Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಮತ್ತೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಿ: ಅಖಿಲೇಶ್ ಯಾದವ್ ಬೆಂಬಲಿಗರ ಆಗ್ರಹ

akhileshಲಖನೌ: ಉತ್ತರ ಪ್ರದೇಶದ ರಾಜಕೀಯದಲ್ಲಿ ಆದ ದಿಢೀರ್ ಬೆಳವಣಿಗೆಗಳು ಅಖಿಲೇಶ್ ಯಾದವ್ ಅವರ ಬೆಂಬಲಿಗರು ಕಂಗಾಲಾಗುವಂತೆ ಮಾಡಿದ್ದು, ಮತ್ತೆ ಅಖಿಲೇಶ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೇರುವಂತೆ ಸಮಾಜವಾದಿ ಪಕ್ಷದ ಬೆಂಬಲಿಗರು ಶನಿವಾರ ಆಗ್ರಹಿಸಿದ್ದಾರೆ.ಅಖಿಲೇಶ್ ಯಾದವ್ ಅವರನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳೆಗಿರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಅಖಿಲೇಶ್ ಬೆಂಬಲಿಗರು ಪಕ್ಷದ ಕಚೇರಿ ಬಳಿ ಇಂದು ಬೆಳಿಗ್ಗೆ ಪ್ರತಿಭಟನೆಗಿಳಿದಿದ್ದಾರೆ.

ಕೆಂಪು ಟೋಪಿ ಧರಿಸಿ, ಕೆಲ ಘೋಷಣಾ ವಾಕ್ಯಗಳನ್ನು ಪ್ರದರ್ಶಿಸುತ್ತಿರುವ ಅಖಿಲೇಶ್ ಅವರ ಬೆಂಬಲಿಗರು, ಅಖಿಲೇಶ್ ಅವರನ್ನು ಮತ್ತೆ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿ ಎಂದು ಘೋಷಣೆಗಳನ್ನು ಕೂಗುತ್ತಿದ್ದಾರೆ.ನಿನ್ನೆಯಷ್ಟೇ ಪಕ್ಷದ ಬಿಕ್ಕಟ್ಟು ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಅವರು, ಶಿವಪಾಲ್ ಅವರಿಗೆ ಹಾಗೂ ಗಾಯತ್ರಿ ಪ್ರಜಾಪತಿ ಅವರನ್ನು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುತ್ತಿದ್ದು, ಮತ್ತೆ ಅವರವರ ಸ್ಥಾನದಲ್ಲಿ ಮುಂದುವರೆಯಲಿದ್ದಾರೆಂದು ಹೇಳಿದ್ದರು. ಮುಲಾಯಂ ಅವರ ಈ ನಿರ್ಧಾರ ಪಕ್ಷದಲ್ಲಿ ಬಾಂಬ್ ಸಿಡಿದಂತೆ ಮಾಡಿತ್ತು. ಅಲ್ಲದೆ, ಪಕ್ಷದೊಳಗಿನ ಆಂತರಿಕ ಯುದ್ಧ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು.

ಈ ಬಗ್ಗೆ ಸಮಾಜವಾದಿ ಪಕ್ಷದ ಬೆಂಬಲಿತ ಪಕ್ಷಗಳಾದ ಛತ್ರ ಸಭಾ, ಲೋಹಿಯಾ ವಾಹಿನಿ, ಯುವಜನ್ ಸಭಾ ಮತ್ತು ಎಂಎಸ್’ವೈ ಯೂತ್ ಬ್ರಿಗೇಡ್ ಗಳು ಈಗಾಗಲೇ ಮುಲಾಂ ಸಿಂಗ್ ಅವರಿಗೆ ಪತ್ರಗಳನ್ನು ಬರೆದಿದ್ದು, ಪತ್ರದಲ್ಲಿ ಅಖಿಲೇಶ್ ಅವರನ್ನು ಮತ್ತೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಿಸುವಂತೆ ಆಗ್ರಹಿಸಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.ಅಖಿಲೇಶ್ ಅವರನ್ನು ಬಿಟ್ಟು ಬೇರಾರೊಂದಿಗೂ ಕೆಲಸ ಮಾಡಲು ಸಾಧ್ಯವಿಲ್ಲ. ಅಖಿಲೇಖ್ ಅವರಿಗೆ ಮತ್ತೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುವಂತೆ ಮುಲಾಯಂ ಅವರ ಬಳಿ ಮನವಿ ಮಾಡಲಾಗಿದೆ.

ಖಿಲೇಶ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಸಿದಾಗಿನಿಂದಲೂ ಯುವಕರು ನಿರುತ್ಸಾಹದಾಯಿಗಳಾಗಿ ಬಿಟ್ಟಿದ್ದಾರೆಂದು ಎಂಎಸ್ ವೈ ಯೂತ್ ಬ್ರಿಗೇಡ್ ಅಧ್ಯಕ್ಷ ಮೊಹ್ದ್ ಆಯ್ಬಾದ್ ಅವರು ಹೇಳಿದ್ದಾರೆ.ಪ್ರತೀ ಬಾರಿ ನೇತಾಜಿ (ಮುಲಾಯಂ ಸಿಂಗ್ ಯಾದವ್) ಅವರು ಯುವಕರೇ ಪಕ್ಷವನ್ನು ಆಳಬೇಕೆಂದು ಹೇಳುತ್ತಿರುತ್ತಾರೆ. ಅಖಿಲೇಶ್ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೇರಬೇಕು. ಬಡವರು ಹಾಗೂ ಯುವಕರಿಗಾಗಿ ದುಡಿಯುತ್ತಿರುವ ಅಖಿಲೇಶ್ ಅವರನ್ನು ಮತ್ತೆ ಸೇರ್ಪಡೆಗೊಳಿಸಿ. ಅಖಿಲೇಶ್ ಅವರು ರಾಜ್ಯದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆಂದು ರಾಜ್ಪಾಲ್ ಕಶ್ಯಪ್ ಅವರು ಹೇಳಿದ್ದಾರೆ.

No Comments

Leave A Comment