Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಡಿ. 25: ಹೆಜಮಾಡಿಯಲ್ಲಿ ಜಿಎಸ್‌ಬಿ ವಿಶ್ವ ಸಮ್ಮೇಳನ

gsbಕಾಪು : ಜಿಲ್ಲೆಯ ಗಡಿಭಾಗ ಹೆಜಮಾಡಿಯ ಸರಕಾರಿ ಮೈದಾನದಲ್ಲಿ ಡಿ. 25ರಂದು ಸುಮಾರು 30,000ಕ್ಕೂ ಅಧಿಕ ಜಿಎಸ್‌ಬಿ ಸಮಾಜ ಬಾಂಧವರ ಒಗ್ಗೂಡುವಿಕೆಯೊಂದಿಗೆ ಪ್ರಥಮ ಬಾರಿಗೆ ಜಿಎಸ್‌ಬಿ ವಿಶ್ವ ಸಮ್ಮೇಳನ ಆಯೋಜಿಸಲಾಗಿದೆ.

ಅಮೆರಿಕ, ಲಂಡನ್‌, ಗಲ್ಫ್ ರಾಷ್ಟ್ರ ಗಳಿಂದ ಸಮಾಜದ ಪ್ರತಿಭಾನ್ವಿತರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಯಿದೆ ಎಂದು ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್‌. ವಿವೇಕಾನಂದ ಶೆಣೈ ಕಾರ್ಕಳ ಹೇಳಿದರು.

ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಜಿಲ್ಲಾ ಸಮಿತಿಯ ಸಭೆ ಮತ್ತು ಸಂಪೂರ್ಣ ಕುಟುಂಬ ಆರೋಗ್ಯ ವಿಮಾ ಯೋಜ ನೆಯ ಪ್ರಥಮ ಹಂತದ ಆರೋಗ್ಯ ಕಾರ್ಡ್‌ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಮುಖ್ಯೋಪಾಧ್ಯಾಯ/ಯೋಗ ಶಿಕ್ಷಕ ಎನ್‌. ರಾಧಾಕೃಷ್ಣ ಪ್ರಭು ಮಾತನಾಡಿ, ಆಹಾರ, ವಸತಿ, ಶಿಕ್ಷಣ ಜತೆಗೆ ಆರೋಗ್ಯ ಮನುಷ್ಯನ ಜೀವನದ 4 ಪ್ರಮುಖ ಅಂಶಗಳಾಗಿವೆ. ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ದಾನಿಗಳ ಸಹಕಾರದೊಂದಿಗೆ ಸಂಪೂರ್ಣ ಕುಟುಂಬ ಆರೋಗ್ಯ ವಿಮಾ ಯೋಜನೆ ಹಮ್ಮಿಕೊಂಡಿರು ವುದು ಸ್ವಾಗತಾರ್ಹ ಎಂದರು.

ಎಲ್ಲ ಗ್ರಾಮಗಳಿಗೂ ಯೋಜನೆ ವಿಸ್ತರಣೆ
ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್‌ ಮಾತನಾಡಿ, ಸಮಾಜದ 2,000 ಕುಟುಂಬಗಳಿಗೆ ತಲಾ 1 ಲಕ್ಷ ರೂ. ಮೌಲ್ಯದ ಆರೋಗ್ಯ ಕಾರ್ಡ್‌ ವಿತರಿಸಲಾಗುತ್ತಿದ್ದು, ಪ್ರತೀ ಮನೆಗೆ ಮಾಸಿಕ ತಲಾ 12,000 ರೂ. ಗಳಂತೆ 251 ಜನರಿಗೆ 28.92 ಲಕ್ಷ ರೂ. ಮೊತ್ತದ ಕುಟುಂಬ ಚೈತನ್ಯ ಯೋಜನೆ ನೀಡಲಾಗಿದೆ. ಸಂಪೂರ್ಣ ಸ್ವತ್ಛತಾ ಕಾರ್ಯಕ್ರಮದಡಿ 35,000 ರೂ. ವೆಚ್ಚದಲ್ಲಿ 6 ಮನೆಗಳಿಗೆ ಶೌಚಾಲಯ ನಿರ್ಮಿಸಿ ಕೊಡಲಾಗಿದೆ. ಸಾಸ್ತಾನದಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಗೃಹ ನಿರ್ಮಾಣ ಮಾಡಿ ಹಸ್ತಾಂತರಿಸಲಾಗಿದೆ. ವಿದ್ಯಾ ಪೋಷಕ ನಿಧಿಯಡಿ ಪ್ರತಿಭಾನ್ವಿತ 65 ವಿದ್ಯಾರ್ಥಿಗಳಿಗೆ ತಲಾ 10,000 ರೂ.ಗಳಂತೆ 6.50 ಲಕ್ಷ ರೂ. ಮೊತ್ತದ ನಗದು ಪುರಸ್ಕಾರ ನೀಡಲಾಗಿದೆ. ಇದೀಗ ಕಾಪು ವಲಯದ 30 ಕುಟುಂಬಕ್ಕೆ ಗುಂಪು ಆರೋಗ್ಯ ವಿಮೆ ಮೂಲಕ 1 ಲಕ್ಷ ರೂ. ವಿಮಾ ಸೌಲಭ್ಯವುಳ್ಳ ಆರೋಗ್ಯ ಕಾರ್ಡ್‌ ವಿತರಿಸಲಾಗಿದ್ದು, ಮುಂದಿನ ದಿನ ಗಳಲ್ಲಿ ಈ ಯೋಜನೆಗಳನ್ನು ಎಲ್ಲ ಗ್ರಾಮಗಳಿಗೂ ವಿಸ್ತರಿಸಲು ಚಿಂತನೆ ನಡೆಸಲಾಗಿದೆ ಎಂದರು.

ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೋಟ ಜಿ. ಸತೀಶ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಪು ಕೊಂಕಣಿಮಠ ಶ್ರೀ ವೆಂಕಟರಮಣ ದೇವಸ್ಥಾನದ ಮಾಜಿ ಮೊಕ್ತೇಸರ ಕೆ. ಕಮಲಾಕ್ಷ ನಾಯಕ್‌ ಸಾಂಕೇತಿಕವಾಗಿ ಆರೋಗ್ಯ ಕಾರ್ಡ್‌ ವಿತರಿಸಿದರು.

ಕಾಪು ಕೊಂಕಣಿಮಠ ಶ್ರೀ ವೆಂಕಟರಮಣ ದೇವಸ್ಥಾನದ ಮಾಜಿ ಮೊಕ್ತೇಸರ ಕೆ. ರಮೇಶ ಪೈ, ಸಂಘಟನ ಕಾರ್ಯದರ್ಶಿ ವಿದ್ಯಾನಂದ ಶರ್ಮ ಪಡುಬಿದ್ರಿ, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಕಾಪು ವಲಯದ ಸಂಘಟನ ಕಾರ್ಯದರ್ಶಿ ಪ್ರಸಾದ್‌ ಎಸ್‌. ಕಾಮತ್‌ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ವಿನೋದ್‌ ಕಾಮತ್‌ ವಂದಿಸಿದರು. ಕಾಪು ವಲಯಾಧ್ಯಕ್ಷ ಹರೀಶ್‌ ನಾಯಕ್‌ ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment