Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಪ್ರಾಜೆಕ್ಟ್‌ ಅನನ್ಯ’– ರಾಷ್ಟ್ರೀಯ ಸಂಸ್ಕರಣಾ ಕೇಂದ್ರ ಉದ್ಘಾಟನೆ ಬ್ಯಾಂಕ್‌ ಸೇವೆ ಇನ್ನಷ್ಟು ಸರಳ: ಅರುಣ್‌

20udp-bankಉಡುಪಿ: ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸೇವೆಯನ್ನು ನೀಡುವ ನಿಟ್ಟಿನಲ್ಲಿ ‘ಪ್ರಾಜೆಕ್ಟ್‌ ಅನನ್ಯ’ ಮೊದಲ ಹಾಗೂ ಪ್ರಮುಖ ಹೆಜ್ಜೆಯಾಗಿದೆ ಎಂದು ಸಿಂಡಿ ಕೇಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಅರುಣ್‌ ಶ್ರೀವಾಸ್ತವ್ ಹೇಳಿದರು.

ಮಣಿಪಾಲದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಪ್ರಾಜೆಕ್ಟ್‌ ಅನನ್ಯ’ ಜಾರಿಗೆ ಪೂರಕವಾಗಿ ರಾಷ್ಟ್ರೀ ಯ ಸಂಸ್ಕರಣಾ ಕೇಂದ್ರವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಗ್ರಾಹಕ ರಿಗೆ ನೀಡುವ ಸೇವೆಯನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್‌ ಪ್ರಕ್ರಿಯೆಯನ್ನು ಮಾರ್ಪಾಡುಗೊಳಿಸಲಾ ಗುತ್ತಿದೆ. ಬ್ಯಾಂಕ್‌ ಶಾಖೆಯ ವಾತಾವರ ಣವನ್ನು ಸಹ ಬದಲಾಯಿಸಲಾಗುತ್ತಿದೆ.

ಈಗಿರುವ ವ್ಯವಸ್ಥೆಯಲ್ಲಿ ಖಾತೆಯೊಂ ದನ್ನು ತೆರೆಯಬೇಕಾದರೆ ಕನಿಷ್ಠ ಅರ್ಧ ಗಂಟೆ ಬೇಕಾಗುತ್ತದೆ. ಆದರೆ ‘ಅನನ್ಯ’ ಸೇವೆಯಲ್ಲಿ ಕೇಂದ್ರೀಕೃತ ವ್ಯವಸ್ಥೆಯನ್ನು ಆರಂಭಿಸುವುದರಿಂದ ಈ ಪ್ರಕ್ರಿಯೆ ತ್ವರಿತವಾಗಲಿದೆ. ಬ್ಯಾಂಕಿನ ಎಲ್ಲ ಗ್ರಾಹ ಕರ ಮಾಹಿತಿಯೂ ಕೇಂದ್ರೀಕೃತ ಸಂಸ್ಕ ರಣಾ ವ್ಯವಸ್ಥೆಯಲ್ಲಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ಮಾರ್ಕೆಟಿಂಗ್‌ ವಿಭಾಗದ ಮುಖ್ಯ ಪ್ರಬಂಧಕ ಕೆ.ಟಿ. ರೈ ಮಾತನಾಡಿ, ಬ್ಯಾಂ ಕಿಂಗ್ ಕಾರ್ಯವೈಖರಿಯನ್ನು ಸಂಪೂ ರ್ಣವಾಗಿ ಬದಲಾಯಿಸುವ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾ ಗುತ್ತಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಒಟ್ಟು 360 ಶಾಖೆಗಳನ್ನು ಪರಿವರ್ತನೆ ಮಾಡಲಾಗುವುದು. 285 ಶಾಖೆಗಳಲ್ಲಿ ಗ್ರಾಹಕರು ಎಲ್ಲಿ, ಯಾವಾಗ ಬೇಕಾ ದರೂ ತಮಗಿಷ್ಟ ಬಂದ ಶಾಖೆಯಲ್ಲಿ ಖಾತೆ ತೆರೆದು ವ್ಯವಹಾರ ನಡೆಸಬಹು ದಾಗಿದೆ. ‘ಡಿಜಿ’ (ಡಿಜಿಟಲ್‌) ವಲಯ ದಲ್ಲಿ ಗ್ರಾಹಕರು ಬ್ಯಾಂಕ್ ರಜೆಯ ದಿನಗ ಳಲ್ಲಿಯೂ ವ್ಯವಹಾರ ನಡೆಸಬಹುದು. ಇದರಿಂದಾಗಿ ಕಾರ್ಯಭಾರ ಹೊರೆ ಯೂ ಕಡಿಮೆಯಾಗಲಿದೆ ಎಂದರು.

ಯೋಜನೆಗೆ ತಾಂತ್ರಿಕ ಸೇವೆ ನೀಡಿರುವ ಬಿಸಿಜಿ ಸಂಸ್ಥೆಯ ಪ್ರತೀಕ್‌ ರೂಂಗ್ಟ ಮಾತನಾಡಿ, ಖಾತೆ ತೆರೆಯಲು ಎಷ್ಟು ಗಂಟೆ ಬೇಕು ಎಂದು ಕೇಳುವ ಸ್ಥಿತಿ ಈ ಹಿಂದೆ ಇತ್ತು.ಆದರೆ ಈಗ ಎಷ್ಟು ನಿಮಿಷಗಳಲ್ಲಿ ಖಾತೆ ತೆರೆಯಲು ಸಾಧ್ಯ ಎಂದು ಗ್ರಾಹಕರು ಕೇಳುತ್ತಿದ್ದಾರೆ. ಈ ಬದಲಾವಣೆಗೆ ಪೂರಕವಾಗಿ ತಂತ್ರಜ್ಞಾನದಲ್ಲಿ ಆಗುವ ಎಲ್ಲ ರೀತಿಯ ಬದಲಾವಣೆಗಳನ್ನು ಬ್ಯಾಂಕಿಂಗ್‌ ಹಾಗೂ ಫೈನಾನ್ಸಿಯಲ್‌ ಸೇವೆಗಳಲ್ಲಿ ತರಲು ಪ್ರಯತ್ನಿಸಲಾಗುತ್ತದೆ ಎಂದರು. ಬ್ಯಾಂ ಕ್‌ನ ಅಚ್ಯುತಾನಂದ ದಾಸ್‌ ಸ್ವಾಗತಿಸಿ ದರು. ರಾಮಕೃಷ್ಣ ವಂದಿಸಿದರು.

No Comments

Leave A Comment