Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಶಾಲಾ ಮಕ್ಕಳಿಗೆ ಶಾಕ್: ಈ ಬಾರಿ ದಸರಾ ರಜೆ ಕಡಿತ

dasara-newಬೆಂಗಳೂರು: ಸಾಲು ಸಾಲು ಮುಷ್ಕರ, ಪ್ರತಿಭಟನೆ, ಬಂದ್‌ಗಳಿಂದಾಗಿ ಈ ಬಾರಿಯ ದಸರಾ ರಜೆಯನ್ನು ಮೊಟಕು ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ವಿದ್ಯಾರ್ಥಿಗಳ ಹಿತಕಾಯುವ ಉದ್ದೇಶದಿಂದ ಕೆಲ ಸರ್ಕಾರಿ ರಜಾ ದಿನಗಳಂದು ಕೂಡ ಶಾಲಾ– ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಜೊತೆಗೆ ದಸರಾ ರಜೆ ಅವಧಿಯನ್ನು 5 ದಿನ ಕಡಿತಗೊಳ್ಳಿಸಲು ಯೋಜಿಸಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳು ಸಹ ಇದಕ್ಕೆ ಸಹಮತ ಸೂಚಿಸಿವೆ.
ವಿದ್ಯಾರ್ಥಿಗಳ ಪಠ್ಯವನ್ನು ಪೂರ್ಣಗೊಳಿಸುವ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯು ದಸರಾ ರಜೆಯ ಅವಧಿಯನ್ನು ಕಡಿತಗೊಳಿಸಿದೆ. ಈ ಮೊದಲು ಅಕ್ಟೋಬರ್‌ 8ರಿಂದ 27ರವರೆಗೆ ರಜೆ ನಿಗದಿಯಾಗಿತ್ತು. ಅದನ್ನು ಐದು ದಿನ ಕಡಿಮೆ ಮಾಡಲಾಗಿದೆ. ಅಕ್ಟೋಬರ್‌ 23ರಿಂದಲೇ ತರಗತಿಗಳು ಪುನರಾರಂಭಗೊಳ್ಳಲಿವೆ.

No Comments

Leave A Comment