Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ನ್ಯೂಯಾರ್ಕ್‌ನ ರಸ್ತೆಯಲ್ಲಿ ಭಾರೀ ಸ್ಫೋಟ:29ಕ್ಕೂ ಹೆಚ್ಚು ಮಂದಿಗೆ ಗಾಯ

529921ನ್ಯೂಯಾರ್ಕ್‌ : ಅಮೆರಿಕದ ಅತ್ಯಂತ ಜನನಿಭಿಡ ಪ್ರದೇಶವಾಗಿರುವ ನ್ಯೂಯಾರ್ಕ್‌ನ ನೆರೆಯ ಚಲ್ಸಿಯಾ ದಲ್ಲಿ ಶನಿವಾರ ರಾತ್ರಿ ಭಾರೀ ಸ್ಫೋಟವೊಂದು ಸಂಭವಿಸಿದ್ದು, ಅವಘಡದಲ್ಲಿ 29 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಫೋಟದ ಕುರಿತು ಉನ್ನತ ಮಟ್ಟದ ತನಿಖೆಯನ್ನು ಅಮೆರಿಕಾ ಭದ್ರತಾ ಅಧಿಕಾರಿಗಳು ನಡೆಸುತ್ತಿದ್ದು ,ಇದು ಉಗ್ರ ದಾಳಿಯೋ ಎನ್ನುವುದು ಇನ್ನಷ್ಟೆ ತಿಳಿದು ಬರಬೇಕಿದೆ. ಪ್ರವಾಸಿಗಳು ಮತ್ತು ನಗರದ ನಿವಾಸಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ,ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಜೆರ್ಸಿಯ ಕಸದ ತೊಟ್ಟಿಯೊಂದರಲ್ಲಿ ಪೈಪ್‌ ಬಾಂಬ್‌ಗಳು ಪತ್ತೆಯಾದ ಕೆಲ ಹೊತ್ತಿನಲ್ಲೇ ಸ್ಫೋಟ ನಡೆದಿದ್ದು, ಈ ಬಗ್ಗೆ ಎಫ್ಬಿಐ ಅಧಿಕಾರಿಗಳು ತೀವ್ರವಾದ ತನಿಖೆ ಮುಂದುವರಿಸಿದ್ದಾರೆ. ಸೋಮವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಗರದಲ್ಲಿ ನಡೆಯುವ ಮುನ್ನ ಈ ಸ್ಫೋಟ ನಡೆದಿದ್ದು ಅಮೆರಿಕದ ಭಾರೀ ಬಿಗಿ ಭದ್ರತೆಗೆ ಸವಾಲೆಸೆದಿದೆ.ವಿಶ್ವಸಂಸ್ಥೆಯ ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಸೇರಿದಂತೆ ವಿಶ್ವದ 190 ಕ್ಕೂ ಹೆಚ್ಚು ನಾಯಕರು ಪಾಲ್ಗೊಳ್ಳುವವರಿದ್ದಾರೆ.

No Comments

Leave A Comment