Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಕರ್ನಾಟಕದಲ್ಲಿರುವ ತಮಿಳರು ಗಲಾಟೆ ಮಾಡಿಲ್ಲ: ಸಿದ್ದರಾಮಯ್ಯ ಸೆ.20ರ ನಂತರ ನೀರು ಬಿಡುವ ಪ್ರಶ್ನೆ ಬರಲಿಕ್ಕಿಲ್ಲ: ಸಿಎಂ ವಿಶ್ವಾಸ

6bgv4drdಕಲಬುರ್ಗಿ: ‘ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಇಲ್ಲಿಯ ತಮಿಳು ಭಾಷಿಕರ ಪಾತ್ರ ಇಲ್ಲ. ಪಾಪ, ಅವರು ಯಾವುದೇ ಗಲಾಟೆ ಮಾಡಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ಇಲ್ಲಿ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು  ಮಾತನಾಡಿದರು.
ಈ ಗಲಭೆಯಲ್ಲಿ ಆರ್‌ಎಸ್‌ಎಸ್‌ ಕೈವಾಡ ಇದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಗಲಭೆಗೆ ಸಂಬಂಧಿಸಿದಂತೆ ಕೆಲ ಮಾಹಿತಿ ಲಭ್ಯವಿದ್ದು, ತನಿಖೆ ನಡೆಯುತ್ತಿದೆ’ ಎಂದಷ್ಟೇ ಉತ್ತರಿಸಿದರು.

‘ಬೆಂಗಳೂರು, ಮೈಸೂರು, ಮಂಡ್ಯ ಮತ್ತಿತರ ನಗರ–ಗ್ರಾಮಗಳು ಕಾವೇರಿ ನದಿ ನೀರನ್ನೇ ಅವಲಂಬಿಸಿವೆ. ನಮಗೆ ಕುಡಿಯಲು 27 ಟಿಎಂಸಿ ಅಡಿ ನೀರು ಬೇಕಾಗುತ್ತದೆ. ಸೆ.20ರ ವರೆಗೆ ತಮಿಳುನಾಡಿಗೆ ನೀರು ಬಿಟ್ಟರೆ ಆ ಹೊತ್ತಿಗೆ ನಮ್ಮಲ್ಲಿ 27 ಟಿಎಂಸಿ ಅಡಿ ನೀರು ಮಾತ್ರ ಉಳಿದಿರುತ್ತದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಈಗಲೇ 42 ಟಿಎಂಸಿ ಅಡಿ ನೀರಿದೆ. ಅವರಿಗೆ ಇನ್ನೂ ಮಾರುತ ಇದ್ದು, ಅಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ನಮ್ಮಲ್ಲಿ ಮಾರುತ ಇಲ್ಲ, ಅಂತರ್ಜಲ ಮಟ್ಟವೂ ಕುಸಿದಿದೆ. ನಮಗೆ ಕುಡಿಯಲು ನೀರು ಬೇಕಿರುವ ಅನಿವಾರ್ಯತೆಯನ್ನು ಸುಪ್ರೀಂ ಕೋರ್ಟ್‌ ಮತ್ತು ಕಾವೇರಿ ಮೇಲುಸ್ತುವಾರಿ ಸಮಿತಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದು ಹೇಳಿದರು.

‘ನಮ್ಮಲ್ಲಿ ನೀರೇ ಲಭ್ಯ ಇಲ್ಲದಿರುವುದರಿಂದ ಸೆ.20ರ ನಂತರ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆ ಎದುರಾಗಲಿಕ್ಕಿಲ್ಲ ಎಂದುಕೊಂಡಿದ್ದೇವೆ. ಮತ್ತೆ ನೀರು ಬಿಡುಗಡೆ ಮಾಡಬೇಕಾಗಿ ಬಂದರೆ ಎಂಬ ಊಹೆಗೆ ಉತ್ತರಿಸುವುದಿಲ್ಲ. ಆ ಬಗೆಗೂ ನಾವು ಚಿಂತಿಸಿದ್ದು, ಅದನ್ನು ಇಲ್ಲಿ ಹೇಳಲ್ಲ’ಎಂದರು.

‘ಎಚ್‌.ಡಿ. ದೇವೇಗೌಡ, ಎಸ್‌.ಎಂ. ಕೃಷ್ಣ, ಜಗದೀಶ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಸುಪ್ರೀಂ ಕೋರ್ಟ್‌ ಆದೇಶದಂತೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಈಗ ನಾವೂ ಸುಪ್ರೀಂಕೋರ್ಟ್‌ ಆದೇಶ ಪಾಲಿಸುತ್ತಿದ್ದೇವೆ. ನೀರು ಬಿಟ್ಟಿದ್ದು ಸರಿ ಎಂದು ದೇವೇಗೌಡರೇ ಹೇಳಿದ್ದಾರೆ. ಹೀಗಿರುವಾಗ ನಾನು ಹೇಗೆ ಖಳನಾಯಕನಾಗುತ್ತೇನೆ? ಎಲ್ಲರೂ ನೀರು ಬಿಟ್ಟಿದ್ದು ನನ್ನನ್ನೇ ಏಕೆ ಖಳನಾಯಕನನ್ನಾಗಿ ಮಾಡುತ್ತಾರೆ’ ಎಂದು ಪ್ರಶ್ನಿಸಿದರು.

‘ಫಾಲಿ ಎಸ್‌. ನಾರಿಮನ್‌ 32 ವರ್ಷಗಳಿಂದ ಕರ್ನಾಟಕದ ಪರ ವಾದ ಮಾಡುತ್ತಿದ್ದಾರೆ. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಬಂದಿದ್ದು 2012ರಲ್ಲಿ. ಆಗ ಕೆ.ಎಸ್‌. ಈಶ್ವರಪ್ಪ ಅವರೇ ಜಲಸಂಪನ್ಮೂಲ ಸಚಿವರಾಗಿದ್ದರು. ಆಗಲೇ ಏಕೆ ಅವರು  ನಾರಿಮನ್‌ ಅವರನ್ನು ಬದಲಿಸಲಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಸಂಕಷ್ಟದ ಸಂದರ್ಭಗಳಲ್ಲಿ ಯಾವ ರೀತಿ ನೀರು ಹಂಚಿಕೆ ಮಾಡಬೇಕು ಎಂಬ ನೀತಿ ಇಲ್ಲ. ರಾಷ್ಟ್ರೀಯ ಜಲ ನೀತಿ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದೇವೆ. ಈ ವಿಷಯವಾಗಿ ಚರ್ಚಿಸಲು ಸಮಯ ನೀಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದು, ಅವರು ಸಮಯವನ್ನೂ ನೀಡಿಲ್ಲ ಮತ್ತು ಉತ್ತರವನ್ನೂ ಬರೆದಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.

‘ಪ್ರಧಾನಿ ಕರೆದ ಎಲ್ಲ ಸಭೆಗೆ ನಾನು ಹೋಗಿದ್ದೇನೆ. ಒಂದು ಸಭೆಗೆ ಮಾತ್ರ ಹೋಗಿಲ್ಲ’ ಎಂದು ಸಮರ್ಥಿಸಿಕೊಂಡರು.

No Comments

Leave A Comment