬಂದ ಸಂಸತ್ ಭವನದ ಪೊಲೀಸರಲ್ಲಿ ದೂರು ದಾಖಲಾಗಿದ್ದು, ಐಪಿಸಿ ಸೆಕ್ಷನ್ 409ರಡಿಯಲ್ಲಿ ಅಧಿಕೃತವಾಗಿ ದೂರು  ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ಆರಂಭಿಸಲಿದ್ದಾರೆ.ಕಳೆದ ಮಾರ್ಚ್ 10ರಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು,ಇಶ್ರತ್ ಜಹಾನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ದಾಖಲೆಗಳು ಸಚಿವಾಲಯದಿಂದ ಕಾಣೆಯಾಗಿವೆ  ಎಂದು ಲೋಕಸಭೆಯಲ್ಲಿ ಹೇಳಿದ್ದರು.

“ಅಂದಿನ ಗೃಹ ಕಾರ್ಯದರ್ಶಿ 2009ರಲ್ಲಿ ಅಟಾರ್ನಿ ಜನರಲ್ ಅವರಿಗೆ ಬರೆದ ಎರಡು ಪತ್ರಗಳು ಕಾಣೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಅಂದಿನ ಅಟಾರ್ನಿ ಜನರಲ್ ಎರಡು ಅಫಿಡವಿಟ್ ಗಳನ್ನು ನಮೂದಿಸಿದ್ದಾರೆ. ಅವುಗಳು ಲಭ್ಯವಿಲ್ಲ” ಎಂದು ಇಶ್ರತ್ ಜಹಾನ್ ನಕಲಿ ಎಂಕೌಂಟರ್ ಪ್ರಕರಣದ ಕುರಿತು ಲೋಕಸಭೆಯಲ್ಲಿ  ಚರ್ಚಿಸುವಾಗ ರಾಜನಾಥ್ ಸಿಂಗ್ ತಿಳಿಸಿದ್ದರು.

No Comments

Leave A Comment