Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಹಂತಕರ ದಾಳಿಗೀಡಾಗಿದ್ದ ಪಂಜಾಬ್‌ RSS ನಾಯಕ ಗಗ್ನೇಜ ವಿಧಿವಶ

jagdish-gಲೂಧಿಯಾನ : ಕಳೆದ ಆಗಸ್ಟ್‌ ತಿಂಗಳಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೆ ಗುರಿಯಾಗಿದ್ದ ಹಿರಿಯ ಆರ್‌ಎಸ್‌ಎಸ್‌ ನಾಯಕ ಜಗದೀಶ್‌ ಗಗ್ನೇಜ ಅವರಿಂದು ಗುರುವಾರ ಇಲ್ಲಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಗಗ್ನೇಜ (65) ಅವರು ಇಲ್ಲಿನ ಹೀರೋ ಡಿಎಂಸಿ ಹಾರ್ಟ್‌ ಇನ್‌ಸ್ಟಿಟ್ಯೂಟ್‌ ಆಸ್ಪತ್ರೆಯಲ್ಲಿ ಬೆಳಗ್ಗೆ  9.16ರ ಹೊತ್ತಿಗೆ ಕೊನೆಯುಸಿರೆಳೆದರೆಂದು ಸಂಸ್ಥೆಯ ನಿರ್ದೇಶಕ ಡಾ. ಜಿ. ಎಸ್‌. ವ್ಯಾಂಡರ್‌ ತಿಳಿಸಿದ್ದಾರೆ.

ಬ್ರಿಗೇಡಿಯರ್‌ (ನಿವೃತ್ತ) ಗಗ್ನೇಜ ಅವರ ಮೇಲೆ ಜಾಲಂಧರ್‌ನಲ್ಲಿ ಆ.6ರಂದು ಬೈಕ್‌ನಲ್ಲಿ ಬಂದಿದ್ದ ಹಂತಕರು ದಾಳಿ ನಡೆಸಿದ್ದರು. ಮರುದಿನ ಗಂಭೀರ ಸ್ಥಿತಿಯಲ್ಲಿ ಅವರನ್ನು ಲೂಧಿಯಾನ ಅಸ್ಪತ್ರೆಗೆ ಸೇರಿಸಲಾಗಿತ್ತು.

ಆರ್‌ಎಸ್‌ಎಸ್‌ ಪಂಜಾಬ್‌ ಘಟಕದ ಉಪಾಧ್ಯಕ್ಷರಾಗಿರುವ ಗಗ್ನೇಜ ಅವರ ಕೊಲೆ ಯತ್ನ ಪ್ರಕರಣದಲ್ಲಿ ಯಾವುದೇ ಸುಳಿವು ಪಡೆಯುವಲ್ಲಿ ಪೊಲೀಸರು ವಿಫ‌ಲರಾದಾಗ ಪ್ರಕರಣದ ತನಿಖೆಯನ್ನು ಈಚೆಗೆ ಸಿಬಿಐಗೆ ಒಪ್ಪಿಸಲಾಗಿತ್ತು.

ಮೃತರ ಕುಟುಂಬ ಸದಸ್ಯರೊಂದಿಗೆ ಅನೇಕ ಹಿರಿಯ ಆರ್‌ ಎಸ್‌ ಎಸ್‌ ಮತ್ತು ಬಿಜೆಪಿ  ನಾಯಕರು ಆಸ್ಪತ್ರೆಯಲ್ಲಿ ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು.

No Comments

Leave A Comment