Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ತಾಯಿ ಮಮತೆ: 66ನೇ ವಸಂತದ ದಿನ ತಾಯಿ ಆಶೀರ್ವಾದ ಪಡೆದ ಮೋದಿ

86767ಗಾಂಧಿನಗರ್(ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಮ್ಮ 66ನೇ ಹುಟ್ಟುಹಬ್ಬದಂದು ತಾಯಿಯಿಂದ ಆಶೀರ್ವಾದ ಪಡೆದರು. ಮೋದಿ ಅವರಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸೇರಿದಂತೆ ಗಣ್ಯರು ಶುಭಕೋರಿದ್ದಾರೆ.

ಇಲ್ಲಿನ ರಾಯಸನ ಪ್ರದೇಶದಲ್ಲಿನ ಸಹೋದರ ಪಂಕಜ್‌ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿದ ಮೋದಿ ಅವರು, ತಾಯಿ ಹೀರಬಾ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ತಾಯಿಯ ಜತೆ 25 ನಿಮಿಷ ಕಾಲ ಇದ್ದು ಅಲ್ಲಿಂದ ತೆರಳಿದರು.

‘ತಾಯಿಯ ಮಮತೆ, ಆಶೀರ್ವಾದವು ಜೀವನಕ್ಕೆ ಸ್ಫೂರ್ತಿ’ ಎಂದು ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

No Comments

Leave A Comment