Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಭಾರತೀಯ ಸೇನೆಗೆ ಹೆದರಿ ಉಗ್ರ ಕ್ಯಾಂಪ್ ಗಳ ಸ್ಥಳಾಂತರ ಮಾಡಿದ ಪಾಕಿಸ್ತಾನ?

terror-cನವದೆಹಲಿ: ಅತ್ತ ಕೇರಳದ ಕಲ್ಲಿಕೋಟೆಯಲ್ಲಿ ಉರಿ ಉಗ್ರ ದಾಳಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಭಾಷಣದ ಬೆನ್ನಲ್ಲೇ ಇತ್ತ ಪಾಕಿಸ್ತಾನ ತನ್ನ ವಶದ ಕಾಶ್ಮೀರದಲ್ಲಿರುವ ಉಗ್ರ ಕ್ಯಾಂಪ್  ಗಳನ್ನು ಸ್ಥಳಾಂತರ ಮಾಡಿದೆ ಎಂದು ಹೇಳಲಾಗುತ್ತಿದೆ.

ಉರಿ ಉಗ್ರದಾಳಿ ಕುರಿತಂತೆ ಪಾಕಿಸ್ತಾನದ ವಿರುದ್ಧ ಕೆಂಡಾಮಂಡಲವಾಗಿರುವ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ನೆಲೆಗಳ ಮೇಲೆ ದಾಳಿ ನಡೆಸುವ ಕುರಿತು ಊಹಾಪೋಹಗಳು  ಹರಿದಾಡುತ್ತಿರುವ ಬೆನ್ನಲ್ಲೇ, ಎಚ್ಚೆತ್ತಿರುವ ಪಾಕಿಸ್ತಾನ ತನ್ನ ವಶದಲ್ಲಿರುವ ಕಾಶ್ಮೀರದಲ್ಲಿನ ಉಗ್ರ ನೆಲೆಗಳನ್ನು ಸ್ಥಳಾಂತರ ಮಾಡಿದೆ ಎಂದು ಹೇಳಲಾಗುತ್ತಿದೆ. ಖಾಸಗಿ ವೆಬ್ ಸೈಟ್ ಒಂದು ಈ  ಬಗ್ಗೆ ವರದಿ ಮಾಡಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಸುಮಾರು 15 ಪ್ರಮುಖ ಉಗ್ರ ಕ್ಯಾಂಪ್ ಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

ಅಂತೆಯೇ ಪಾಕಿಸ್ತಾನ ಸೇನೆ ಈ ಹಿಂದೆ ಉದ್ದೇಶಿಸಿತ್ತು ಎಂದು ಹೇಳಲಾಗುತ್ತಿರುವ ಭಾರತಕ್ಕೆ 200 ಉಗ್ರರನ್ನು ಕಳುಹಿಸುವ ಯೋಜನೆಯನ್ನು ಕೂಡ ಮುಂದಕ್ಕೆ ಹಾಕಿದೆ ಎಂದು ವೆಬ್ ಸೈಟ್ ವರದಿ ಮಾಡಿದೆ. ಭಾರತದ ಮೇಲೆ ದಾಳಿ ಮಾಡಲು ಈ 200 ಉಗ್ರರನ್ನು ಸಿದ್ಧ ಪಡಿಸಲಾಗಿತ್ತಾದರೂ ಕೊನೆ ಕ್ಷಣದಲ್ಲಿ ಪಾಕಿಸ್ತಾನ ಅವರನ್ನು ಹಿಂದಕ್ಕೆ ಕರೆಸಿಕೊಂಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಗಡಿಯಾಚೆಗಿನ ಪಾಕಿಸ್ತಾನ ಚಲನವಲನದ ಮೇಲೆ ನಿಗಾ ಇರಿಸಿರುವ ಭದ್ರತಾ ಪಡೆ ಮತ್ತು ಗುಪ್ತಚರ ಮೂಲಗಳು ಈ ವಿಷಯವನ್ನು ದೃಢೀಕರಿಸಿ ಎಂದು ಹೇಳಲಾಗುತ್ತಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ಪ್ರದೇಶದಲ್ಲಿದ್ದ ಸುಮಾರು 20 ಉಗ್ರ ಶಿಬಿರಗಳನ್ನು ಉರಿ ದಾಳಿ ಬಳಿಕ ಪಾಕಿಸ್ತಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನು ಕೆಲವು ಶಿಬಿರಗಳನ್ನು ಮುಚ್ಚಲಾಗಿದೆ.

ಉಗ್ರರಿದ್ದ ಸ್ಥಳಗಳಲ್ಲಿ ಪಾಕ್ ಗಡಿಭದ್ರತಾ ಪಡೆ ಯೋಧರನ್ನು ಬದಲಿಯಾಗಿ ನಿಯೋಜಿಸಲಾಗಿದೆ. ಜತೆಗೆ ಗಡಿ ಕಾಯುತ್ತಿರುವ ಎಲ್ಲ ಸೈನಿಕರಿಗೆ ಪಾಕಿಸ್ತಾನ ರಜೆ ರದ್ದು ಮಾಡಿದೆ ಎಂದು ಗುಪ್ತಚರ ಅಧಿಕಾರಿಗಳು ಕೇಂದ್ರ ಗೃಹಸಚಿವಾಲಯಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇರಳದ ಕಲ್ಲಿಕೋಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿ, ಭಾರತ ಯಾವುದೇ ಕಾರಣಕ್ಕೂ ಉರಿ ಉಗ್ರ ದಾಳಿಯನ್ನು  ಮರೆಯುವುದಿಲ್ಲ. ಭಾರತದಲ್ಲಿ ನಡೆದ ಪ್ರತಿಯೊಂದು ದಾಳಿಗಳನ್ನು ಚುಕ್ತಾ ಮಾಡಲಾಗುತ್ತದೆ.

ಭಯೋತ್ಪಾದನೆಯನ್ನು ತನ್ನ ರಾಷ್ಟ್ರೀಯ ನೀತಿಯಾಗಿರಿಸಿಕೊಂಡಿರುವ ಪಾಕಿಸ್ತಾನವನ್ನು  ಜಾಗತಿಕವಾಗಿ ಮೂಲೆಗುಂಪು ಮಾಡುತ್ತೇವೆ ಎಂದು ಕಿಡಿಕಾರಿದ್ದರು.ಭಾರತದ ನಿಗಾಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಸಮೀಪದ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಸೈನಿಕರಿಗೆ ಸೂಚಿಸಲಾಗಿದ್ದು, ಜತೆಗೆ ಗುಪ್ತಚರ ದಳದ ಅಧಿಕಾರಿಗಳೂ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ

No Comments

Leave A Comment