Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ತಮಿಳುನಾಡು ಸಿಎಂ ಜಯಲಲಿತಾ ಅಸ್ವಸ್ಥ; ಅಪೊಲೋ ಆಸ್ಪತ್ರೆಗೆ ದಾಖಲು

jaya-newಚೆನ್ನೈ: ತಮಿಳುನಾಡು ಸಿ ಎಂ ಜೆ. ಜಯಲಲಿತ ಅವರು ಅನಾರೋಗ್ಯ ತೊಂದರೆಯಿಂದಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ಗುರುವಾರ ರಾತ್ರಿ 11.30ಕ್ಕೆ ದಾಖಲಾಗಿದ್ದಾರೆ.

ಸಿಎಂ ಜಯಲಲಿತ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಜ್ವರ ಮತ್ತು ಡಿಹೈಡ್ರೇಶನ್‌‌( ನಿರ್ಜಲಿಕರಣ) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಪೋಲೋ ಆಸ್ಪತ್ರೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.

ಜಯಲಲಿತ ಅವರನ್ನು ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಪೋಲೊ ಹಾಸ್ಪಿಟಲ್‌‌ನ ಮುಖ್ಯ ನಿರ್ವಹಣಾ ಅಧಿಕಾರಿ ಸುಬ್ಬಯ್ಯ ವಿಶ್ವನಾಥನ್‌ ತಿಳಿಸಿದ್ದಾರೆ.

ಇನ್ನು ಮುಖ್ಯಮಂತ್ರಿ ಅವರು ಆಸ್ಪತ್ರೆಗೆ ದಾಖಲಾದ ನಂತರ ಭಾರಿ ಸಂಖ್ಯೆಯಲ್ಲಿ ಎಐಡಿಎಂಕೆ ಕಾರ್ಯಕರ್ತರು ಹಾಸ್ಪಿಟಲ್‌‌ ಮುಂದೆ ಜಮಾಯಿಸಿದ್ದು, ಸಿಎಂ ಜಯಲಲಿತ ಶೀಘ್ರ ಗುಣಮುಖರಾಗಲಿ ಪ್ರಾರ್ಥಿಸುತ್ತಿದ್ದಾರೆ.

No Comments

Leave A Comment