Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಅರುಣಾಚಲದಲ್ಲಿ ಕಾಂಗ್ರೆಸ್ ಕೈಬಿಟ್ಟು ಬಿಜೆಪಿ ಮೈತ್ರಿ ಪಕ್ಷ ಸೇರಿದ ಮುಖ್ಯಮಂತ್ರಿ ಮತ್ತು 42 ಶಾಸಕರು

16lead3ಇಟಾನಗರ್: ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮ ಖಂಡು ಸೇರಿದಂತೆ 43 ಜನ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಮೈತ್ರಿ ಪಕ್ಷ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಸೇರಿದ್ದಾರೆ.

“ಪಿಪಿಎ ಪಕ್ಷದೊಂದಿಗೆ ಕಾಂಗ್ರೆಸ್ ಪಕ್ಷವನ್ನು ವಿಲೀನಗೊಳಿಸುತ್ತಿರುವುದಾಗಿ” ಸಭಾಪತಿ ವಾಂಗ್ಕಿ ಲೊವಾಂಗ್ ಅವರಿಗೆ ಖಂಡು ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರು ನಮ್ಮ ಪಕ್ಷ ಸೇರುತ್ತಿದ್ದಾರೆ ಎಂದಿರುವ ಪಿಪಿಎ ಅಧ್ಯಕ್ಷ ಕಮೆಂಗ್ ರಿಂಗು “ತಾತ್ಕಾಲಿಕ ಗಡಿಪಾರಿನ ನಂತರ ಮನೆಗೆ ವಾಪಸಾಗುತ್ತಿದ್ದಾರೆ” ಎಂದು ಅರುಣಾಚಲ ಪ್ರದೇಶದ ಅಚ್ಚರಿ ಬೆಳವಣಿಗೆಯ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

60 ಸದ್ಯಸ್ಯರ ಬಲಾಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ನ 44 ಶಾಸಕರಿದ್ದು, ಕಾಂಗ್ರೆಸ್ ಪಕ್ಷವನ್ನು ತೊರೆಯದ ಒಬ್ಬರೇ ಶಾಸಕರೆಂದರೆ ಮಾಜಿ ಮುಖ್ಯಮಂತ್ರಿ ನಬಾಮ್ ತೂಕಿ.

ಜುಲೈ ನಲ್ಲಿ ಆಗಿನ ಮುಖ್ಯಮಂತ್ರಿ ತೂಕಿ ವಿರುದ್ಧ ಕಾಂಗ್ರೆಸ್ ಸದಸ್ಯರು ಬಂಡಾಯವೆದ್ದಿದ್ದಕ್ಕೆ ಅವರನ್ನು ಪದಚ್ಯುತಿಗೊಳಿಸಿ ಖಂಡು ಅವರನ್ನು ರಾಜ್ಯ ಸರ್ಕಾರದ ಮುಖ್ಯಸ್ಥನನ್ನಾಗಿ ನೇಮಿಸಿತ್ತು.

No Comments

Leave A Comment