Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

‘ಹಿಂದುಳಿದ ವರ್ಗವನ್ನು ಮೊದಲು ಮೇಲೆತ್ತಿದವರು ನಾರಾಯಣ ಗುರುಗಳು’- ಪ್ರಮೋದ್ ಮಧ್ವರಾಜ್

pramod-honourಯುವ ಜನ ಸೇವೆ, ಕಿಡೆ, ಮೀನುಗಾರಿಕೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್‌ರನ್ನು ಬಿಲ್ಲವ ಸೇವಾ ಸಂಘ(ರಿ.) ಅಂಬಲಪಾಡಿ ಇದರ ವತಿಯಿಂದ ಸನ್ಮಾನಿಸಲಾಯಿತು.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವೇದ ವಾಕ್ಯದ ಮೂಲಕ ಅಸ್ಪೃಶ್ಯತೆಯ ಪಿಡುಗನ್ನು ಹೋಗಲಾಡಿಸಿ, ಸಾಮಾಜಿಕವಾಗಿ ಶೋಷಣೆಗೊಳಗಾಗಿದ್ದ ಹಿಂದುಳಿದ ಎಲ್ಲ ವರ್ಗಗಳ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮೊದಲಿಗೆ ಪರಿಣಾಮಕಾರಿ ಪ್ರಭಾವ ಬೀರಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರ ತತ್ವಾದರ್ಶ-ಸಂದೇಶಗಳು ಎಂದೆಂದಿಗೂ ಅನುಕರಣೀಯ. ಮಾನವತಾವಾದದಿಂದ ಹಿಂದುಳಿದ ವರ್ಗಗಳ ದೀನ-ದಲಿತರನ್ನು ಸಾಮಾಜಿಕವಾಗಿ ಮೇಲೆತ್ತಿದ ಆತ್ಮೋನ್ನತಿಯ ಪ್ರತಿಪಾದಕರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಯುವ ಜನ ಸೇವೆ, ಕಿಡೆ, ಮೀನುಗಾರಿಕೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೨ನೇ ಜನ್ಮ ದಿನಾಚರಣೆಯ ಅಂಗವಾಗಿ ಬಿಲ್ಲವ ಸೇವಾ ಸಂಘ(ರಿ), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ವತಿಯಿಂದ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಸಭಾ ಸಮಾರಂಭದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ, ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.

ಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣದ ಬಗ್ಗೆ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಮೂಲಕ ರೂ.25ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು ಇನ್ನು ಮುಂದಿನ ಹಂತದ ಕಾಮಗಾರಿಗೂ ಸೂಕ್ತ ಅನುದಾನವನ್ನು ದೊರಕಿಸಿಕೊಡುವಂತೆ ಸಚಿವರಿಗೆ ಮನವಿ ಮಾಡಲಾಯಿತು.

ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಎ.ಶಿವಕುಮಾರ್; ಮಹಿಳಾ ಘಟಕದ ಸಂಚಾಲಕಿ ವಿಜಯಾ ಜಿ. ಬಂಗೇರ; ಪ್ರಧಾನ ಕಾರ್ಯದರ್ಶಿ ಕುಶಲ ಕುಮಾರ್ ಎ., ಕೋಶಾಧಿಕಾರಿ ದಯಾನಂದ ಎ., ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಪೂಜಾರಿ; ಭಾರತಿ ಭಾಸ್ಕರ್; ದಯಾಶಿನಿ ಪಾಂಡುರಂಗ; ಸಂಘದ ಜತೆ ಕಾರ್ಯದರ್ಶಿಗಳಾದ ಮಹೇಂದ್ರ ಕೋಟ್ಯಾನ್; ಸುರೇಶ್ ಪೂಜಾರಿ; ಮಾಜಿ ಅಧ್ಯಕ್ಷರುಗಳಾದ ಎ.ರಾಜು ಪೂಜಾರಿ; ಕೆ.ಮಂಜಪ್ಪ ಸುವರ್ಣ; ಎ.ಜಬ್ಬ ಪೂಜಾರಿ; ಎ.ಭಾಸ್ಕರ ಪೂಜಾರಿ; ಮಹಾಬಲ ಪೂಜಾರಿ; ಎ.ಮಾಧವ ಪೂಜಾರಿ; ಆಡಳಿತ ಸಮಿತಿಯ ಸದಸ್ಯರುಗಳಾದ ಕೃಷ್ಣ ಕೋಟ್ಯಾನ್; ಶಿವದಾಸ್ ಪಿ., ರಮೇಶ್ ಕೋಟ್ಯಾನ್; ರಾಜೇಂದ್ರ ಪಂದುಬೆಟ್ಟು; ಭಾಸ್ಕರ ಅಂಚನ್; ಸುಧಾಕರ ಎ., ರಾಜೇಶ್ ಸುವರ್ಣ; ಗುರುರಾಜ್; ಸತೀಶ್ ಪೂಜಾರಿ; ರಾಜೇಶ್; ವಿನಯ ಕುಮಾರ್; ನಿತಿನ್ ಕುಮಾರ್; ಗಣೇಶ್; ವಿನೋದ್; ಭಾಸ್ಕರ ಕೋಟ್ಯಾನ್; ಗುಡ್ಡ ಪೂಜಾರಿ; ಶಂಕರ ಪೂಜಾರಿ; ದಿವಾಕರ ಪಿ., ಮಹಿಳಾ ಘಟಕದ ಕಾರ್ಯದರ್ಶಿ ಜಯಂತಿ ಹರೀಶ್; ಸಹ ಸಂಚಾಲಕಿಯರಾದ ಗೋದಾವರಿ ಎಮ್. ಸುವರ್ಣ; ದೇವಕಿ ಕೆ. ಕೋಟ್ಯಾನ್; ವಿದ್ಯಾರ್ಥಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.

No Comments

Leave A Comment