Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಎನ್.ಸಿ.ಸಿ.ಕೆಡೇಟ್ಸ್‌ಗಳಿಂದ ಮಲ್ಪೆ ಕಡಲತೀರದ ಸ್ವಚ್ಚತಾ ಅಭಿಯಾನ

dsc02551__1_6ಕರ್ನಾಟಕ ನೌಕಾದಳ ಎನ್.ಸಿ.ಸಿ.ಘಟಕ ಹಾಗೂ ಎಂ.ಜಿ.ಎಂ ಕಾಲೇಜಿನ ನೌಕಾದಳ ಎನ್.ಸಿ.ಸಿ.ಉಪಘಟಕ ಉಡುಪಿ, ಮಲ್ಪೆ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

6ಕರ್ನಾಟಕ ನೌಕಾದಳ ಎನ್.ಸಿ.ಸಿ.ಘಟಕ ಉಡುಪಿಯ ರಾಜ್ಯ ಮಟ್ಟದ ವಾರ್ಷಿಕ ವಿಶೇಷ ತರಭೇತಿ ಶಿಭಿರವು ದೇವಾಡಿಗ ಸಭಾ ಭವನ,ಚಿಟ್ಪಾಡಿ ಉಡುಪಿ ಇಲ್ಲಿ ನಡೆಯುತ್ತಿದ್ದು, ಕರ್ನಾಟಕ ಮತ್ತು ಗೋವಾ ರಾಜ್ಯದ ವಿವಿಧ ಶಾಲಾ ಕಾಲೇಜಿನ ಎನ್.ಸಿ.ಸಿ. ಕೆಡೇಟ್ಸ್‌ಗಳು ಈ ಶಿಭಿರದಲ್ಲಿ ಭಾಗವಹಿಸುತ್ತಿದ್ದಾರೆ. ಈ ಶಿಬಿರದ ಕ್ಯಾಂಪ್ ಕಮಾಂಡೆನ್ಟ್ ಕ್ಯಾಪ್ಟನ್.ಬೆಳ್ಳಿಯಪ್ಪ ಸರ್ ಇವರ ಮಾರ್ಗದರ್ಶನದಂತೆ ಶಿಭಿರಾರ್ಥಿಗಳಿಗೆ ತರಬೇತಿಯ ಅಂಗವಾಗಿ ಮಲ್ಪೆ ಕಡಲ ತೀರದ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು ಶಿಭಿರದಲ್ಲಿ ಸುಮಾರು 200ಎನ್.ಸಿ.ಸಿ. ಕೆಡೇಟ್ಸ್‌ಗಳು ಭಾಗವಹಿಸಿ ಪ್ರವಾಸಿ ತಾಣವಾದ ಮಲ್ಪೆ ಕಡಲ ತೀರವನ್ನು ಸ್ವಚ್ಚಗೊಳಿಸಿದರು ಹಾಗೂ ಪ್ರವಾಸಿಗರಿಗೆ ಮತ್ತು ಸ್ಥಳಿಯರಿಗೆ ತಮ್ಮ ಪರಿಸರವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕಾದ ಅವಶ್ಯಕತೆಯ ಕುರಿತು ಅರಿವು ಮೂಡಿಸಿದರು.

No Comments

Leave A Comment