Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಈಜಿಪ್ಟ್: ಅಕ್ರಮ ವಲಸಿಗರಿದ್ದ ನೌಕೆ ಮುಳುಗಿ 42 ಮಂದಿ ಜಲಸಮಾಧಿ

migrant-boatಕೈರೋ: ಅಕ್ರಮ ವಲಸಿಗರ ನೌಕೆಯೊಂದು ಈಜಿಪ್ಟ್ ಕರಾವಳಿಯಲ್ಲಿ ಮುಳುಗಿದ್ದರಿಂದ 42 ಮಂದಿ ವಲಸಿಗರು ಮೃತಪಟ್ಟಿದ್ದಾರೆ. 
 
600 ವಲಸಿಗರಿದ್ದ ನೌಕೆ ಈಜಿಪ್ಟ್ ನ ಕಾಫಿರ್-ಅಲ್-ಶೇಕ್ ಕರಾವಳಿಯಲ್ಲಿ ಮುಳುಗಿದೆ. ಈ ದುರ್ಘಟನೆಯಲ್ಲಿ 42 ಮಂದಿ ಸಾವನ್ನಪ್ಪಿದ್ದರೆ, 150ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನು ಅನೇಕರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 
 
ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಜನರು ನೌಕೆಯಲ್ಲಿ ತುಂಬಿದ್ದರಿಂದ ಈ ದುರಂತ ಸಂಭವಿಸಿದೆ. ಇನ್ನು ರಕ್ಷಣಾ ತಂಡ 150ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದು ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ಕೈಗೊಂಡಿದೆ. 
 
ಈ ನೌಕೆಯಲ್ಲಿ ಈಜಿಪ್ಟ್, ಸಿರಿಯಾ ಮತ್ತು ಆಫ್ರಿಕಾದ ಅಕ್ರಮ ವಲಸಿಗರಿದ್ದರು. ಕಾಫಿರ್-ಅಲ್-ಶೇಕ್ ಕರಾವಳಿ ಪ್ರದೇಶದಲ್ಲಿ ದೋಣಿಗಳಲ್ಲಿ ಅಕ್ರಮ ವಲಸಿಗರನ್ನು ಸಾಗಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ದುರಂತಗಳಿಗೆ ಕಾರಣವಾಗಿದೆ.
No Comments

Leave A Comment