Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಕಾರ್ಪ್‌ ಬ್ಯಾಂಕ್‌ ಕಾರ್ಪೊರೇಟ್‌ ಕಚೇರಿ ಬೆಂಗಳೂರಿಗೆ?

ಉಡುಪಿ: ಉಡುಪಿಯಲ್ಲಿ ಜನಿಸಿದ ಕಾರ್ಪೊರೇಶನ್‌ ಬ್ಯಾಂಕ್‌ ಕಾರ್ಪೊರೇಟ್‌ ಕಚೇರಿ ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಗೊಳ್ಳುವುದೆ? ಅಂತಹ ಪ್ರಸ್ತಾವವೊಂದಿದೆ.

ಇತರ ಬ್ಯಾಂಕ್‌ಗಳೊಂದಿಗೆ ಪೈಪೋಟಿ ನೀಡುವುದು, ಇನ್ನಷ್ಟು ಪ್ರಗತಿ ಸಾಧಿಸುವುದು, ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯ ಅನುಕೂಲತೆಗಳನ್ನು ಪಡೆದುಕೊಳ್ಳುವುದು ಇದಕ್ಕೆ ಕಾರಣ ಎನ್ನಲಾಗಿದೆ.

1906ರಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರ ಅಧ್ಯಕ್ಷತೆಯಲ್ಲಿ ಉಡುಪಿಯಲ್ಲಿ ಸ್ಥಾಪನೆಗೊಂಡ ಬ್ಯಾಂಕ್‌ ಬಳಿಕ ಮಂಗಳೂರಿಗೆ ಪ್ರಧಾನ ಕಚೇರಿ ವರ್ಗಾವಣೆಯಾಯಿತು. 110 ವರ್ಷಗಳ ಭವ್ಯ ಇತಿಹಾಸ ಹೊಂದಿದ ಬ್ಯಾಂಕ್‌ಗೂ ಕರಾವಳಿಗೂ ಅವಿನಾಭಾವ ಸಂಬಂಧವಿದೆ. ಕರಾವಳಿಯಲ್ಲಿದ್ದುಕೊಂಡೇ ಮಾಡಿದ ಸಾಧನೆ ಅಸಾಧಾರಣವಾದುದು. ಬೆಂಗಳೂರಿಗೆ ಸ್ಥಳಾಂತರಿಸಿದರೆ ಅದಕ್ಕೆ ಭಾರೀ ಮೊತ್ತದ ಖರ್ಚುವೆಚ್ಚಗಳು ಬ್ಯಾಂಕ್‌ಗೆ ಹೊರೆಯಾಗಲಿದೆ.

ಮಂಗಳೂರು ನಗರವೂ ಈಗ ಇತರ ಮಹಾನಗರಗಳಿಗೆ ಪೈಪೋಟಿ ನೀಡುವಂತೆ ಬೆಳೆಯುತ್ತಿರುವಾಗ, ಐಟಿ ಕಂಪೆನಿಗಳು ಮಂಗಳೂರಿಗೆ ಲಗ್ಗೆ ಇಡುತ್ತಿರುವಾಗ ಕಾರ್ಪೊರೇಟ್‌ ಕಚೇರಿಯನ್ನು ಸ್ಥಳಾಂತರಿಸುವುದು ತರವಲ್ಲ ಎಂದು ಬ್ಯಾಂಕ್‌ ನೌಕರರು, ಗ್ರಾಹಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

No Comments

Leave A Comment