Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಒಬಾಮಾ ಸಹಿ ನಕಲಿ ಮಾಡಿ,ನಾಸಾದಲ್ಲಿ ಕೆಲಸ ಸಿಕ್ಕಿದೆ ಎಂದ ಯುವಕ ಅರೆಸ್ಟ್

dc-coveiಭೋಪಾಲ್:ಈತ ಭಲೇ ಕಿಲಾಡಿನೇ ಯಾಕೆಂದರೆ ಅಮೆರಿಕದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯಾದ ನಾಸಾದಲ್ಲಿ ತನಗೆ ಕೆಲಸ ಸಿಕ್ಕಿದೆ ಎಂದು ಹೇಳಿ ಮೋಸ ಮಾಡಿದ್ದ ಯುವಕ ಈಗ ಜೈಲುಕಂಬಿ ಎಣಿಸುವಂತಾಗಿದೆ. ಮಧ್ಯಪ್ರದೇಶದ ಪೊಲೀಸರು ಶುಕ್ರವಾರ ಯುವಕನನ್ನು ಬಂಧಿಸಿದ್ದು, ಆತನಿಂದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ನಕಲಿ ಸಹಿ ಒಳಗೊಂಡ ಐಡೆಂಟಿಟಿ ಕಾರ್ಡ್ ಅನ್ನು ವಶಪಡಿಸಿಕೊಂಡಿದ್ದಾರೆ.

ಏನಿದು ಪ್ರಕರಣ:
ಎನ್ ಡಿಟಿವಿ ವರದಿ ಪ್ರಕಾರ, ಮಧ್ಯಪ್ರದೇಶ ಕಮಲಾಪುರ್ ನ ನಿವಾಸಿ ಅನ್ಸಾರ್ ಖಾನ್ (20ವರ್ಷ) ಎಂಬ ಯುವಕ ತನಗೆ ಅಮೆರಿಕದ ನಾಸಾದ ಸ್ಪೇಸ್ ಅಂಡ್ ಫುಡ್ ರಿಸರ್ಚ್ ವಿಭಾಗದಲ್ಲಿ ಕೆಲಸ ಸಿಕ್ಕಿದೆ. ವರ್ಷಕ್ಕೆ 1.85 ಕೋಟಿ ರೂಪಾಯಿ ಸಂಬಳ ಎಂದು ಹೇಳಿದ್ದ.

ತಮ್ಮ ಹಳೆ ವಿದ್ಯಾರ್ಥಿಗೆ ನಾಸಾದಲ್ಲಿ ಕೆಲಸ ಸಿಕ್ಕಿದೆ ಎಂಬ ಸುದ್ದಿ ಕೇಳಿ ಕಮಲಾಪುರದ ಪ್ರಾಥಮಿಕ ಶಾಲೆಯಲ್ಲಿ ಅನ್ವರ್ ಗೆ ಸನ್ಮಾನ ಸಹ ಮಾಡಿದ್ದರು. ಏತನ್ಮಧ್ಯೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಶಶಿಕಾಂತ್ ಶುಕ್ಲಾ ಅವರನ್ನು ಆಹ್ವಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಖಾನ್ ಕುತ್ತಿಗೆಯಲ್ಲಿದ್ದ ಐಡೆಂಟಿಟಿ ಕಾರ್ಡ್ ಅನ್ನು ಶುಕ್ಲಾ ಗಮನಿಸಿದಾಗ, ಅನುಮಾನಗೊಂಡು ಅನ್ಸಾರ್ ಬಗ್ಗೆ ವಿಚಾರಿಸಲು ಸೂಚಿಸಿದ್ದರು. ವಿಚಾರಣೆಯಲ್ಲಿ ಖಾನ್ ಪಿಯುಸಿ ಪಾಸ್ ಆಗಿರುವುದು ತಿಳಿದು ಬರುವ ಮೂಲಕ ನಾಸಾದಲ್ಲಿ ಕೆಲಸ ಸಿಕ್ಕಿದೆ ಎಂದು ಸುಳ್ಳು ಹೇಳಿರುವ ಅಂಶ ಬೆಳಕಿಗೆ ಬಂದಿತ್ತು.

ಹೌದು ಖದೀಮ ಅನ್ಸಾರ್ ಫೋಟೋ ಸ್ಟುಡಿಯೋ ಒಂದರಲ್ಲಿ ಐಡೆಂಟಿಟಿ ಕಾರ್ಡ್ ಅನ್ನು ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಅಷ್ಟೇ ಅಲ್ಲ ತನಗೆ ನಾಸಾದಲ್ಲಿ ಕೆಲಸ ಸಿಕ್ಕಿದೆ, ತನಗೆ ಅಮೆರಿಕಕ್ಕೆ ಹೋಗಲು ಹಣಕಾಸಿನ ನೆರವು ಬೇಕು. ನಾಸಾದಲ್ಲಿ ಸಂಬಳ ಸಿಕ್ಕ ಕೂಡಲೇ ನಿಮ್ಮ ಹಣ ವಾಪಸ್ ಕೊಡುತ್ತೇನೆ ಎಂದು ನಂಬಿಸಿ ಖಾನ್ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದ ಅಂಶವೂ ಬಯಲಾಗಿದೆ.

Tags:

Read more at http://www.udayavani.com/kannada/news/national-news/170860/mp-youth-held-for-faking-rs-1-8-crore-job-at-nasa-forging-obama-s-sign#ZFpOFiW6WwT68jmX.99

 

No Comments

Leave A Comment