Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಎಂಡಿಎಲ್ ನಿರ್ಮಾಣ: ಅರಬ್ಬಿ ಸಮುದ್ರದತ್ತ ಹೊರಟ ಐಎನ್‌ಎಸ್‌ ಮಡಗಾಂವ್‌

insಮುಂಬೈ: ದೇಶೀಯವಾಗಿ ನಿರ್ಮಿಸಲಾಗಿರುವ ವಿಶ್ವದರ್ಜೆಯ ಯುದ್ಧನೌಕೆ ಐಎನ್‌ಎಸ್‌ ಮಡಗಾಂವ್‌ಗೆ ಶನಿವಾರ ಮುಂಬೈನ ಮಜಗಾಂವ್ ಹಡಗುಕಟ್ಟೆ(ಎಂಡಿಎಲ್)ಯಲ್ಲಿ ಚಾಲನೆ ನೀಡಲಾಗಿದೆ.

ಭಾರತೀಯ ನೌಕಾದಳದ ಹೊಸ ಕ್ಷಿಪಣಿನಾಶಕ ‘ಐಎನ್‌ಎಸ್‌ ಮಡಗಾಂವ್‌’ ಆಧುನಿಕ ಕ್ಷಿಪಣಿ ವ್ಯವಸ್ಥೆಯನ್ನು ಒಳಗೊಂಡಿದ್ದು, ವಿಶ್ವದ ಯಾವುದೇ ಅತ್ಯುತ್ತಮ ಯುದ್ಧನೌಕೆಯೊಂದಿಗೆ ಹೋಲಿಸಬಹುದು ಎಂದು ನೌಕಾದಳದ ಮುಖ್ಯಸ್ಥ ಸುನಿಲ್ ಲಾಂಬಾ ತಿಳಿಸಿದ್ದಾರೆ.

7,300 ಟನ್ ತೂಕ, 149 ಮೀಟರ್ ಉದ್ದ, 55 ಕಿ.ಮೀ.(30 ನಾಟ್) ಗರಿಷ್ಠ ವೇಗ ಹಾಗೂ 4000 ನಾಟಿಕಲ್ ಮೈಲಿ ಸಾಮರ್ಥ್ಯವನ್ನು ಐಎನ್‌ಎಸ್ ಮಡಗಾಂವ್‌ ಹೊಂದಿದೆ.

₹7000 ಕೋಟಿ ವೆಚ್ಚದಲ್ಲಿ 15ಬಿ ಯೋಜನೆ ಅಡಿ ನಿರ್ಮಿಸಲಾಗಿರುವ ಐಎನ್‌ಎಸ್‌ ಮಡಗಾಂವ್‌ ಯುದ್ಧ ನೌಕೆಯು ರಹಸ್ಯವಾಗಿ ಕಾರ್ಯಾಚರಿಸುವ ವ್ಯವಸ್ಥೆ ಹೊಂದಿದೆ. ಭೂಮೇಲ್ಮೈ ಹಾಗೂ ನೌಕಾ ಕ್ಷಿಪಣಿಗಳನ್ನು ಒಳಗೊಂಡಿದೆ. ಈ ಕ್ಷಿಪಣಿನಾಶಕ ಯುದ್ಧ ನೌಕೆಯು 2020ರ ವೇಳೆಗೆ ಸೇವೆಗೆ ಲಭ್ಯವಾಗಲಿದೆ.

ಶೇ.68ರಷ್ಟು ದೇಶೀಯ ತಂತ್ರಜ್ಞಾನ:
15ಬಿ ಯೋಜನೆ ಅಡಿ 2011ರಲ್ಲಿ ಸರ್ಕಾರ ₹29,700 ಕೋಟಿ ವೆಚ್ಚದಲ್ಲಿ ನಾಲ್ಕು ಕ್ಷಿಪಣಿನಾಶಕ ನೌಕೆಗಳ ನಿರ್ಮಾಣ ಕಾರ್ಯ ಪ್ರಾರಂಭಿಸಿತು.  ಈ ಯೋಜನೆಯ ಮೊದಲ ನೌಕೆ ‘ಐಎನ್ಎಸ್‌ ವಿಶಾಖಪಟ್ಟಣಂ’ಗೆ 2015ರಲ್ಲಿ ಚಾಲನೆ ಸಿಕ್ಕಿದ್ದು, 2018ರಿಂದ ಕಾರ್ಯಾಚರಣೆ ನಡೆಸಲಿದೆ. ಯೋಜನೆ ಅಡಿ ನಿರ್ಮಿಸಲಾಗುತ್ತಿರುವ ನೌಕೆಗಳು ಶೇ.68ರಷ್ಟು ದೇಶೀಯ ತಂತ್ರಜ್ಞಾನವನ್ನು ಒಳಗೊಂಡಿವೆ. ಮಜಗಾಂವ್ ಹಡಗುಕಟ್ಟೆ(ಎಂಡಿಎಲ್)ಯಲ್ಲಿ ಇನ್ನೆರಡು ಯುದ್ಧ ನೌಕೆಗಳು ನಿರ್ಮಾಣದ ಹಂತದಲ್ಲಿವೆ.

1960ರಿಂದಲೂ ಭಾರತೀಯ ನೌಕಾದಳ ಮತ್ತು ಎಂಡಿಎಲ್ ಯುದ್ಧನೌಕೆಗಳನ್ನು ನಿರ್ಮಿಸುತ್ತಿದೆ. ದೇಶದಲ್ಲಿ ಜಲಾಂತರ್ಗಾಮಿಗಳನ್ನು ನಿರ್ಮಿಸುವ ಸಾಮರ್ಥ್ಯವಿರುವುದು ಎಂಡಿಎಲ್‌ಗೆ ಮಾತ್ರ ಎಂದು ಸುನಿಲ್ ಲಾಂಬಾ ತಿಳಿಸಿದ್ದಾರೆ.

No Comments

Leave A Comment