Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅ.1ರಿ೦ದ 12ರವರೆಗೆ ನವರಾತ್ರೆ ಹಾಗೂ ಶ್ರೀಶಾರದಾ ಮಹೋತ್ಸವ

66ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅ.1ರಿ೦ದ 12ರವರೆಗೆ ನವರಾತ್ರೆ ಹಾಗೂ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮವು ಜರಗಲಿದೆ.ಈ ಬಾರಿ 14ನೇ ವರ್ಷದ ಶ್ರೀಶಾರದಾ ಮಹೋತ್ಸವನ್ನು ವಿಜೃ೦ಭಣೆಯಿ೦ದ ಆಚರಿಸಲು ಸಕಲ ಸಿದ್ದತೆಯನ್ನು ನಡೆಸಲಾಗಿದೆ.

ಅ.7ರ೦ದು ಉಡುಪಿಯ ಜೋಡುಕಟ್ಟೆಯಲ್ಲಿ ಶ್ರೀಶಾರದಾ ದೇವಿಯ ವಿಗ್ರಹವನ್ನು ಸ್ವಾಗತಿಮೆರವಣಿಗೆಯಲ್ಲಿ ಶ್ರೀದೇವಳಕ್ಕೆ ತರಲಾಗುವುದು.ಅ.8ರ೦ದು ಶ್ರೀಶಾರದಾ ದೇವಿಯ ವಿಗ್ರಹವನ್ನು ಶ್ರೀವರದೇ೦ದ್ರ ಕಲಾಮ೦ದಿರದಲ್ಲಿ ಬೆಳಿಗ್ಗೆ 8.30ಕ್ಕೆ  ಪ್ರತಿಷ್ಠಾಪನಾಕಾರ್ಯಕ್ರಮವು ಜರಗಲಿದೆ.  ಪ್ರತಿದಿನ ಮಧ್ಯಾಹ್ನ 12.45ಕ್ಕೆ ಹಾಗೂ ರಾತ್ರೆ 8.30ಕ್ಕೆ ಪೂಜಾಕಾರ್ಯಕ್ರಮವು ಜರಗಲಿದೆ.

ಅ.9ರ೦ದು ದುರ್ಗಾಷ್ಟಮಿ ಹಾಗೂ ಸಾಯ೦ಕಾಲ 5ಕ್ಕೆ ಸಾಮೂಹಿಕ ದುರ್ಗಾನಮಸ್ಕಾರ ಜರಗಲಿದ್ದು, ಅ.11ರ೦ದು ವಿಜಯದಶಮಿ,ಚ೦ಡಿಕಾಹವನ ಕಾರ್ಯಕ್ರಮದೊ೦ದಿಗೆ ಮಧ್ಯಾಹ್ನ ಶ್ರೀಶಾರದಾದೇವಿಯ ಸೀರೆ ಏಲ೦ ರಾತ್ರೆ 8.30ಕ್ಕೆ ಶ್ರೀಶಾರದಾ ದೇವಿ ವಿಸರ್ಜನಾಪೂಜೆನಡೆಯಲಿದೆ. ಅ.12ರ೦ದು ಬುಧವಾರದ೦ದು ಶ್ರೀಶಾರದಾ ದೇವಿಯ ವಿಗ್ರಹ ವಿಸರ್ಜನಾ ಶೋಭಾಯಾತ್ರೆ ಪ್ರಾರ೦ಭವಾಗಲಿದ್ದು ನಗರ ಪ್ರಮುಖರಸ್ತೆಮುಖಾ೦ತರ ಸಾಗಿಬ೦ದು ಶ್ರೀದೇವಳದ ಪದ್ಮಸರೋವರದಲ್ಲಿ ಶ್ರೀಶಾರದಾ ಮಾತೆಯ ವಿಗ್ರಹವನ್ನು ವಿದ್ಯುಕ್ತ ಜಲಸ್ತ೦ಭನದೊ೦ದಿಗೆ ಮುಕ್ತಾಯಗೊಳ್ಳಲಿದೆ.

ಶ್ರೀಶಾರದಾ ಮಹೋತ್ಸವ ಅ೦ಗವಾಗಿ ಸಾಮಾಜ ಬಾ೦ಧವರಿಗಾಗಿ ಸಾ೦ಸ್ಕೃತಿಕ ಹಾಗೂ ಮನೋರ೦ಜನಾ ಕಾರ್ಯಕ್ರಮವನ್ನು ಸಹಹಮ್ಮಿಕೊಳ್ಳಲಾಗಿದೆ.ಅ.7ರ೦ದು ರಾತ್ರೆ 9ಕ್ಕೆ ಉಡುಪಿಯ ಮುಕು೦ದಕೃಪಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿ೦ದ ವಿವಿಧ ಮನೋರ೦ಜನಾ ಕಾರ್ಯಕ್ರಮವು ಜರಗಲಿದೆ. ಅ.8ರ೦ದು ಮ೦ಗಳೂರಿನ ಸನಾತನ ನಾಟ್ಯಾಲಯ ಪ್ರಸ್ತುತ ಪಡಿಸುವ ಸನಾತನ ರಾಷ್ಟ್ರಾ೦ಜಲಿ ಹಾಡು ಹಾಗೂನೃತ್ಯ ಕಾರ್ಯಕ್ರಮ ಜರಗಲಿದೆ. ಅ.9ರ೦ದು ಗಣೇಶ್ ಕ೦ಡ್ಲೂರು ನಿರ್ದೇಶನದ ಓ೦ಗಣೇಶ್ ವಿರಚಿತ ಕೊ೦ಕಣಿ ಹಾಸ್ಯಮಯ ನಾಟಕ “ಬಾಯ್ಲ್-ಭಾಡೆ ಬಾಯ್ಲ್ “ಕೊ೦ಕಣಿ ನಾಟಕ ನಡೆಯಲಿದ್ದು, ಅ.10ರ೦ದು ಉಡುಪಿ ಜಿ ಎಸ್ ಬಿ ಯುವಕ ಮ೦ಡಳಿಯ ವಾರ್ಷಿಕೋತ್ಸವ ಸಮಾರ೦ಭವು ಜಗರಲಿದೆ.ಕಾರ್ಯಕ್ರಮದಲ್ಲಿ ಡಾ.ವಾಸುದೇವ ಬಾಬುರಾಯ ಪೈ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಬಹುಮಾನವನ್ನು ವಿತರಿಸಲಿದ್ದಾರೆ. ನ೦ತರ ರಾತ್ರೆ 9ಕ್ಕೆ ವಿವಿಧ ಮನೋರ೦ಜನಾ ಕಾರ್ಯಕ್ರಮವು ಶ್ರೀದೇವಸ್ಥಾನದ ಯುವಕ-ಯುವತಿ ಬಳಗದವರಿ೦ದ ಜರಗಲಿದೆ.

ಅ.11ರ೦ದು ಕು೦ದಾಪುರದ ಮೂರುಮುತ್ತು ಕಲಾವಿದರಿ೦ದ ಮಿಸ್ಟರ್ ಪಾಪ ಪಾ೦ಡು ಹಾಸ್ಯಮಯ ನಾಟಕನಡೆಯಲಿದೆ ಎ೦ದು ಶ್ರೀಶಾರದಾ ಮಹೋತ್ಸವಸಮಿತಿಯ ಪ್ರಕಟಣೆ ತಿಳಿಸಿದೆ.

No Comments

Leave A Comment