Log In
BREAKING NEWS >
ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಉಡುಪಿ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾಗಿ ಪಿ ವಿಲಾಸ್ ನಾಯಕ್ ನಿಯುಕ್ತಿ

vilವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾಗಿದ್ದ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರ ತೆರವಾದ ಸ್ಥಾನಕ್ಕೆ ಉಡುಪಿ ಪಾಂಗಾಳ ವಿಲಾಸ್ ನಾಯಕ್ ಇವರನ್ನು ಮುಂದಿನ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾಗಿ ನಿಯುಕ್ತಿ ಮಾಡಲಾಯಿತು.

ಇವತ್ತು ನಡೆದ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಜಿಲ್ಲಾ ಬೈಠಕ್‌ನಲ್ಲಿ ಈ ನಿರ್ಣಯವನ್ನು ಕೈಗೊಂಡು, ವಿಶ್ವ ಹಿಂದೂ ಪರಿಷದ್‌ನ ಪ್ರಾಂತ ಕಾರ್‍ಯಾಧ್ಯಕ್ಷ ಪ್ರೊಫೆಸರ್ ಎಂ.ಬಿ ಪುರಾಣಿಕ್ ನೂತನ ಜವಾಬ್ದಾರಿಯನ್ನು ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್‍ಯಾದರ್ಶಿ ಕೃಷ್ಣಮೂರ್ತಿ, ಪ್ರಾಂತ ಬಜರಂಗದಳದ ಸಂಚಾಲಕ ಶರಣ್ ಪಂಪ್‌ವೆಲ್, ವಿಭಾಗ ಸಹಸಂಚಾಲಕ ಸುನಿಲ್. ಕೆ.ಆರ್, ಜಿಲ್ಲಾ ಕಾರ್‍ಯದರ್ಶಿ ರತ್ನಾಕರ್ ಅಮೀನ್, ಬಜರಂಗದಳದ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಮತ್ತು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

No Comments

Leave A Comment