Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಎಬಿಸಿ ನೂತನ ಅಧ್ಯಕ್ಷರಾಗಿ ವೆಂಕಟ್ ಆಯ್ಕೆ

eenadu-venkatನವದೆಹಲಿ: ಈನಾಡು ಇಂಡಿಯಾ ನಿರ್ದೇಶಕ ವೆಂಕಟ್ ಅವರು ಆಡಿಟ್ ಬ್ಯೂರೋ ಆಪ್ ಸರ್ಕ್ಯೂಲೇಷನ್ ಆಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ದೆಹಲಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಬಿಸಿ ಅಧ್ಯಕ್ಷರಾಗಿ ವೆಂಕಟ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್ ಮುಖ್ಯಸ್ಥರೂ ಕೂಡ  ಆಗಿರುವ ವೆಂಕಟ್, ಮೀಡಿಯಾ ರೀಸರ್ಚ್ ಯೂಸರ್ಸ್ ಕೌನ್ಸಿಲ್ ಸಂಸ್ಥೆಯ ಅಧ್ಯಕ್ಷರಾಗಿ, ಇಂಟರ್ ನಾಷನಲ್ ನ್ಯೂಸ್ ಮೀಡಿಯಾ ಅಸೋಸಿಯೇಷನ್ ಹಾಗೂ ಬ್ರಾಡ್ ಕಾಸ್ಟ್ ಆಡಿಯನ್ಸ್  ರೀಸರ್ಚ್ ಕೌನ್ಸಿಲ್ ನಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಮುದ್ರಣ ಮತ್ತು ಟಿವಿ ಮಾಧ್ಯಮಗಳಂತಹ ಎರಡೂ ಬಗೆಯ ಪತ್ರಿಕೋಧ್ಯಮದಲ್ಲಿ ಪಳಗಿರುವ ವೆಂಕಟ್ ಅವರಿಗೆ ಎಬಿಸಿ ಅಧ್ಯಕ್ಷ ಗಾದಿ ಒಲಿದುಬಂದಿದೆ.

ಅಂತೆಯೇ ಉಪಾಧ್ಯಕ್ಷರಾಗಿ  ಕೋಕಕೋಲಾ ಸಂಸ್ಥೆಯ ಮಾರ್ಕೆಟಿಂಗ್ ಮುಖ್ಯಸ್ಥ ಡೆಬೆಬ್ರತಾ ಮುಖರ್ಜಿ ಅವರು ಆಯ್ಕೆಯಾಗಿದ್ದು, ಜಾಹಿರಾತು ವಿಭಾಗದಲ್ಲಿ ಖ್ಯಾತಿ ಪಡೆದಿದ್ದ ಡೆಬೆಬ್ರತಾ ಮುಖರ್ಜಿ ಅವರನ್ನು  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಎಬಿಸಿ ನಿರ್ವಹಣಾ ಮಂಡಳಿಯಲ್ಲಿ ಜಾಗರಣ್ ಪ್ರಕಾಶನ್ ನ ಶೈಲೇಶ್ ಗುಪ್ತಾ, ಬಾಂಬೇ ಸಮಾಚಾರ್ ನ ಹಾರ್ಮುಸ್ ಜೀ ಎನ್ ಕಾಮಾ, ಲೋಕಾಮಾತ್ ಮೀಡಿಯಾದ ದೇವೇಂದ್ರ  ವಿ ವಾರ್ದಾ, ಹಿಂದೂಸ್ತಾನ್ ಟೈಮ್ಸ್ ಮೀಡಿಯಾ ಲಿಮಿಟೆಡ್ ನ ಬೇನಿ ರಾಯ್ ಚೌದರಿ, ಎಬಿಪಿ ಪ್ರೈವೇಟ್ ಲಿಮಿಟೆಡ್ ನ ಚಂದನ್ ಮಜುಂಮ್ದಾರ್, ಬೆನೆಟ್, ಕೋಲ್ಮ ನ್ ಅಂಡ್ ಲಿಮಿಟೆಡ್ ನ  ರಾಜ್ ಕುಮಾರ್ ಜೈನ್, ಸಕಾಲ್ ಪೇಪರ್ ಪ್ರೈವೇಟ್ ಲಿಮಿಟೆಡ್ ನ ಪ್ರತಾಪ್ ಜಿ ಪವಾರ್ ಅವರು ಆಯ್ಕೆಯಾಗಿದ್ದಾರೆ.

ಇನ್ನು ಜಾಹಿರಾತು ಪ್ರತಿನಿಧಿಗಳಾಗಿ ಐಟಿಸಿ ಲಿಮಿಟೆಡ್ ನ ಹೇಮಂತ್ ಮಲ್ಲಿಕ್, ಸಂದೀಪ್ ಟರ್ಕಾಸ್, ಟಾಟಾ ಮೋಟಾರ್ಸ್ ನ ಮಾಯಂಕ್ ಪ್ರೀಕ್ ಅವರು ಆಯ್ಕೆಯಾಗಿದ್ದಾರೆ

No Comments

Leave A Comment