Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅ. 1-12ರ ವರೆಗೆ ಮಂಗಳೂರು ದಸರಾ

kudroliಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅ. 1ರಿಂದ 12ರ ವರೆಗೆ ಮಂಗಳೂರು ದಸರಾ-2016 ನವರಾತ್ರಿ ಮಹೋತ್ಸವ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ.

ಅ. 1ರಂದು ಬೆಳಗ್ಗೆ 11.15ಕ್ಕೆ ಶಾರದಾದೇವಿ ಹಾಗೂ ನವದುರ್ಗೆಯರ ಪ್ರತಿಷ್ಠೆಯೊಂದಿಗೆ ನವರಾತ್ರಿ ಮಹೋತ್ಸವ ಆರಂಭಗೊಳ್ಳಲಿದೆ. ಪ್ರತಿದಿನ ಬೆಳಗ್ಗೆ ಹೋಮ, ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಮಹಾಪೂಜೆ ನಡೆಯಲಿದೆ. ಅ. 9ರಂದು ಬೆಳಗ್ಗೆ 10 ಗಂಟೆಗೆ ಚಂಡಿಕಾ ಹೋಮ, ಹಗಲು ಉತ್ಸವ ಜರಗಲಿದೆ. ಅ. 10ರಂದು ಅಪರಾಹ್ನ 1 ಗಂಟೆಗೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಸಚಿವ ಬಿ. ಜನಾರ್ದನ ಪೂಜಾರಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವಮಾನವ ತಣ್ತೀವನ್ನು ಜಗತ್ತಿಗೆ ಸಾರಿದ ಮಹಾನ್‌ ದಾರ್ಶನಿಕ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ, ಒಂದು ಶತಮಾನಕ್ಕೂ ಮೀರಿದ ಇತಿಹಾಸ ಇರುವ ಪುಣ್ಯಕ್ಷೇತ್ರ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರ. ಇಲ್ಲಿ 10 ದಿನಗಳ ಕಾಲ ನವರಾತ್ರಿ ಮಹೋತ್ಸವ ಅತ್ಯಂತ ವೈಭವಪೂರ್ಣವಾಗಿ ನಡೆಯುತ್ತಿದೆ. 1990ರಿಂದ ನಿರಂತರ ನಡೆದುಕೊಂಡು ಬರುತ್ತಿರುವ ನವರಾತ್ರಿ ಮಹೋತ್ಸವ ಮಂಗಳೂರು ದಸರಾದ ಖ್ಯಾತಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ವ್ಯಾಪಿಸಿದೆ. ಮಂಗಳೂರು ದಸರಾ ಮೆರವಣಿಗೆ ವೀಕ್ಷಿಸಲು ದೇಶ-ವಿದೇಶಗಳಿಂದ ಭಕ್ತಸಾಗರ ಹರಿದು ಬರುತ್ತಿದೆ. ಶ್ರೀ ಗೋಕರ್ಣನಾಥ ದೇವರು, ಬ್ರಹ್ಮಶ್ರೀ ನಾರಾಯಣಗುರುಗಳ ಅಶೀರ್ವಾದ, ಆಡಳಿತ ಮಂಡಳಿಯ ಶ್ರಮ, ಜನತೆಯ ಬೆಂಬಲ, ಪ್ರೋತ್ಸಾಹ ದೊಂದಿಗೆ ಅತ್ಯಂತ ವೈಭವದಿಂದ ನಡೆಯುತ್ತಿದೆ. ಮಂಗಳೂರು ದಸರಾದ ಬೆಳ್ಳಿಹಬ್ಬ 2015ರಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗಿದೆ ಎಂದು ಅವರು ವಿವರಿಸಿದರು.

ಈ ಬಾರಿಯ ಮಂಗಳೂರು ದಸರಾದ ಸಿದ್ಧತೆ ಭರದಿಂದ ಸಾಗುತ್ತಿದೆ. ಮಂಗಳೂರು ದಸರಾ ಮೆರವಣಿಗೆಯ ಪೂರ್ವಸಿದ್ಧತೆಗಳು ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ಅ. 1ರಿಂದ 10ರ ವರೆಗೆ ಸಂಜೆ 6ರಿಂದ ಶ್ರೀ ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಹೊರ ರಾಜ್ಯಗಳ ಮತ್ತು ರಾಷ್ಟ್ರದ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಆಡಳಿತ ಸಮಿತಿಯ ಖಜಾಂಚಿ ಪದ್ಮರಾಜ ಆರ್‌. ತಿಳಿಸಿದರು.

ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕುಳೂರು, ಸದಸ್ಯರಾದ ರವಿಶಂಕರ ಮಿಜಾರು, ಬಿ.ಕೆ. ತಾರಾನಾಥ್‌, ಕೆ. ಮಹೇಶ್ಚಂದ್ರ ಹಾಗೂ ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ದೇವೇಂದ್ರ ಪೂಜಾರಿ, ವಿಶ್ವನಾಥ್‌, ಪಿ.ಕೆ. ಲೋಹಿತ್‌ ಪೂಜಾರಿ, ಡಾ| ಬಿ.ಜಿ. ಸುವರ್ಣ, ಎಂ. ಶೇಖರ ಪೂಜಾರಿ, ಎನ್‌. ಹರಿಶ್ಚಂದ್ರ, ರಾಧಾಕೃಷ್ಣ, ಡಿ.ಡಿ. ಕಟ್ಟೆಮಾರ್‌, ಡಾ| ಅನುಸೂಯ ಬಿ.ಟಿ. ಸುವರ್ಣ, ಲೀಲಾಕ್ಷ ಕರ್ಕೆರಾ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment