Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಕೃಷ್ಣನೇ ಕಾಪಾಡಬೇಕು! ಸಿಎಂಗೆ 4 ಸಲಹೆ ಕೊಟ್ಟ ಎಸ್.ಎಂ.ಕೃಷ್ಣ

smಬೆಂಗಳೂರು:ಕಾವೇರಿ ನೀರು ಬಿಡುಗಡೆ ಕುರಿತು ಬಿರುಸಿನ ನಡೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿಯಾದ ಬಳಿಕ, ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಅವರ ಸದಾಶಿವನಗರದ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಲ್ಕು ಸಲಹೆಗಳನ್ನು ನೀಡಿದ್ದಾರೆ.

ಎಸ್.ಎಂ.ಕೃಷ್ಣ ನೀಡಿರುವ ನಾಲ್ಕು ಸಲಹೆ:
1)ಕಾವೇರಿ ಜಲಾನಯನ ಪ್ರದೇಶದಲ್ಲಿ ಹೂಳು ತೆಗೆಯುವುದು
2)ಕಾವೇರಿ ಜಲಭಾಗ್ಯ ನಿಗಮಕ್ಕೆ ಆರ್ಥಿಕ ಶಕ್ತಿ ತುಂಬುವುದು
3)ಕಾವೇರಿ ಜಲಾನಯನ ವ್ಯಾಪ್ತಿಯ ರೈತರಿಗೆ ಪರಿಹಾರ ನೀಡಿ
4)ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಅವಧಿ ವಿಸ್ತರಣೆ

ಕಷ್ಟ ಕಾಲದಲ್ಲಿ ಕೃಷ್ಣನೇ ನಮ್ಮನ್ನು ಕಾಪಾಡಬೇಕೆಂದು ಸಿಎಂ ಸಿದ್ದರಾಮಯ್ಯ ನಗೆಚಟಾಕಿ ಹಾರಿಸಿದ ಪ್ರಸಂಗ ನಡೆಯಿತು. ಕಾವೇರಿ ನದಿ ನೀರು ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಹಾಗೂ ಸರ್ಕಾರದ ತೆಗೆದುಕೊಂಡ ನಿರ್ಧಾರ ಬಗ್ಗೆ ಉಭಯ ನಾಯಕರು 15 ನಿಮಿಷಗಳ ಕಾಲ ಚರ್ಚಿಸಿದರು.

ಕಾನೂನು ಅನುಪಯುಕ್ತವಾದಾಗ ವಿರೋಧಿಸಬೇಕಾಗುತ್ತೆ; ಎಸ್ ಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ವಿವಾದದ ವಿಚಾರದಲ್ಲಿ ಮೂಲಭೂತ ಅವಶ್ಯಕತೆಗಳನ್ನು ಬಹಳಷ್ಟು ಗೌರವಿಸಿದ್ದಾರೆ. ಬೆಂಗಳೂರು ಮತ್ತು ಇತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಂತಹ ಸಂದರ್ಭದಲ್ಲಿ ನೀಡಿರುವ ಆದೇಶವನ್ನು ಪ್ರತಿರೋಧಿಸುಂತಹದ್ದೇ ನಮ್ಮ ಧರ್ಮ. ಕಾನೂನು ನಮಗೆ ಅನುಪಯುಕ್ತವಾದಾಗ ಅದನ್ನು ಉಲ್ಲಂಘಿಸುವುದೇ ನಮ್ಮ ಧರ್ಮ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರಾಜ್ಯ ಸರ್ಕಾರದ ಜೊತೆಗಿರುತ್ತೇವೆ ಎಂದು ಎಸ್.ಎಂ.ಕೃಷ್ಣ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

No Comments

Leave A Comment