Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಮತ್ತೊಬ್ಬ ಟ್ರೈನಿ ಸಬ್ ಇನ್ಸ್ ಪೆಕ್ಟರ್ ನೇಣಿಗೆ ಶರಣು

kiran-newನಲ್ಗೊಂಡ: ಟ್ರೈನಿ ಸಬ್ ಇನ್ಸ್ ಪೆಕ್ಟರ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣ ಜಿಲ್ಲೆಯ ಮಿರ್ಯಾಲ್ ಗುಡಾದಲ್ಲಿ ನಡೆದಿದೆ.

ಕಿರಣ್ ಎಂಬ 28 ವರ್ಷದ ಟ್ರೈನಿ ಸಬ್ ಇನ್ಸ್ ಪೆಕ್ಟರ್ ಆತ್ಮಹತ್ಯೆಗೆ ಶರಣಾದವರು.ಕಿರಣ್ 2014 ರ ಬ್ಯಾಚ್ ನಲ್ಲಿ ಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದರು. ತರಬೇತಿ ವೇಳೆ ಗಾಯೊಗಂಡು ಕಾಲಿನ ಮೂಳೆ ಮುರಿತಕ್ಕೊಳಗಾಗಿದ್ದ ಕಿರಣ್ ಮೂರು ತಿಂಗಳು ರಜೆಯ ಮೇಲೆ ತೆರಳಿದ್ದರು.

ಚೇತರಿಸಿಕೊಂಡ ನಂತರ ಕಿರಣ್ ಮತ್ತೆ ತರಬೇತಿಗಾಗಿ ಆಂದ್ರ ಪ್ರದೇಶ ಪೊಲೀಸ್ ಅಕಾಡೆಮಿಗೆ ಮನವಿ ಮಾಡಿದರು, ಆದರೆ ಕಿರಣ್ ಮನವಿಯನ್ನು ತಳ್ಳಿ ಹಾಕಿದ ಆಂಧ್ರ ಪೊಲೀಸ್ ಅಕಾಡೆಮಿ 2016 ರ ಬ್ಯಾಚ್ ನ ಅಭ್ಯರ್ಥಿಗಳ ಜೊತೆ ಬಂದು ತರಬೇತಿ ಪಡೆದುಕೊಳ್ಳಲು ಸೂಚಿಸಿತು.ಇದರಿಂದ ತೀವ್ರ ಮನನೊಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಮೃತ ಕಿರಣ್ ಸಹೋದರ ಅರ್ಜುನ್ ಮಿರ್ಯಾಲಿಗುಡ್ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕಿರಣ್ ಸಾವಿಗೆ ಆಂಧ್ರ ಪ್ರದೇಶ ಪೊಲೀಸ್ ಅಕಾಡೆಮಿ ನಿರ್ದೇಶಕ ಇಶಾ ಕುಮಾರ್ ಕಾರಣ ಎಂದು ಆರೋಪಿಸಿದ್ದಾರೆ.

No Comments

Leave A Comment