Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಯುದ್ಧ ಅನಿವಾರ್ಯವಾದರೆ ಸೈನಿಕರೊಂದಿಗೆ ಯುದ್ಧದಲ್ಲಿ ಪಾಲ್ಗೊಳ್ಳುವೆ: ಅಣ್ಣಾ ಹಜಾರೆ

anna-hazareಮುಂಬೈ: ಪಾಕಿಸ್ತಾನದ ವಿರುದ್ಧ ಯುದ್ಧ ಅನಿವಾರ್ಯವಾದರೆ ತಾವು ಖಂಡಿಕ ಗಡಿಗೆ ತೆರಳಿ ಸೈನಿಕರೊಂದಿಗೆ ಸೇರಿ ಯುದ್ಧ ಮಾಡುತ್ತೇನೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಹಿರಿಯ  ಗಾಂಧಿವಾದಿ ಅಣ್ಣಾ ಹಜಾರೆ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರ ಹಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಣ್ಣಾ ಹಜಾರೆ ಅವರು, 18 ಭಾರತೀಯ ಸೈನಿಕರ ಸಾವಿಗೆ ಕಾರಣವಾದ ಉರಿ ಉಗ್ರದಾಳಿಯನ್ನು ಖಂಡಿಸಿದರು. 

ಪಾಕಿಸ್ತಾನ ನಮ್ಮ ನೆರೆ-ಹೊರೆಯ ದೇಶವಾಗಿದ್ದು, ಸೌಹಾರ್ಧಯುತವಾಗಿ ನಡೆದುಕೊಳ್ಳಬೇಕು. ನಮ್ಮ ಸೈನಿಕರ ಮೇಲೆ ಪಾಕಿಸ್ತಾನ ಪದೇ ಪದೇ ಉಗ್ರರ ಮೂಲಕ ದಾಳಿ ನಡೆಸುತ್ತಿದ್ದು, ಉರಿ  ಉಗ್ರ ದಾಳಿ ಇದೇ ಮೊದಲ ದಾಳಿ ಏನೂ ಆಲ್ಲ. ದಾಳಿಗಳ ಮೂಲಕ ದೇಶದ ಅಭಿವೃದ್ಧಿಗೆ ತೊಡಕುಂಟು ಮಾಡಲು ಅವರು ಯತ್ನಿಸುತ್ತಿದ್ದಾರೆ ಎಂದು ಹೇಳಿದರು.ಅಂತೆಯೇ ಪಾಕಿಸ್ತಾನ ಮಾತುಕೇಳಲು ಸಿದ್ಧವಿಲ್ಲ ಎಂದಾದರೆ, ಅಥವಾ ಆ ದೇಶದೊಂದಿಗೆ ಯುದ್ಧ ಅನಿವಾರ್ಯವಾದರೆ ಖಂಡಿತ ನಾನು ಕೂಡ ಯುದ್ಧ ಭೂಮಿಗೆ ತೆರಳುತ್ತೇನೆ.

ನನಗೆ 79  ವರ್ಷದ ಆದರೂ ಕೂಡ ಸೈನಿಕರೊಂದಿಗೆ ಗಡಿಗೆ ತೆರಳಿ ಹೋರಾಡುತ್ತೇನೆ ಎಂದು ಅಣ್ಣಾ ಹಜಾರೆ ಹೇಳಿದರು.

1965ರಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಅಣ್ಣಾ ಹಜಾರೆ, ಟ್ರಕ್ ಚಾಲಕರಾಗಿ ಸೇನೆ ಸೇರಿದ್ದರು. ಆ ಬಳಿಕ ಸೈನಿಕರಾಗಿ ಬಡ್ತಿ ಪಡೆದಿದ್ದ ಅವರು, 1965ರ ಭಾರತ-ಪಾಕ್  ಯುದ್ಧದಲ್ಲಿ ಗಡಿ ಭಾಗದ ಖೇಮ್ ಕರಣ್ ಸೆಕ್ಟರ್ನಲ್ಲಿ ಹೋರಾಡಿದ್ದರು.

No Comments

Leave A Comment