Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ದೆಹಲಿಯಲ್ಲಿ ಮತ್ತೊಂದು ಹೀನ ಕೃತ್ಯ; ಸ್ನೇಹಿತರ ಎದುರೇ ಯುವತಿಯರ ಗ್ಯಾಂಗ್ ರೇಪ್!

delhi-rapeದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಸುರಕ್ಷಿತವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಇಬ್ಬರು ಯುವತಿಯರನ್ನು ಅವರ ಸ್ನೇಹಿತರ ಮುಂದೆಯೇ ದುಷ್ಕರ್ಮಿಗಳ  ತಂಡವೊಂದು ಸಾಮೂಹಿಕ ಅತ್ಯಾಚಾರ ಗೈದಿದೆ.

ದೆಹಲಿಯ ಅಮನ್ ವಿಹಾರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ನಿನ್ನೆ ರಾತ್ರಿ ಸುಮಾರು 8.30ರ ಹೊತ್ತಿನಲ್ಲಿ ಇಬ್ಬರು ಯುವತಿಯರು ತಮ್ಮ ಸ್ನೇಹಿತರೊಂದಿಗೆ ತೆರಳುತ್ತಿದ್ದಾಗ ಅವರನ್ನು  ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಅವರನ್ನು ಸಮೀಪದ ಮೆಟ್ರೋ ರೈಲು ನಿಲ್ದಾಣದ ಬಳಿ ಇರುವ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಅಮನ್ ವಿಹಾರ್ ಪ್ರದೇಶದಲ್ಲಿ ನಡೆದು ಸಾಗುತ್ತಿದ್ದ ಯುವತಿಯರನ್ನು ಕಂಡ ನಾಲ್ಕು ಮಂದಿ ದುಷ್ಕರ್ಮಿಗಳು ಕ್ಷುಲಕ ವಿಚಾರವಾಗಿ ಯುವಕರೊಂದಿಗೆ ಗಲಾಟೆ  ತೆಗೆದಿದ್ದಾರೆ. ಅಲ್ಲದೆ ನೋಡ ನೋಡುತ್ತಿದ್ದಂತೆಯೇ ಯುವಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಲ್ಲೇ ಇದ್ದ ಯುವತಿಯರು ಇದನ್ನು ತಡೆಯಲೆತ್ನಿಸಿದಾಗ ಅವರನ್ನು ಮೆಟ್ರೋ ನಿಲ್ದಾಣದ  ನಿರ್ಜನ ಪ್ರದೇಶಕ್ಕೆ ಕರೆತಂದು ಸ್ನೇಹಿತರ ಮುಂದೆಯೇ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ.

ಬಳಿಕ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಬೆದರಿಸಿ  ಪರಾರಿಯಾಗಿದ್ದಾರೆ.ಘಟನೆ ಬಳಿಕ ಆಘಾತಗೊಂಡಿದ್ದ ಯುವತಿಯರು ಪೋಷಕರ ನೆರವಿನೊಂದಿಗೆ ದೆಹಲಿ ಪೊಲೀಸರಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯರು ನೀಡಿದ  ಮಾಹಿತಿ ಮೇರೆಗೆ ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಇನ್ನು ಅತ್ಯಾಚಾರದಲ್ಲಿ ಈ ನಾಲ್ವರು ಮಾತ್ರ ಇದ್ದರೇ ಅಥವಾ ಐದನೇ ವ್ಯಕ್ತಿಯ ಕೈವಾಡ ಕೂಡ  ಇದೆಯೇ ಎಂಬುದರ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.

No Comments

Leave A Comment