Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಟ್ರ್ಯಾಕ್ಟರ್‌ ಢಿಕ್ಕಿಯಾಗಿ ಬ್ಯಾಂಕ್‌ ಉದ್ಯೋಗಿ ಯುವತಿ ಸಾವು

mangala-raoಉಡುಪಿ: ಟ್ರ್ಯಾಕ್ಟರೊಂದು ಆಕ್ಟಿವಾ ಹೋಂಡಾಕ್ಕೆ ಢಿಕ್ಕಿಯಾಗಿ ಖಾಸಗಿ ಬ್ಯಾಂಕ್‌ ಒಂದರ ಸಹಸಂಸ್ಥೆಯ ಉದ್ಯೋಗಿ ಯುವತಿ ಮೃತಪಟ್ಟ ಘಟನೆ ಉಡುಪಿಯ ಡಯಾನಾ ಸರ್ಕಲ್‌ನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಢಿಕ್ಕಿ ಹೊಡೆದ ಬಳಿಕ ಯುವತಿಯ ಎದೆಯ ಮೇಲಿಂದ ಟ್ರ್ಯಾಕ್ಟರ್‌ ಚಕ್ರ ಸಾಗಿದ ಪರಿಣಾಮ ಅವರು ಮೃತಪಟ್ಟಿದ್ದಾರೆ.

ಕಟಪಾಡಿ ಏಣಗುಡ್ಡೆ ದುರ್ಗಾನಗರದ ನಿವಾಸಿ ಪ್ರಭಾಕರ ರಾವ್‌ ಅವರ ಮಗಳು ಮಂಗಳಾ ರಾವ್‌ (26) ಮೃತಪಟ್ಟವರು. ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಕಟಪಾಡಿಯಿಂದ ಉಡುಪಿ ಕಡೆಗೆ ಬರುತ್ತಿದ್ದರು. ಈ ವೇಳೆ ತೆಂಕಪೇಟೆ ಸಂಪರ್ಕಿಸುವ ರಸ್ತೆಯಿಂದ ಹಳೆ ಡಯಾನಾ ಹೊಟೇಲ್‌ ಮುಂಭಾಗದ ಜಂಕ್ಷನ್‌ನಲ್ಲಿ ಉಡುಪಿ ಕಡೆಗೆ ಹೋಗಲು ಟ್ರ್ಯಾಕ್ಟರ್‌ ಚಾಲಕ ಒಮ್ಮೆಲೆ ತಿರುಗಿಸಿದ ಕಾರಣ ಆಕ್ಟಿವಾ ಹೋಂಡಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಯುವತಿ ರಸ್ತೆಗೆ ಬಿದ್ದಿದ್ದು, ಈ ವೇಳೆ ಅವರ ಎದೆಯ ಭಾಗದಲ್ಲಿ ಟ್ರ್ಯಾಕ್ಟರ್‌ನ ಚಕ್ರ ಹೋಗಿದೆ.

ಬೆಂಗಳೂರಿನಿಂದ ಬಂದಿದ್ದರು…
ಮೃತ ಮಂಗಳಾ ಅವರ ತಂದೆ ಹಿಂದೆ ಕಟಪಾಡಿಯಲ್ಲಿ ಟೈಲರಿಂಗ್‌ ಅಂಗಡಿ ನಡೆಸುತ್ತಿದ್ದರು. ಸೂಟ್‌ ಹೊಲಿಯುವುದರಲ್ಲಿ ಅವರು ಜನಪ್ರಿಯರಾಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಇನ್ನೋರ್ವ ಪುತ್ರ. ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಮಂಗಳಾ ಅವರು ಕೂಡ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಎಚ್‌ಡಿಎಫ್ಸಿಯ ಎಚ್‌ಡಿಬಿ ವಿಭಾಗದಲ್ಲಿ ಕೆಲಸ ಸಿಕ್ಕ ಬಳಿಕ 6 ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ಉಡುಪಿಯ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಮದುವೆ ಮಾತುಕತೆ: ಮಂಗಳಾ ಅವರ ಮದುವೆಗಾಗಿ ಮನೆಮಂದಿ ಗಂಡು ನೋಡುತ್ತಿದ್ದರು. ಮದುವೆಗಾಗಿ ಇತ್ತೀಚೆಗೆ ಮಾತುಕತೆಯೂ ನಡೆದಿತ್ತು ಎಂದು ತಿಳಿದುಬಂದಿದೆ.

No Comments

Leave A Comment