Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಚಿಲ್ಲರೆ ಗಲಾಟೆ: ಚಲಿಸುತ್ತಿದ್ದ ಬಸ್‌ನಿಂದ ನದಿಗೆ ಹಾರಿದ ಕಂಡಕ್ಟರ್‌

drown-460x250ಸುಬ್ರಹ್ಮಣ್ಯ: ಇಲ್ಲಿ  ಸರಕಾರಿ ಬಸ್ಸೊಂದು ಚಲಿಸುತ್ತಿರುವಾಗಲೇ ಅದರ ನಿರ್ವಾಹಕ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆ ಭಾನುವಾರ  ನಡೆದಿದೆ. 

ಕಂಡಕ್ಟರ್‌ ದೇವಿಪ್ರಸಾದ್‌ ಶೆಟ್ಟಿ ಎನ್ನುವವರು ನೀರಿನಲ್ಲಿ ಕೊಚ್ಚಿ ಹೋಗಿದ್ದು ,ಅವರ ಶವಕ್ಕಾಗಿ ಇದೀಗ ಶೋಧ ನಡೆಸಲಾಗುತ್ತಿದೆ.

ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬಂದ ಬಸ್‌ನಲ್ಲಿ ಪ್ರಯಾಣಿಕ ಮಹಿಳೆಯೊಂದಿಗೆ ಚಿಲ್ಲರೆ ವಿಚಾರಕ್ಕೆ ಸಂಬಂಧಿಸಿ ತೀವ್ರ ವಾಗ್ವಾದ ನಡೆದ ಬಳಿಕ ಮನನೊಂದು ಕುಮಾರಧಾರ ನದಿಗೆ ಹಾರಿದ್ದಾರೆ ಎಂದು ಹೇಳಲಾಗಿದೆ. 

ಮಂಗಳೂರಿನಿಂದ ಪ್ರಯಾಣ ಆರಂಭಿಸಿದ ಮಹಿಳೆ 500 ರೂಪಾಯಿ ನೀಡಿದ್ದರು. ಚಿಲ್ಲರೆ ಆಗಿ 100 ರೂಪಾಯಿ ಮಾತ್ರ ಕಂಡಕ್ಟರ್‌ ವಾಪಾಸ್‌ ನೀಡಿದ್ದು, ಇದಕ್ಕಾಗಿ ಮಹಿಳೆ ಸಿಟ್ಟಾಗಿ ಬೈದಿದ್ದು, ಅದು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ವಾಗ್ವಾದ ಜೋರಾದಾಗ ಮಾರ್ಗ ಮಧ್ಯೆ ಬಸ್‌ ಚಾಲಕ ಕಡಬ ಪೊಲೀಸ್‌ ಠಾಣೆಗೆ ಬಸ್‌ ಒಯ್ದು ಸಂಧಾನ ನಡೆಸಿದ್ದಾರೆ,ಆ ಬಳಿಕವೂ ಜಗಳ ಮುಂದುವರಿದಿತ್ತು ಎಂದು ತಿಳಿದು ಬಂದಿದೆ. 

ಬಸ್‌ ಚಾಲಕ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

No Comments

Leave A Comment